ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋಟಾರು ವಾಹನ ಮಸೂದೆಗೆ ರಾಜ್ಯಸಭೆಯಲ್ಲಿ ಒಪ್ಪಿಗೆ

|
Google Oneindia Kannada News

ಬೆಂಗಳೂರು, ಜುಲೈ 31 : ಸಂಚಾರ ನಿಯಮ ಉಲ್ಲಂಘಟನೆ ಮಾಡಿದರೆ ಹೆಚ್ಚಿನ ಮೊತ್ತದ ದಂಡ ವಿಧಿಸುವ ಮೋಟಾರು ವಾಹನ ಮಸೂದೆ (ತಿದ್ದುಪಡಿ) 2019 ರಾಜ್ಯಸಭೆಯಲ್ಲಿ ಅನುಮೋದನೆಗೊಂಡಿದೆ. ಲೋಕಸಭೆಯಲ್ಲಿ ಈಗಾಗಲೇ ಮಸೂದೆಗೆ ಒಪ್ಪಿಗೆ ಸಿಕ್ಕಿತ್ತು.

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆಯ ಸಚಿವ ನಿತಿನ್ ಗಡ್ಕರಿ ಮಂಡನೆ ಮಾಡಿದ್ದ ಮಸೂದೆಗೆ ಬುಧವಾರ ರಾಜ್ಯಸಭೆ ಒಪ್ಪಿಗೆ ನೀಡಿದೆ. ಮಸೂದೆ ಪರವಾಗಿ 108, ವಿರುದ್ಧವಾಗಿ 13 ಮತಗಳು ಚಲಾವಣೆಗೊಂಡವು.

ಆಂಬ್ಯುಲೆನ್ಸ್‌ಗೆ ಹೋಗೋಕೆ ಜಾಗ ಬಿಡಲ್ವಾ ಹಾಗಾದರೆ ದಂಡ ಕಟ್ಟಿಆಂಬ್ಯುಲೆನ್ಸ್‌ಗೆ ಹೋಗೋಕೆ ಜಾಗ ಬಿಡಲ್ವಾ ಹಾಗಾದರೆ ದಂಡ ಕಟ್ಟಿ

ಮೋಟಾರು ವಾಹನ ಕಾಯ್ದೆ 1988ಕ್ಕೆ ತಿದ್ದುಪಡಿ ಮಾಡಿ ಲೋಕಸಭೆಯಲ್ಲಿ ಮಂಡನೆ ಮಾಡಲಾಗಿತ್ತು. 2017ರಲ್ಲಿಯೇ ಇದನ್ನು ಮಂಡನೆ ಮಾಡಲಾಗಿತ್ತು. ಆದರೆ, ರಾಜ್ಯಸಭೆಯಲ್ಲಿ ಅಂಗೀಕಾರಗೊಳ್ಳದ ಕಾರಣ 16ನೇ ಲೋಕಸಭೆಯಲ್ಲಿ ಮಸೂದೆಗೆ ಸೋಲುಂಟಾಗಿತ್ತು.

ವಾಹನಗಳಿಗೆ ಫಾಸ್ಟ್‌ಟ್ಯಾಗ್ ಕಡ್ಡಾಯ, ಇಲ್ಲ ದುಪ್ಪಟ್ಟು ಟೋಲ್ ಕಟ್ಟಿವಾಹನಗಳಿಗೆ ಫಾಸ್ಟ್‌ಟ್ಯಾಗ್ ಕಡ್ಡಾಯ, ಇಲ್ಲ ದುಪ್ಪಟ್ಟು ಟೋಲ್ ಕಟ್ಟಿ

Motor Vehicles Amendment Bill 2019 Clears In Rajya Sabha

2ನೇ ಬಾರಿಗೆ ಅಧಿಕಾರಕ್ಕೆ ಬಂದಿರುವ ನರೇಂದ್ರ ಮೋದಿ ಸರ್ಕಾರ ಮಸೂದೆಯನ್ನು ಮತ್ತೊಮ್ಮೆ ಲೋಕಸಭೆಯಲ್ಲಿ ಮಂಡಿಸಿ ಒಪ್ಪಿಗೆ ಪಡೆದಿತ್ತು. ರಾಜ್ಯಸಭೆಯಲ್ಲಿ ಬುಧವಾರ ಮಂಡನೆ ಅನುಮೋದನೆಗೊಂಡಿದ್ದು, ರಾಷ್ಟ್ರಪತಿಗಳ ಒಪ್ಪಿಗೆ ಬಳಿಕ ಅಧಿಕೃತವಾಗಿ ಜಾರಿಗೆ ಬರಲಿದೆ.

ಕರ್ನಾಟಕ, ಬೆಂಗಳೂರು ಒನ್ ಕೇಂದ್ರದಲ್ಲಿ ಎಲ್‌ಎಲ್ಆರ್ ಲಭ್ಯಕರ್ನಾಟಕ, ಬೆಂಗಳೂರು ಒನ್ ಕೇಂದ್ರದಲ್ಲಿ ಎಲ್‌ಎಲ್ಆರ್ ಲಭ್ಯ

ಸಂಚಾರ ನಿಯಮ ಉಲ್ಲಂಘನೆಗೆ ದುಪ್ಪಟ್ಟು ದಂಡವನ್ನು ವಿಧಿಸುವ ಅವಕಾಶವನ್ನು ಮಸೂದೆಯಲ್ಲಿ ನೀಡಲಾಗಿದೆ. ಈ ಮಸೂದೆ ಜಾರಿಗೆ ಬಂದರೆ ಸರ್ಕಾರ ಜನರ ವಿರೋಧವನ್ನು ಎದುರಿಸುವ ಸಾಧ್ಯತೆ ಇದೆ.

ದಂಡದ ವಿವರ : ಡಿಎಲ್ ಇಲ್ಲದೆ ವಾಹನ ಓಡಿಸಿದರೆ ವಿಧಿಸುತ್ತಿದ್ದ ದಂಡವನ್ನು 500 ರಿಂದ 5000ಕ್ಕೆ ಏರಿಕೆ ಮಾಡಲಾಗುತ್ತದೆ. ಟಿಕೆಟ್ ರಹಿತ ಪ್ರಯಾಣದ ದಂಡ 200 ರೂ. ನಿಂದ 500ಕ್ಕೆ ಏರಿಕೆಯಾಗಲಿದೆ.

ತ್ರಿಬಲ್ ರೈಡಿಂಗ್ ಮಾಡಿದರೆ ವಿಧಿಸುತ್ತಿದ್ದ 100 ರೂ. ದಂಡವನ್ನು 2 ಸಾವಿರಕ್ಕೆ ಏರಿಕೆ ಮಾಡಲಾಗುತ್ತದೆ. ಡಿಎಲ್ ಕ್ಯಾನ್ಸಲ್ ಮಾಡುವ ಅವಕಾಶವೂ ಇದೆ. ವಿಮೆ ಇಲ್ಲದೆ ವಾಹನ ಚಲಾಯಿಸಿದರೆ 1000 ರೂ. ಇದ್ದ ದಂಡದ ಮೊತ್ತ 2 ಸಾವಿರಕ್ಕೆ ಏರಿಕೆಯಾಗಲಿದೆ. ಸೀಟ್ ಬೆಲ್ಟ್ ಹಾಕಿಲ್ಲದಿದ್ದರೆ 1000 ರೂ. ದಂಡ ವಿಧಿಸುವ ಅವಕಾಶವಿದೆ.

English summary
Rajya Sabha on July 31, 2019 passed the Motor Vehicles (Amendment) Bill 2019. Bill get the 108 votes in favour and 13 against.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X