ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭ್ರಷ್ಟ ವಿರೋಧಿ ಆಪ್ ಸೇರಿದ ಮೋಸ್ಟ್ ವಾಂಟೆಡ್!

By Prasad
|
Google Oneindia Kannada News

ಭುವನೇಶ್ವರ, ಮಾ. 4 : ಕೆಲ ದಿನಗಳ ಹಿಂದೆ ಅಮಾನತಾಗಿರುವ ಮಾವೋವಾದಿ ಸೋನಿ ಸೋರಿ ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ಆಮ್ ಆದ್ಮಿ ಪಕ್ಷ ಸೇರಿದ ನಂತರ, ಒರಿಸ್ಸಾದ 'ಮೋಸ್ಟ್ ವಾಂಟೆಡ್' ಮಾವೋವಾದಿ ನಾಯಕ ಸಬ್ಯಸಾಚಿ ಪಾಂಡಾ ಆಪ್ ಸೇರಿರುವುದು ಅನೇಕರ ಹುಬ್ಬೇರುವಂತೆ ಮಾಡಿದೆ.

ಒರಿಸ್ಸಾ ರಾಜ್ಯದ ನಯಾಘರ್ ಜಿಲ್ಲೆಯ ಮಯೂರಝಾಲಿಯಾ ಗ್ರಾಮದವರಾಗಿರುವ ಪಾಂಡಾಗೆ ಆಮ್ ಆದ್ಮಿ ಪಕ್ಷ ಪ್ರಾಥಮಿಕ ಸದಸ್ಯತ್ವವನ್ನು ನೀಡಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಸಬ್ಯಸಾಚಿ ಪಾಂಡಾ ಗಣಿತದಲ್ಲಿ ಪದವಿಯನ್ನು ಪಡೆದಿದ್ದಾರೆ.

"ಪಕ್ಷದ ಸಂವಿಧಾನದ ಚೌಕಟ್ಟಿನಲ್ಲಿ ಕೆಲಸ ಮಾಡಲು ಸಿದ್ಧರಿರುವ ಯಾರನ್ನೇ ಆಗಲಿ ಪಕ್ಷದಲ್ಲಿ ಸೇರಿಸಿಕೊಳ್ಳಲು ನಾವು ವಿರೋಧಿಸುವುದಿಲ್ಲ" ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಿಶಿಕಾಂತ ಮೋಹಾಪಾತ್ರ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ. ಬಿಜು ಜನತಾ ದಳದಲ್ಲಿ ದಾರಿ ಮಾಡಿಕೊಳ್ಳಲು ಪಾಂಡಾ ವಿಫಲರಾದನಂತರ ಆಪ್ ಜೊತೆ ಅವರ ಮಾತುಕತೆ ನಡೆದೇಯಿತ್ತು.

'Most wanted' Maoist leader Sabyasachi Panda joins AAP

ಫೆಬ್ರವರಿ 15ರಂದು ಒರಿಸ್ಸಾದ ಗಂಜಾಂ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿಯೊಡನೆ ಗುಂಡಿನ ಕಾಳಗ ನಡೆದ ಸಂದರ್ಭದಲ್ಲಿ ಗಡೀಪಾರಾಗಿರುವ ಸಬ್ಯಸಾಚಿ ಪಾಂಡಾ ಅವರು ಪೊಲೀಸರ ಕಣ್ಣುತಪ್ಪಿಸಿ ಮತ್ತೊಮ್ಮೆ ಪರಾರಿಯಾಗಿದ್ದರು. ಮಾವೋವಾದಿಗಳ ಕ್ಯಾಂಪ್ ಮೇಲೆ ಭದ್ರತಾ ಸಿಬ್ಬಂದಿ ದಾಳಿ ನಡೆಸಿದಾಗ, ಪ್ರತಿದಾಳಿ ನಡೆಸಿ ಪಾಂಡಾ ಅಲ್ಲಿಂದ ತಪ್ಪಿಸಿಕೊಂಡಿದ್ದರು.

ಒಡಿಶಾ ಮಾವೋಬಾದಿ ಪಕ್ಷದ ನಾಯಕರಾಗಿರುವ ಪಾಂಡಾ ಮತ್ತಿತರ ಎಂಟು ಜನರು ಆ ಸಂದರ್ಭದಲ್ಲಿ ಕ್ಯಾಂಪ್ ನಲ್ಲಿ ಉಪಸ್ಥಿತರಿದ್ದರು. ಗುಂಡಿನ ದಾಳಿಯಲ್ಲಿ ಕೆಲಸ ಮಾವೋವಾದಿಗಳು ಹತರಾಗಿರಬಹುದು ಎಂದು ವರದಿ ಹೇಳಿದೆ. 45 ವರ್ಷದ ಸಬ್ಯಸಾಚಿ ಪಾಂಡಾ ತಲೆಗೆ 5 ಲಕ್ಷ ರು. ಬಹುಮಾನ ಕಟ್ಟಲಾಗಿದೆ. 2012ರಲ್ಲಿ ಇಬ್ಬರು ಇಟಲಿ ನಾಗರಿಕರನ್ನು ಅಪಹರಿಸಿದ ಪ್ರಕರಣದಲ್ಲಿ ಸಬ್ಯಸಾಚಿ ಪಾಂಡಾ ಭಾಗಿಯಾಗಿದ್ದರು. ನಂತರ ಆ ವಿದೇಶಿಯರನ್ನು ಬಿಡುಗಡೆ ಮಾಡಲಾಗಿತ್ತು.

English summary
After tribal activist and suspected Maoist Soni Sori joined Aam Aadmi Party (AAP) few days ago, the latest entrant to join the party is another "most wanted" Maoist leader Sabyasachi Panda, from eastern Odisha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X