ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಅತ್ಯುತ್ತಮ ಮುಖ್ಯಮಂತ್ರಿ ಯಾರು? ಯಾರಿಗೆ ಎಷ್ಟು ಮಾರ್ಕ್ಸು?!

|
Google Oneindia Kannada News

ನವದೆಹಲಿ, ಆಗಸ್ಟ್ 20: ಭಾರತದ ಅತ್ಯುತ್ತಮ ಮುಖ್ಯಮಂತ್ರಿ ಯಾರು? ಯಾರ ಆಡಳಿತಕ್ಕೆ ಎಷ್ಟು ಅಂಕ ಕೊಡಬಹುದು?

ಇತ್ತೀಚೆಗೆ ನಡೆದ ''India Today-Karvy Mood of the Nation(MOTN)" ಸಮೀಕ್ಷೆಯ ಪ್ರಕಾರ, ಪ್ರಸ್ತುತ ಸಂದರ್ಭದಲ್ಲಿ ಭಾರತದ ನಂ.1 ಮುಖ್ಯಮಂತ್ರಿ ಯಾರು ಎಂದು ಕೇಳಿದರೆ ಅತೀ ಹೆಚ್ಚು ಜನ ಆಯ್ಕೆ ಮಾಡಿದ್ದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು!

ಉತ್ತಮ ಆಡಳಿತ ಕರ್ನಾಟಕ ನಂ.4: ಪಬ್ಲಿಕ್‌ ಅಫೇರ್ಸ್‌ ಸೆಂಟರ್‌ ವರದಿಉತ್ತಮ ಆಡಳಿತ ಕರ್ನಾಟಕ ನಂ.4: ಪಬ್ಲಿಕ್‌ ಅಫೇರ್ಸ್‌ ಸೆಂಟರ್‌ ವರದಿ

ಭಾರತದ ವಿವಿಧ ರಾಜ್ಯದ ಮುಖ್ಯಮಂತ್ರಿಗಳಲ್ಲಿ ಯಾರಿಗೆ ಜನರು ಎಷ್ಟು ಬೆಂಬಲ ನೀಡಿದ್ದಾರೆ ಎಂಬ ಬಗ್ಗೆಯೂ ಮೂಡ್ ಆಫ್ ದಿ ನೇಶನ್ ತಿಳಿಸಿದೆ. ಅರವಿಂದ್ ಕೇಜ್ರಿವಾಲ್, ನಿತೀಶ್ ಕುಮಾರ್ ಮತ್ತು ಯೋಗಿ ಆದಿತ್ಯನಾಥ್ ಅವರ ಬಗ್ಗೆ ಜನರಲ್ಲಿ ಉತ್ತಮ ಅಭಿಪ್ರಾಯವಿದ್ದರೆ, ಕರ್ನಾಟಕ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಬಗ್ಗೆ ಅಷ್ಟೇನೂ ಉತ್ತಮ ಅಭಿಪ್ರಾಯವಿದ್ದಂತಿಲ್ಲ.

ದೀದಿ ನಂ.1!

ದೀದಿ ನಂ.1!

ಪ್ರಧಾನಿ ನರೇಂದ್ರ ಮೋದಿಯವರಿಗೆ ಸೂಕ್ತ ಪ್ರತ್ಯುತ್ತರ, ಪ್ರತಿಸ್ಪರ್ಧೆ ನೀಡಬಲ್ಲ ಶಕ್ತಿ ಇರುವುದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಮಾತ್ರ ಎನ್ನಲಾಗುತ್ತಿದೆ. 34 ವರ್ಷಗಳ ಸಿಪಿಐಎಂ ಆಡಳಿತಕ್ಕೆ ಬ್ರೇಕ್ ಹಾಕಿದ ಮಮತಾ ದೀದಿ ಅವರ ಶಕ್ತಿಯನ್ನು ಜನರು ಕೊಂಡಾಡಿದ್ದಾರೆ. ಅದೂ ಅಲ್ಲದೆ 38 ಸಂಸದರನ್ನೂ ಹೊಂಡಿರುವ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಕೇಂದ್ರದಲ್ಲಿನ ಕಾಂಗ್ರೆಸ್ ಪಕ್ಷಕ್ಕೆ ಸರಿಸಮನಾಗಿ ನಿಲ್ಲಲು ಹೊರಟಿದೆ. ಈ ಎಲ್ಲಾ ಸಾಧನೆಗಳ ಶ್ರೇಯಸ್ಸನ್ನು ದೀದಿಗೆ ನೀಡಿರುವ ಕಾರಣ ಅವರು ನಂ.1 ಮುಖ್ಯಮಂತ್ರಿ.

ಈಗ ಲೋಕಸಭೆ ಚುನಾವಣೆ ನಡೆದರೆ ಬಿಜೆಪಿಗೆ ಬಹುಮತವಿಲ್ಲ!ಈಗ ಲೋಕಸಭೆ ಚುನಾವಣೆ ನಡೆದರೆ ಬಿಜೆಪಿಗೆ ಬಹುಮತವಿಲ್ಲ!

ಎರಡನೇ ಸ್ಥಾನಕ್ಕಾಗಿ ಇಬ್ಬರಿಗೆ ಪೈಪೋಟಿ

ಎರಡನೇ ಸ್ಥಾನಕ್ಕಾಗಿ ಇಬ್ಬರಿಗೆ ಪೈಪೋಟಿ

ಎರಡನೇ ಸ್ಥಾನಕ್ಕಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನಡುವೆ ಪೈಪೋಟಿ ಇದೆ. ಇಬ್ಬರನ್ನು ಶೇ. 10 ರಷ್ಟು ಜನರು ಉತ್ತಮ ಮುಖ್ಯಮಂತ್ರಿ ಎಂದು ಆರಿಸಿದ್ದಾರೆ. ಜೊತೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಶೇ.9 ಅಂಕ ಪಡೆದಿದ್ದಾರೆ.

ಕುಮಾರಸ್ವಾಮಿಯವರಿಗೆ ಎಷ್ಟನೇ ಸ್ಥಾನ?

ಕುಮಾರಸ್ವಾಮಿಯವರಿಗೆ ಎಷ್ಟನೇ ಸ್ಥಾನ?

ಕರ್ನಾಟಕ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಶೇ.3 ಅಂಕವನ್ನಷ್ಟೇ ಗಳಿಸಿ ಸುಮಾರು 9 ನೇ ಸ್ಥಾನದಲ್ಲಿದ್ದಾರೆ. ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡ ಅವರಿಗೆ ಶೇ. 7, ಛತ್ತೀಸ್ ಗಢ ಮುಖ್ಯಮಂತ್ರಿ ರಮಣ್ ಸಿಂಗ್ ಶೇ.5, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಶೇ.5 ಅಂಕಗಳನ್ನು ಪಡೆದಿದ್ದಾರೆ!

ಯಾರಿಗೆ ಎಷ್ಟು ಅಂಕ?

ಯಾರಿಗೆ ಎಷ್ಟು ಅಂಕ?

ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಶೇ.4, ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಶೇ. 4, ಕರ್ನಾಟಕ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಶೇ.3, ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್ ಶೇ.3, ಗೋವಾ ಮುಖ್ಯಮಂತ್ರಿ ಮನೋಹರ್ ಪರೀಕ್ಕರ್ ಶೇ.2, ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಶೇ.2, ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್ ಶೇ.2, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಶೇ.2, ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಶೇ.2 ಅಂಕ ಪಡೆದಿದ್ದಾರೆ.

English summary
India Today-Karvy Insights Mood of the Nation(MOTN) survey says West Bengal chief minister Mamata Banerjee is the best CM in the country. Here is the list of Best CMs of the country
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X