ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವಿಡ್ 19: ಭಾರತದಲ್ಲಿ 'ರೆಮ್‌ಡೆಸಿವಿರ್' ಔಷಧಕ್ಕೆ ಸಿಕ್ಕಿತು ಅನುಮತಿ

|
Google Oneindia Kannada News

ನವದೆಹಲಿ, ಜೂನ್ 2: ಆಂಟಿ ವೈರಲ್ ಗುಣ ಹೊಂದಿರುವ ರೆಮ್‌ಡೆಸಿವಿರ್ ಔಷಧವನ್ನು ಕೊವಿಡ್ 19 ರೋಗಕ್ಕೆ ಬಳಸಿಕೊಳ್ಳಬಹುದು ಎಂದು ಭಾರತೀಯ ಉನ್ನತ ಔಷಧ ನಿಯಂತ್ರಣ ಸಂಸ್ಥೆ ಒಪ್ಪಿಗೆ ನೀಡಿದೆ. ವಿಶ್ವದಲ್ಲಿ ಅತಿ ಹೆಚ್ಚು ಪ್ರಯೋಗಗಳನ್ನು ಮಾಡಿದ ಸೂಕ್ಷ್ಮವಾಗಿ ವೀಕ್ಷಿಸಲ್ಪಟ್ಟ ಔಷಧಗಳಲ್ಲಿ ಇದೂ ಕೂಡ ಒಂದು. ಈ ಔಷಧವನ್ನು ಕೊವಿಡ್ 19 ರೋಗಿಗಳಿಗೆ ನೀಡಲು ಅನುಮತಿ ದೊರೆತಿದೆ.

ಈ ಔಷಧವನ್ನು ಅಮೆರಿಕದ ಭಯೋಫಾರ್ಮಾ ತಯಾರಿಸಿದೆ. ಇದನ್ನು ಮುಂಬೈ ಮೂಲದ ಕ್ಲಿನೀರಿಯಾ ಗ್ಲೋಬಲ್ ಸರ್ವೀಸಸ್‌ನಲ್ಲಿ ತಯಾರಿಸಲಾಗುತ್ತದೆ. ಹತ್ತು ದಿನಗಳ ಕಾಲ ಕ್ಲಿನಿಕಲ್ ಟ್ರಯಲ್ ನಡೆದಿತ್ತು. ಈ ಔಷಧವನ್ನು ಐದು ದಿನ ರೋಗಿಗಳಿಗೆ ನೀಡುವುದರಿಂದ ಸಾಕಷ್ಟು ಹಣವನ್ನು ಉಳಿತಾಯ ಮಾಡಬಹುದಾಗಿದೆ.

ಜುಬಿಲಿಯಂಟ್ ಕಾರ್ಖಾನೆಯಿಂದ ಕೊರೊನಾಗೆ ಲಸಿಕೆ ತಯಾರಿಕೆಜುಬಿಲಿಯಂಟ್ ಕಾರ್ಖಾನೆಯಿಂದ ಕೊರೊನಾಗೆ ಲಸಿಕೆ ತಯಾರಿಕೆ

ಯಾರಿಗೆ ಯಾವ ಔಷಧಗಳನ್ನು ನೀಡಲಾಗಿದೆ ಎಂಬುದು ಅಧ್ಯಯನ ಕೈಗೊಂಡವರಾಗಲಿ, ರೋಗಿಗಳಿಗಾಗಲಿ ತಿಳಿಸಿರಲಿಲ್ಲ. ರೆಮ್‌ಡೆಸೆವಿರ್ ಔಷಧವನ್ನು ನೀಡಲಾಗಿದ್ದ ರೋಗಿಗಳು ಕಡಿಮೆ ಅವಧಿಯಲ್ಲಿ ಚೇತರಿಸಿಕೊಂಡಿದ್ದರು ಎಂದು ಅಧ್ಯಯನ ವರದಿ ತಿಳಿಸಿದೆ.

ಫೆಬ್ರವರಿ 21 ರಂದು ಆರಂಭವಾಗಿದ್ದ ಕ್ಲಿನಿಕಲ್ ಟ್ರಯಲ್

ಫೆಬ್ರವರಿ 21 ರಂದು ಆರಂಭವಾಗಿದ್ದ ಕ್ಲಿನಿಕಲ್ ಟ್ರಯಲ್

ಕಳೆದ ಫೆಬ್ರವರಿ 21 ರಂದು ಆರಂಭವಾಗಿದ್ದ ಕ್ಲಿನಿಕಲ್ ಟ್ರಯಲ್ 10 ದಿನಗಳ ಕಾಲ ನಡೆದಿತ್ತು. 10 ದೇಶಗಳ 1063 ರೋಗಿಗಳು ಅಧ್ಯಯನದ ಭಾಗವಾಗಿದ್ದರು. ಈ ರೋಗಿಗಳ ಪೈಕಿ ಕೆಲವರಿಗೆ ಔಷಧ ನೀಡಲಾಗಿದ್ದರೆ ಇನ್ನೂ ಕೆಲವರಿಗೆ ರೆಮ್‌ಡೆಸೆವಿರ್ ಹೊರತುಪಡಿಸಿ ಇತರೆ ಔಷಧಗಳನ್ನು ನೀಡಲಾಗಿತ್ತು.

ರೆಮ್‌ಡೆಸಿವಿರ್ ನಿಂದ ಭರವಸೆ

ರೆಮ್‌ಡೆಸಿವಿರ್ ನಿಂದ ಭರವಸೆ

ಕೊವಿಡ್ 19 ಚಿಕಿತ್ಸೆಯಲ್ಲಿ ವೈರಾಣು ನಿರೋಧಕ ಔಷಧ ರೆಮ್‌ಡೆಸೆವಿರ್ ಭರವಸೆ ಮೂಡಿಸಿದೆ.ಅಮೆರಿಕದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಲರ್ಜಿ ಆಂಡ್ ಇನ್‌ಫೆಕ್ಟಿಯಸ್ ಡಿಸೀಸಸ್ ಪ್ರಾಯೋಜಿತ ಕ್ಲಿನಿಕಲ್ ಟ್ರಯಲ್ ಈ ಔಷಧಿ ಪರಿಣಾಮಕಾರಿ ಎಂಬುದನ್ನು ಸಾಬೀತುಪಡಿಸಿದೆ ಎಂದು ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್ ನಲ್ಲಿ ಪ್ರಕಟವಾದ ವಿಶ್ಲೇಷಣಾತ್ಮಕ ವರದಿ ತಿಳಿಸಿದೆ.

ಯುರೋಪ್ : ಕೊವಿಡ್ 19 ಚಿಕಿತ್ಸೆಗೆ ಹೈಡ್ರಾಕ್ಸಿಕ್ಲೋರೊಕ್ವಿನ್ ಬಳಕೆ ನಿಷೇಧ!ಯುರೋಪ್ : ಕೊವಿಡ್ 19 ಚಿಕಿತ್ಸೆಗೆ ಹೈಡ್ರಾಕ್ಸಿಕ್ಲೋರೊಕ್ವಿನ್ ಬಳಕೆ ನಿಷೇಧ!

ರೆಮ್‌ಡೆಸಿವಿರ್ ಔಷಧ ಬಳಕೆಗೆ ಸಿದ್ಧ

ರೆಮ್‌ಡೆಸಿವಿರ್ ಔಷಧ ಬಳಕೆಗೆ ಸಿದ್ಧ

ಅಮೆರಿಕ ಸರಕಾರದಿಂದ ಒಪ್ಪಿಗೆ ಪಡೆದಿರುವ ರೆಮ್‌ಡೆಸಿವಿರ್‌ ಔಷಧಗಳನ್ನು ಪ್ರಾಯೋಗಿಕವಾಗಿ ಬಳಸಲು ಭಾರತ ಸಿದ್ಧವಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ ಹರ್ಷವರ್ಧನ್‌ ತಿಳಿಸಿದ್ದರು. ‘ಆ್ಯಂಟಿ ವೈರಲ್‌ ಗುಣ ಹೊಂದಿರುವ ಈ ಔಷಧದ ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಆಗ್ರಹಿಸಿದೆ. ಭಾರತವೂ ಡಬ್ಲ್ಯು.ಎಚ್‌.ಒ. ಸಹಯೋಗಿ ರಾಷ್ಟ್ರವಾಗಿರುವುದರಿಂದ ಭಾರತಕ್ಕೆ ಒಂದು ಸಾವಿರ ರೆಮ್‌ ಡೆಸಿವಿರ್‌ ಔಷಧಗಳ ಸ್ಯಾಂಪಲ್‌ಗಳನ್ನು ಕಳುಹಿಸಲಾಗಿತ್ತು.

ಆಯ್ದ ರಾಜ್ಯಗಳಲ್ಲಿ ತುರ್ತು ಸಂದರ್ಭಗಳಲ್ಲಿ ಬಳಕೆ

ಆಯ್ದ ರಾಜ್ಯಗಳಲ್ಲಿ ತುರ್ತು ಸಂದರ್ಭಗಳಲ್ಲಿ ಬಳಕೆ

ಅವುಗಳನ್ನು ಆಯ್ದ ರಾಜ್ಯಗಳ ಆಯ್ದ ನಗರಗಳಲ್ಲಿ ತುರ್ತು ಸಂದರ್ಭಗಳಲ್ಲಿ ಮಾತ್ರ ಬಳಸಲಾಗುತ್ತದೆ. ಈ ನಿಟ್ಟಿನಲ್ಲಿ ಭಾರತದ ಐಸಿಎಂಆರ್‌ ಹಾಗೂ ಸಿಎಸ್‌ಐಆರ್‌ ಸಂಸ್ಥೆಗಳು ಕಾರ್ಯೋನ್ಮುಖವಾಗಿವೆ' ಎಂದಿದ್ದಾರೆ. ದೆಹಲಿ ಮತ್ತು ಮುಂಬೈನ ಜನರು ಜನರು ಲಾಕ್‌ಡೌನ್‌ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸದೇ ಇದ್ದ ಹಿನ್ನೆಲೆಯಲ್ಲಿ ಆ ಮಹಾನಗರಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಿ ಕಾಣಿಸಿಕೊಳ್ಳಲು ಕಾರಣವಾಯಿತು ಎಂದಿದ್ದರು.

English summary
The use of anti-viral medication, Remdesivir for the treatment of suspected or laboratory-confirmed COVID-19 cases has been cleared by India's top drug regulatory body.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X