ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಮತಾ ಬ್ಯಾನರ್ಜಿ ಪ್ರಧಾನಿ ಅಭ್ಯರ್ಥಿಯಾದರೆ ತಪ್ಪೇನು? : ದೇವೇಗೌಡ

By Gururaj
|
Google Oneindia Kannada News

Recommended Video

ಮಮತಾ ಬ್ಯಾನರ್ಜಿ ಅಥವಾ ಮಾಯಾವತಿ ದೇಶದ ಪ್ರಧಾನಿಯಾದ್ರೆ ತಪ್ಪೇನು ಎಂದು ಪ್ರಶ್ನಿಸಿದ ಎಚ್.ಡಿ.ದೇವೇಗೌಡ

ಬೆಂಗಳೂರು, ಆಗಸ್ಟ್ 06 : 'ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರನ್ನು ಪಧಾನಿ ಅಭ್ಯರ್ಥಿಯಾಗಿ ಮಾಡಿದರೆ ತಪ್ಪೇನು?' ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಪ್ರಶ್ನಿಸಿದ್ದಾರೆ.

2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಎದುರಿಸಲು ತೃತೀಯ ರಂಗ ರಚನೆಯಾಗುವ ಬಗ್ಗೆ ಮಾತುಕತೆಗಳು ನಡೆಯುತ್ತಿವೆ. ಈ ಸಂದರ್ಭದಲ್ಲಿ ಎಚ್.ಡಿ.ದೇವೇಗೌಡರು ನೀಡಿರುವ ಈ ಹೇಳಿಕೆ ಅಚ್ಚರಿಗೆ ಕಾರಣವಾಗಿದೆ, ರಾಷ್ಟ್ರ ರಾಜಕಾರಣದಲ್ಲಿ ಈ ಬಗ್ಗೆ ಚರ್ಚೆಗಳು ಆರಂಭವಾಗಿವೆ.

ನಾನು ಪ್ರಧಾನಿ ಹುದ್ದೆ ಆಕಾಂಕ್ಷಿಯಲ್ಲ : ಮಮತಾ ಬ್ಯಾನರ್ಜಿನಾನು ಪ್ರಧಾನಿ ಹುದ್ದೆ ಆಕಾಂಕ್ಷಿಯಲ್ಲ : ಮಮತಾ ಬ್ಯಾನರ್ಜಿ

ಪಿಟಿಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಎಚ್.ಡಿ.ದೇವೇಗೌಡರು ಈ ಕುರಿತು ಮಾತನಾಡಿದ್ದಾರೆ. 'ತೃತೀಯ ರಂಗ ರಚನೆ ವಿಚಾರದಲ್ಲಿ ಕಾಂಗ್ರೆಸ್ ಮಹತ್ವದ ಪಾತ್ರ ವಹಿಸುತ್ತದೆ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಅದು ಏನು ಮಾಡುತ್ತದೆ ಕಾದು ನೋಡಬೇಕು' ಎಂದು ದೇವೇಗೌಡರು ಹೇಳಿದ್ದಾರೆ.

ಆಕ್ರಮಣಕಾರಿ ಆಟ ಬಿಟ್ಟು, ರಕ್ಷಣಾತ್ಮಕ ಆಟಕ್ಕೆ ಏಕೆ ರಾಹುಲ್ ಇಳಿದಿದ್ದಾರೆ?ಆಕ್ರಮಣಕಾರಿ ಆಟ ಬಿಟ್ಟು, ರಕ್ಷಣಾತ್ಮಕ ಆಟಕ್ಕೆ ಏಕೆ ರಾಹುಲ್ ಇಳಿದಿದ್ದಾರೆ?

'ತೃತಿಯ ರಂಗ ರಚನೆ ವಿಚಾರ ಇನ್ನೂ ಪ್ರಾಥಮಿಕ ಹಂತದಲ್ಲಿದೆ. ಮಮತಾ ಬ್ಯಾನರ್ಜಿ ಅವರು ಬಿಜೆಪಿಯೇತರ ಪಕ್ಷಗಳನ್ನು ಒಂದು ಗೂಡಿಸಲು ಪ್ರಯತ್ನ ನಡೆಸುತ್ತಿದ್ದಾರೆ' ಎಂದು ದೇವೇಗೌಡರು ಸಂದರ್ಶನದಲ್ಲಿ ಮಾತನಾಡಿದ್ದಾರೆ...

ಮಹಿಳೆಯರು ಏಕೆ ಪ್ರಧಾನಿಯಾಗಬಾರದು?

ಮಹಿಳೆಯರು ಏಕೆ ಪ್ರಧಾನಿಯಾಗಬಾರದು?

'ಮಮತಾ ಬ್ಯಾನರ್ಜಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಿದರೆ ಸ್ವಾಗತ. ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿ 17 ವರ್ಷ ದೇಶವನ್ನು ಆಳಲಿಲ್ಲವೇ?. ನಾವು (ಪುರುಷರು) ಮಾತ್ರ ಏಕೆ ಪ್ರಧಾನಿಯಾಗಬೇಕು?. ಮಮತಾ ಅಥವ ಮಾಯಾವತಿ ಏಕೆ ಆಗಬಾರದು?' ಎಂದು ದೇವೇಗೌಡರು ಪ್ರಶ್ನಿಸಿದ್ದಾರೆ.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಈ ಹೇಳಿಕೆ ಬಗ್ಗೆ ರಾಷ್ಟ್ರ ರಾಜಕಾರಣದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಮಹಿಳೆ ಪ್ರಧಾನಿಯಾಗುವುದಕ್ಕೆ ದೇವೇಗೌಡರ ಸಹಮತವಿದೆ ಎಂಬ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ.

'ಬಿಜೆಪಿ ಎದುರಿಸುವ ಶಕ್ತಿ ಬೇಕು'

'ಬಿಜೆಪಿ ಎದುರಿಸುವ ಶಕ್ತಿ ಬೇಕು'

'ದೇಶದಲ್ಲಿ ಆತಂಕದ ವಾತಾವರಣವಿದೆ. ಉತ್ತರ ಪ್ರದೇಶ, ಬಿಹಾರ ಮತ್ತು ಗುಜರಾತ್ ರಾಜ್ಯಗಳಲ್ಲಿ ಅಲ್ಪಸಂಖ್ಯಾತರಿಗೆ ಉಸಿರುಗಟ್ಟಿಸುವ ವಾತಾವರಣ ನಿರ್ಮಾಣವಾಗಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಒಂದು ಒಗ್ಗಟ್ಟಿನ ಶಕ್ತಿಯ ಅವಶ್ಯಕತೆ ಇದೆ' ಎಂದು ದೇವೇಗೌಡರು ಹೇಳಿದರು.

'ವಿವಿಧ ರಾಜ್ಯದಲ್ಲಿರುವ ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸಲು ಜೆಡಿಎಸ್ ಯಾವ ಪ್ರಯತ್ನವನ್ನು ಮಾಡಿಲ್ಲ. ಆದರೆ, ಪ್ರಾದೇಶಿಕ ಪಕ್ಷಗಳು ಬಿಜೆಪಿಯನ್ನು ಎದುರಿಸಲು ಇತರ ಪಕ್ಷಗಳ ಜೊತೆ ಕೈ ಜೋಡಿಸಬೇಕು' ಎಂದು ದೇವೇಗೌಡರು ತಿಳಿಸಿದರು.

ತೃತೀಯ ರಂಗ ರಚನೆ?

ತೃತೀಯ ರಂಗ ರಚನೆ?

'ತೃತೀಯ ರಂಗ ರಚನೆ ಬಗ್ಗೆ ಮಾತನಾಡಲು ಇದು ಸಕಾಲವಲ್ಲ. ಈಗ ಈ ಬಗ್ಗೆ ಮಾತುಕತೆ ಮಾತ್ರ ನಡೆಯುತ್ತಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಎಲ್ಲಾ ಬಿಜೆಪಿಯೇತರ ಪಕ್ಷಗಳನ್ನು ಒಗ್ಗೂಡಿಸಲು ಪ್ರಯತ್ನವನ್ನು ನಡೆಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಈ ವಿಚಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಅದು ಏನು ಮಾಡುತ್ತದೆ?' ಎಂದು ನೋಡಬೇಕು ಎಂದು ದೇವೇಗೌಡರು ಹೇಳಿದರು.

ಚುನಾವಣೆ ನಂತರದ ವಿಷಯ

ಚುನಾವಣೆ ನಂತರದ ವಿಷಯ

ಕಾಂಗ್ರೆಸ್‌ 2019ರ ಲೋಕಸಭೆ ಚುನಾವಣೆ ತಯಾರಿ ಆರಂಭಿಸಿದೆ. ಆದರೆ, ಚುನಾವಣೆಗೆ ಮುನ್ನ ಪ್ರಧಾನಿ ಅಭ್ಯರ್ಥಿ ಘೋಷಣೆಗೆ ಕಾಂಗ್ರೆಸ್ ಸಹಮತ ವ್ಯಕ್ತಪಡಿಸಿಲ್ಲ. ಚುನಾವಣೆ ಮುಗಿದ ಬಳಿಕ ಈ ಬಗ್ಗೆ ಗಮನ ಹರಿಸಲು ಪಕ್ಷ ನಿರ್ಧರಿಸಿದೆ.

ಎಚ್.ಡಿ.ದೇವೇಗೌಡ ನೇತೃತ್ವದ ಜೆಡಿಎಸ್ ಕರ್ನಾಟಕದಲ್ಲಿ ಕಾಂಗ್ರೆಸ್‌ ಜೊತೆ ಸೇರಿ ಸಮ್ಮಿಶ್ರ ಸರ್ಕಾರ ರಚನೆ ಮಾಡಿದೆ. ಆದ್ದರಿಂದ, ದೇವೇಗೌಡರು ನೀಡಿರುವ ಹೇಳಿಕೆಗೆ ಮಹತ್ವ ಬಂದಿದೆ. ತೃತೀಯ ರಂಗ ರಚನೆಯಲ್ಲಿ ಜೆಡಿಎಸ್‌ ಸಹ ಪ್ರಮುಖ ಪಾತ್ರ ವಹಿಸಲಿದೆಯೇ? ಕಾದು ನೋಡಬೇಕು.

ಬಿಜೆಪಿಯೇತರ ಶಕ್ತಿ

ಬಿಜೆಪಿಯೇತರ ಶಕ್ತಿ

'ದೇಶದಲ್ಲಿ ಬಿಜೆಪಿಯೇತರ ಶಕ್ತಿ ಬೇಕು ಎಂಬ ಕೂಗು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಾಂಗ್ರೆಸ್ ಪಕ್ಷ ಈ ವಿಚಾರದಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಇನ್ನೂ ಎರಡು ಮೂರು ತಿಂಗಳಿನಲ್ಲಿ ಈ ಕುರಿತು ಏನು ಬೆಳವಣಿಗೆ ನಡೆಯಲಿದೆ?' ಎಂದು ಕಾದು ನೋಡುತ್ತೇನೆ ಎಂದು ದೇವೇಗೌಡರು ಹೇಳಿದರು.

'2019ರಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್‌ ಜೊತೆ ಸೇರಿ ಲೋಕಸಭೆ ಚುನಾವಣೆ ಎದುರಿಸಲಾಗುತ್ತದೆ. ಆದರೆ, ಸೀಟುಗಳ ಹಂಚಿಕೆ ವಿಚಾರದಲ್ಲಿ ಇನ್ನೂ ತೀರ್ಮಾನ ಕೈಗೊಂಡಿಲ್ಲ' ಎಂದು ದೇವೇಗೌಡರು ಸ್ಪಷ್ಟಪಡಿಸಿದರು.

English summary
In a interview to PTI Former PM and JD(S) supremo H.D.Deve Gowda said that, Most welcome if Mamata is projected as PM. Indira Gandhi ruled as prime minister for 17 years. Why should we (men) alone become PM? Why not Mamata or Mayawati?.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X