ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

50 ಲಕ್ಷ ವಲಸೆ ಕಾರ್ಮಿಕರನ್ನು 'ಗೂಡು' ಮುಟ್ಟಿಸಿದ ಶ್ರಮಿಕ್ ರೈಲು!

|
Google Oneindia Kannada News

ನವದೆಹಲಿ, ಮೇ.29: ನೊವೆಲ್ ಕೊರೊನಾ ವೈರಸ್ ಸೋಂಕು ಹರಡುವಿಕೆ ನಡುವೆ ಗೂಡು ಬಿಟ್ಟ ವಲಸೆ ಕಾರ್ಮಿಕರನ್ನು ತಮ್ಮೂರಿಗೆ ಸೇರಿಸಲು ಭಾರತೀಯ ರೈಲ್ವೆ ಸಚಿವಾಲಯವು ಶ್ರಮಿಕ್ ರೈಲುಗಳ ಸಂಚಾರವನ್ನು ಆರಂಭಿಸಿದ್ದು ಆಗಿದೆ.

Recommended Video

ಕಳ್ಳ ಮಾರ್ಗದಲ್ಲಿ ಬರುವವರ ಮೇಲೆ ಹದ್ದಿನ ಕಣ್ಣು ಇರಿಸಲಾಗಿದೆ | Oneindia Kannada

ದೇಶಾದ್ಯಂತ 3,736 ಶ್ರಮಿಕ್ ರೈಲುಗಳು ಸಂಚರಿಸಿದ್ದು, ಈ ಪೈಕಿ ಶೇ.40ರಷ್ಟು ರೈಲುಗಳು ಮಹಾರಾಷ್ಟ್ರ ಮತ್ತು ಗುಜರಾತ್ ನಿಂದಲೇ ಸಂಚರಿಸಿವೆ. ಗುಜರಾತ್ ನಿಂದ 979 ಶ್ರಮಿಕ್ ರೈಲು ಹಾಗೂ ಮಹಾರಾಷ್ಟ್ರದಿಂದ 695 ರೈಲುಗಳು ಸಂಚರಿಸಿವೆ.

5 ರಾಜ್ಯಗಳ ವಿಮಾನ, ರೈಲು, ವಾಹನಕ್ಕೆ ನಿರ್ಬಂಧ ಹೇರಿದ ಕರ್ನಾಟಕ5 ರಾಜ್ಯಗಳ ವಿಮಾನ, ರೈಲು, ವಾಹನಕ್ಕೆ ನಿರ್ಬಂಧ ಹೇರಿದ ಕರ್ನಾಟಕ

ಗುರುವಾರದ ಅಂಕಿ-ಅಂಶಗಳ ಪ್ರಕಾರ 50 ಲಕ್ಷಕ್ಕೂ ಅಧಿಕ ಕಾರ್ಮಿಕರನ್ನು ತಮ್ಮೂರಿಗೆ ತಲುಪಿಸುವ ಕಾರ್ಯ ನಡೆದಿದೆ. ಉತ್ತರ ಪ್ರದೇಶ ಮತ್ತು ಬಿಹಾರ ಮೂಲದ ಕಾರ್ಮಿಕರೇ ಅತಿಹೆಚ್ಚು ಸಂಖ್ಯೆಯಲ್ಲಿ ಮಹಾರಾಷ್ಟ್ರ ಮತ್ತು ಗುಜರಾತ್ ಗಳಿಗೆ ಕೆಲಸ ಅರಿಸಿಕೊಂಡು ಹೋಗಿದ್ದರು ಎನ್ನುವುದು ಅಂಕಿ-ಅಂಶಗಳಲ್ಲಿ ತಿಳಿದು ಬಂದಿದೆ. ದೇಶಾದ್ಯಂತ ಶ್ರಮಿಕ್ ರೈಲುಗಳ ಮೂಲಕ ಸುಮಾರು 50 ಲಕ್ಷ ವಲಸೆ ಕಾರ್ಮಿಕರನ್ನು ತವರಿಗೆ ಸೇರಿಸಿರುವ ಕೆಲಸವು ಖುಷಿ ಕೊಟ್ಟಿದೆ ಎಂದು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯೆಲ್ ಟ್ವೀಟ್ ಮಾಡಿದ್ದಾರೆ.

ಶೇ.75ರಷ್ಟು ರೈಲುಗಳು ಉತ್ತರ ಪ್ರದೇಶ, ಬಿಹಾರಕ್ಕೆ ಸಂಚಾರ

ಶೇ.75ರಷ್ಟು ರೈಲುಗಳು ಉತ್ತರ ಪ್ರದೇಶ, ಬಿಹಾರಕ್ಕೆ ಸಂಚಾರ

ಮಹಾರಾಷ್ಟ್ರ ಮತ್ತು ಗುಜರಾತ್ ಗಳಿಗೆ ಕೆಲಸ ಹುಡುಕಿಕೊಂಡು ವಲಸೆ ಹೋದ ಕಾರ್ಮಿಕರಲ್ಲಿ ಬಹುತೇಕ ಜನರು ಎರಡು ರಾಜ್ಯಕ್ಕೆ ಸೇರಿದವರೇ ಆಗಿದ್ದಾರೆ. ಗುಜರಾತ್ ಹಾಗೂ ಮಹಾರಾಷ್ಟ್ರಗಳಿಂದ ಆರಂಭವಾದ ಶೇ.75ರಷ್ಟು ಶ್ರಮಿಕ್ ರೈಲುಗಳು ಉತ್ತರ ಪ್ರದೇಶ ಮತ್ತು ಬಿಹಾರಕ್ಕೆ ಸಂಚರಿಸಿರುವುದು ಇದಕ್ಕೆ ಸಾಕ್ಷಿಯಾಗಿದೆ.

ಎರಡು ರಾಜ್ಯಗಳಿಗೆ ಸಂಚರಿಸಿದ ಶ್ರಮಿಕ್ ರೈಲುಗಳು

ಎರಡು ರಾಜ್ಯಗಳಿಗೆ ಸಂಚರಿಸಿದ ಶ್ರಮಿಕ್ ರೈಲುಗಳು

ದೇಶಾದ್ಯಂತ ವಲಸೆ ಹೋಗಿರುವ ಕಾರ್ಮಿಕರಲ್ಲಿ ಬಿಹಾರ ಮತ್ತು ಉತ್ತರ ಪ್ರದೇಶ ಮೂಲದವರೇ ಹೆಚ್ಚಾಗಿದ್ದಾರೆ. ಗುರುವಾರದ ಅಂಕಿ-ಅಂಶಗಳ ಪ್ರಕಾರ ಉತ್ತರ ಪ್ರದೇಶಕ್ಕೆ ಇದುವರೆಗೂ 1,531 ಶ್ರೈಮಿಕ್ ರೈಲುಗಳು ಸಂಚರಿಸಿದ್ದು, 20,47,000 ವಲಸೆ ಕಾರ್ಮಿಕರು ತವರಿಗೆ ವಾಪಸ್ಸಾಗಿದ್ದಾರೆ. ಇನ್ನು, ಬಿಹಾರಕ್ಕೆ ಈವರೆಗೂ 1,296 ಶ್ರಮಿಕ್ ರೈಲುಗಳು ಸಂಚರಿಸಿದ್ದು, 17,34,000 ವಲಸೆ ಕಾರ್ಮಿಕರು ತವರು ಸೇರಿದ್ದಾರೆ.

3 ರಾಜ್ಯಗಳಿಂದ ಪಶ್ಚಿಮ ಬಂಗಾಳಕ್ಕೆ ರೈಲುಗಳ ಸಂಚಾರ

3 ರಾಜ್ಯಗಳಿಂದ ಪಶ್ಚಿಮ ಬಂಗಾಳಕ್ಕೆ ರೈಲುಗಳ ಸಂಚಾರ

ಕೊರೊನಾ ವೈರಸ್ ಹಾವಳಿ ನಡುವೆ ವಲಸೆ ಕಾರ್ಮಿಕರಿಗಾಗಿ ಸಂಚರಿಸಿದ ಶ್ರಮಿಕ್ ರೈಲುಗಳಿಗೂ ಪಶ್ಚಿಮ ಬಂಗಾಳದಲ್ಲಿ ಆರಂಭದಲ್ಲಿ ಅನುಮತಿ ನೀಡಿರಲಿಲ್ಲ. ಇದುವರೆಗೂ ರಾಜ್ಯದಲ್ಲಿ 75 ರೈಲುಗಳ ಸಂಚಾರಕ್ಕಷ್ಟೇ ಅನುಮತಿ ನೀಡಲಾಗಿತ್ತು. ಜಮ್ಮು-ಕಾಶ್ಮೀರ, ಬಿಹಾರ ಮತ್ತು ರಾಜಸ್ಥಾನದಿಂದ ಆಗಮಿಸಿದ ರೈಲುಗಳಿಗೆ ಮಾತ್ರ ಪಶ್ಚಿಮ ಬಂಗಾಳದಲ್ಲಿ ಪ್ರವೇಶಿಸಲು ಅನುಮತಿ ನೀಡಲಾಗಿತ್ತು.

ಶ್ರಮಿಕ್ ರೈಲುಗಳ ಪ್ರವೇಶಕ್ಕೆ ಯಾವ ರಾಜ್ಯಗಳಲ್ಲಿ ಅನುಮತಿ

ಶ್ರಮಿಕ್ ರೈಲುಗಳ ಪ್ರವೇಶಕ್ಕೆ ಯಾವ ರಾಜ್ಯಗಳಲ್ಲಿ ಅನುಮತಿ

ದೇಶಾದ್ಯಂತ 3,736 ಶ್ರಮಿಕ್ ರೈಲುಗಳು ಸಂಚಾರ ನಡೆಸಿವೆ. ಈ ಪೈಕಿ ಉತ್ತರ ಪ್ರದೇಶ, ಬಿಹಾರವನ್ನು ಹೊರತುಪಡಿಸಿ ಛತ್ತೀಸ್ ಗಢಕ್ಕೆ 53, ರಾಜಸ್ಥಾನಕ್ಕೆ 45, ಒಡಿಶಾಕ್ಕೆ 159, ಕೇರಳಕ್ಕೆ 9, ಮಹಾರಾಷ್ಟ್ರಕ್ಕೆ 3, ನವದೆಹಲಿಗೆ 2 ಹಾಗೂ ಪಂಜಾಬ್, ರಾಜಸ್ಥಾನ, ಕರ್ನಾಟಕ ಮತ್ತು ಗುಜರಾತ್ ರಾಜ್ಯಗಳು ಈವರೆಗೂ ಒಂದೊಂದು ಶ್ರಮಿಕ್ ರೈಲುಗಳಿಗೆ ಪ್ರವೇಶವನ್ನು ನೀಡಿವೆ.

English summary
Most Shramik Trains Run Between Gujarat, Maharastra To Bihar And Uttar Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X