ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್‌ನಿಂದ ಪೋಷಕರನ್ನು ಕಳೆದುಕೊಂಡ ಅರ್ಧದಷ್ಟು ಮಕ್ಕಳಿಗೆ 4-13 ವಯಸ್ಸು

|
Google Oneindia Kannada News

ನವದೆಹಲಿ, ಜೂ. 03: ಕೊರೊನಾ ಕಾರಣದಿಂದಾಗಿ ತಮ್ಮ ಪೋಷಕರನ್ನು ಕಳೆದುಕೊಂಡ ಅರ್ಧದಷ್ಟು ಮಕ್ಕಳು 4-13 ವಯಸ್ಸಿನವರಾಗಿದ್ದಾರೆ. 3 ವರ್ಷಕ್ಕಿಂತ ಕಡಿಮೆ ವಯಸ್ಸಿನ 788 ಮಕ್ಕಳು ಮತ್ತು 4-13 ವಯಸ್ಸಿನ 5226 ಮಕ್ಕಳು ಕೊರೊನಾ ಕಾರಣದಿಂದಾಗಿ ತಮ್ಮ ತಂದೆ, ತಾಯಿ ಇಬ್ಬರನ್ನೂ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

ವರದಿಯೊಂದರ ಪ್ರಕಾರ, 9,346 ಮಕ್ಕಳಲ್ಲಿ 3,332 ಮಕ್ಕಳು 14 ರಿಂದ 17 ವಯಸ್ಸಿನವರಾಗಿದ್ದಾರೆ. 788 ಮಕ್ಕಳು3 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. 5226 ಮಕ್ಕಳು 4-13 ವಯಸ್ಸಿನವರಾಗಿದ್ದಾರೆ. ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗವು ಸುಪ್ರೀಂ ಕೋರ್ಟ್‌ನಲ್ಲಿ ನೀಡಿದ ಅಫಿಡವಿಟ್‌ನಲ್ಲಿರುವ ಮಾಹಿತಿಯ ಪ್ರಕಾರ, 9,346 ಮಕ್ಕಳಲ್ಲಿ 4860 ಬಾಲಕರು ಮತ್ತು 4486 ಬಾಲಕಿಯರಾಗಿದ್ದಾರೆ.

ಚೀನಾದಿಂದ ಇಂಡೋನೇಷ್ಯಾಕ್ಕೆ ಬಂತು 12 ಲಕ್ಷ ಕೊವಿಡ್ ಲಸಿಕೆ ಚೀನಾದಿಂದ ಇಂಡೋನೇಷ್ಯಾಕ್ಕೆ ಬಂತು 12 ಲಕ್ಷ ಕೊವಿಡ್ ಲಸಿಕೆ

ಮಕ್ಕಳ ಮನೆಗಳಲ್ಲಿ ಕೋವಿಡ್‌19 ಹರಡುತ್ತಿರುವ ಬಗ್ಗೆ ಹಾಗೂ ಮಾರಣಾಂತಿಕ ವೈರಸ್‌ನಿಂದ ಮಕ್ಕಳು ಅನಾಥರಾಗಿದ್ದಾರೆ ಎಂಬ ಬಗ್ಗೆ ಸಲ್ಲಿಕೆಯಾಗಿರುವ ಸುಯೋ ಮೋಟು ಪ್ರಕರಣದ ಅರ್ಜಿಯನ್ನು ಉನ್ನತ ನ್ಯಾಯಾಲಯವು ವಿಚಾರಣೆ ನಡೆಸಿದೆ.

More than Half of the Children Who Lost Parents Due to Covid-19 Aged Between 4-13

ಎನ್‌ಸಿಪಿಸಿಆರ್ ಅಫಿಡವಿಟ್‌ನಲ್ಲಿ ಕೋವಿಡ್‌ -19 ರ ಉಲ್ಬಣವು ಹೆಚ್ಚಿನ ಸಂಖ್ಯೆಯ ಸಾವುಗಳಿಗೆ ಕಾರಣವಾಗಿದೆ. ಈ ಸಂದರ್ಭದಲ್ಲಿ ಮಕ್ಕಳ ಹಕ್ಕುಗಳನ್ನು ರಕ್ಷಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳುವ ಅಧಿಕ ಪ್ರಯತ್ನ ನಡೆಸಬೇಕಾಗಿದೆ ಎಂದು ಹೇಳಲಾಗಿದೆ.

ಕೋವಿಡ್‌ನಿಂದಾಗಿ ಅನಾಥವಾಗಿರುವ ಅಥವಾ ಪೋಷಕರನ್ನು ಕಳೆದುಕೊಂಡಿರುವ, ಯಾವುದೇ ಹಣಕಾಸಿನ ನೆರವು ಹೊಂದಿಲ್ಲದಿರುವ ಮಗುವನ್ನು ಪತ್ತೆಹಚ್ಚುವ ಕಾರ್ಯವಿಧಾನವನ್ನು ಅಭಿವೃದ್ಧಿಪಡಿಸುವುದು ಮೊದಲ ಹಂತವಾಗಿದೆ ಎಂದು ಅಫಿಡವಿಟ್‌ ಹೇಳಿದೆ. ಈ ಹಿನ್ನೆಲೆ ಕೋವಿಡ್‌ನಿಂದ ಬಳಲುತ್ತಿರುವ ಮತ್ತು ತೊಂದರೆಯಲ್ಲಿರುವ, ಕುಟುಂಬದ ಬೆಂಬಲವಿಲ್ಲದ ಪ್ರತಿಯೊಂದು ಮಗುವನ್ನು 2015 ರ ಜ್ಯುವೆನೆಲ್‌ ಕಾಯ್ದೆಯ ಸೆಕ್ಷನ್ 31 ರ ಅಡಿಯಲ್ಲಿ ಸಂಬಂಧಪಟ್ಟ ಮಕ್ಕಳ ಕಲ್ಯಾಣ ಸಮಿತಿಯ ಪಾಲನೆಗೆ ಒಪ್ಪಿಸಬೇಕು ಎಂದು ತಿಳಿಸಿದೆ.

ಇನ್ನು ಹೀಗೆ ಅನಾಥರಾಗಿರುವ ಮಕ್ಕಳ ಮಾಹಿತಿ ಸಂಗ್ರಹಿಸಲು ಬಾಲ್ ಸ್ವರಾಜ್ ಪೋರ್ಟಲ್ ಅನ್ನು ರೂಪಿಸಿದೆ ಎಂದು ಆಯೋಗ ಹೇಳಿದೆ.

ಕೊರೊನಾವೈರಸ್ ಅಂಟಿದ ಮಕ್ಕಳ ಸಾವಿಗೆ 'ಕವಾಸಕಿ' ಕಾರಣ!ಕೊರೊನಾವೈರಸ್ ಅಂಟಿದ ಮಕ್ಕಳ ಸಾವಿಗೆ 'ಕವಾಸಕಿ' ಕಾರಣ!

ಅನಾಥ ಮಕ್ಕಳಿಗೆ ಸಹಾಯವನ್ನು ನೀಡಲು ಬಯಸಿದ್ದೇವೆ ಎಂದು ಹೇಳಿಕೊಂಡು ಕೆಲವು ಖಾಸಗಿ ಸಂಸ್ಥೆಗಳು ಮಕ್ಕಳ ದತ್ತಾಂಶ ಸಂಗ್ರಹಣೆಯಲ್ಲಿ ತೊಡಗಿದೆ. ಆದರೆ ಈ ಮಕ್ಕಳನ್ನು ಈ ಸಂಸ್ಥೆಗಳು ಯಾವುದೇ ನಿಯಮ ಹಾಗೂ ಕಾನೂನು ವಿಧಾನ ಪಾಲಿಸದೆಯೇ ಬೇರೆ ಕುಟುಂಬಗಳಿಗೆ ದತ್ತು ನೀಡುತ್ತಿದೆ ಎಂಬ ಆರೋಪಗಳು ಕೇಳಿ ಬಂದಿರುವ ಬಗ್ಗೆಯೂ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗವು ಅಫಿಡವಿಟ್‌ನಲ್ಲಿ ತಿಳಿಸಿದೆ.

(ಒನ್ಇಂಡಿಯಾ ಸುದ್ದಿ)

English summary
More than Half of the Children Who Lost Parents Due to Covid-19 Aged Between 4-13. 5226 aged between 4-13 either lost both parents, one parent or were abandoned during the pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X