ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದರ್ ತೆರೇಸಾ ಉತ್ತರಾಧಿಕಾರಿ ಸಿಸ್ಟರ್ ನಿರ್ಮಲಾ ಇನ್ನಿಲ್ಲ

By Mahesh
|
Google Oneindia Kannada News

ಕೋಲ್ಕತ್ತಾ, ಜೂ.23: ಮದರ್ ತೆರೇಸಾ ಉತ್ತರಾಧಿಕಾರಿಯಾಗಿ ಮಿಷನರೀಸ್ ಆಫ್ ಚಾರಿಟಿ ನಿರ್ವಹಣೆ ಮಾಡಿದ್ದ ಸಿಸ್ಟರ್ ನಿರ್ಮಲಾ ಜೋಶಿ ಅವರು ಕೊನೆಯುಸಿರೆಳೆದಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು.

1997ರಲ್ಲಿ ಮದರ್ ತೆರೇಸಾ ಅವರಿಂದ ತೆರವಾದ ಸ್ಥಾನವನ್ನು ಸಿಸ್ಟರ್ ನಿರ್ಮಲಾ ತುಂಬಿದ್ದರು. ಮೃತರ ಅಂತ್ಯಕ್ರಿಯೆಯನ್ನು ಮಂಗಳವಾರ ಸಂಜೆ ನೆರವೇರಿಸುವ ಸಾಧ್ಯತೆಯಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಅನೇಕ ಗಣ್ಯರು ಸಿಸ್ಟರ್ ನಿರ್ಮಲಾ ಸಾವಿಗೆ ಕಂಬನಿ ಮಿಡಿದಿದ್ದಾರೆ.

 Mother Teresa's successor Sister Nirmala, passes away

ಜಾರ್ಖಂಡ್ ನ ರಾಂಚಿಯಲ್ಲಿ 1934ರ ಜುಲೈ 23ರಲ್ಲಿ ಜನಿಸಿದ ನಿರ್ಮಲಾ ಅವರ ತಂದೆ ನೇಪಾಳ ಮೂಲದ ಬ್ರಾಹ್ಮಣ ಯೋಧರಾಗಿದ್ದರು.

17ನೇ ವಯಸ್ಸಿಗೆ 'ಸಿಸ್ಟರ್' ಆಗಿ ಕ್ರೈಸ್ತ ಸನ್ಯಾಸಿಯಾದ ನಿರ್ಮಲಾ ಅವರು ಮದರ್ ತೆರೇಸಾ ಹಾಕಿಕೊಟ್ಟ ಮಾರ್ಗದಲ್ಲೇ ಮಿಷನರಿ ಆಫ್ ಚಾರಿಟಿ ನಡೆಸಿದ್ದರು. 2009 ರಲ್ಲಿ ಅನಾರೋಗ್ಯದ ಕಾರಣ ವಿಷನರೀಸ್ ಮುಖ್ಯಸ್ಥೆ ಸ್ಥಾನದಿಂದ ಸಿಸ್ಟರ್ ನಿರ್ಮಲಾ ಕೆಳಗಿಳಿದರು. 2009ರ ಮಾರ್ಚ್ 24ರಂದು ಅಧಿಕಾರವನ್ನು ಸಿಸ್ಟರ್ ಮೇರಿ ಪ್ರೇಮಾ ಅವರಿಗೆ ವಹಿಸಿದ್ದರು.
English summary
Sister Nirmala Joshi, the former superior general of the Missionaries of Charity, passes away at 81. Sister Nirmala had replaced Mother Teresa as the superior general in 1997.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X