• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹೆಚ್ಚುತ್ತಿರುವ ಕೊರೊನಾ ನಡುವೆ ಮತ್ತೊಂದು ಅಪಾಯದ ಸೂಚನೆ ಕೊಟ್ಟ ಸಿಸಿಎಂಬಿ

|

ನವದೆಹಲಿ, ಫೆಬ್ರವರಿ 23: ಕಳೆದ ಒಂದು ವಾರದಿಂದ ದೇಶದಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗಿದ್ದು, ದೇಶದಲ್ಲಿ ಮತ್ತೆ ಕೊರೊನಾ ಆತಂಕ ಉಂಟಾಗಿದೆ. ಮಹಾರಾಷ್ಟ್ರದಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿರುವುದು, ಇನ್ನಿತರ ಕಡೆಗಳಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ಈ ನಡುವೆ ಹೈದರಾಬಾದ್ ಮೂಲದ ಕೋಶ ಹಾಗೂ ಅಣುಜೀವಶಾಸ್ತ್ರ ಕೇಂದ್ರದ ವೈಜ್ಞಾನಿಕ ಹಾಗೂ ಕೈಗಾರಿಕಾ ಸಂಶೋಧನಾ ಮಂಡಳಿ ಎಚ್ಚರಿಕೆಯೊಂದನ್ನು ನೀಡಿದೆ.

ಭಾರತದಲ್ಲಿ ಏಳು ಸಾವಿರಕ್ಕೂ ಹೆಚ್ಚು ಕೊರೊನಾ ಸೋಂಕಿನ ರೂಪಾಂತರಗಳು ಇರುವ ಸಾಧ್ಯತೆಯಿದ್ದು, ಇವುಗಳಲ್ಲಿ ಕೆಲವು ಗಂಭೀರ ಪರಿಣಾಮ ಬೀರಬಹುದಾಗಿದೆ ಎಂದು ಸೋಮವಾರ ಸಂಸ್ಥೆಯ ಹಿರಿಯ ವಿಜ್ಞಾನಿಯೊಬ್ಬರು ಎಚ್ಚರಿಕೆ ನೀಡಿದ್ದಾರೆ. ಕೊರೊನಾ ಮುಗಿಯಿತು ಎಂದು ನಿರಾಳರಾಗಿ ನಿಯಮಗಳನ್ನು ಪಾಲಿಸದೇ ಇರಬೇಡಿ. ಎಚ್ಚರಿಕೆ ಅತಿ ಅತ್ಯಗತ್ಯ ಎಂದು ಹೇಳಿದ್ದಾರೆ. ಮುಂದೆ ಓದಿ...

ಕೊರೊನಾ ಚಾಪ್ಟರ್ -2: ಸ್ವಲ್ಪ ಎಚ್ಚರ ತಪ್ಪಿದರೂ ಈ 10 ವಾರ್ಡ್ ಕಂಟೇನ್ಮೆಂಟ್ ಝೋನ್ ವ್ಯಾಪ್ತಿಗೆ? ಕೊರೊನಾ ಚಾಪ್ಟರ್ -2: ಸ್ವಲ್ಪ ಎಚ್ಚರ ತಪ್ಪಿದರೂ ಈ 10 ವಾರ್ಡ್ ಕಂಟೇನ್ಮೆಂಟ್ ಝೋನ್ ವ್ಯಾಪ್ತಿಗೆ?

 ದಕ್ಷಿಣ ರಾಜ್ಯಗಳಲ್ಲಿ N440K ಸೋಂಕು

ದಕ್ಷಿಣ ರಾಜ್ಯಗಳಲ್ಲಿ N440K ಸೋಂಕು

ಹೈದರಾಬಾದ್ ನ ಕೋಶ ಹಾಗೂ ಅಣುಜೀವಶಾಸ್ತ್ರ ಕೇಂದ್ರದ ವೈಜ್ಞಾನಿಕ ಹಾಗೂ ಕೈಗಾರಿಕಾ ಸಂಶೋಧನಾ ಮಂಡಳಿ ನಿರ್ದೇಶಕ ರಾಕೇಶ್ ಮಿಶ್ರಾ, ದೇಶದಲ್ಲಿನ ಕೊರೊನಾ ರೂಪಾಂತರ ಸೋಂಕುಗಳ ಕುರಿತು ಮಾಹಿತಿ ನೀಡಿದ್ದಾರೆ. ಸದ್ಯಕ್ಕೆ ದೇಶದಲ್ಲಿ ಕೊರೊನಾ ರೂಪಾಂತರಗಳಲ್ಲಿ N440K ದಕ್ಷಿಣ ಭಾಗದ ರಾಜ್ಯಗಳಲ್ಲಿ ಹರಡುತ್ತಿದೆ ಎಂದು ತಿಳಿಸಿದ್ದಾರೆ.

 ಭಾರತದಲ್ಲಿದೆ 7000 ರೂಪಾಂತರ

ಭಾರತದಲ್ಲಿದೆ 7000 ರೂಪಾಂತರ

ಭಾರತದಲ್ಲಿ ಸಿಸಿಎಂಬಿ ಸಂಸ್ಥೆಯೊಂದೇ ಸುಮಾರು ಐದು ಸಾವಿರ ಕೊರೊನಾ ರೂಪಾಂತರಗಳ ವಿಶ್ಲೇಷಣೆ ನಡೆಸಿದ್ದು, ಕ್ರಮೇಣ ಈ ಸೋಂಕು ಹೇಗೆ ರೂಪಾಂತರಗೊಳ್ಳುತ್ತಿವೆ ಎಂಬುದನ್ನು ವಿವರಿಸಿದ್ದಾರೆ. ಸಿಸಿಎಂಬಿ ವಿಜ್ಞಾನಿಗಳು ಮಾಹಿತಿ ಅಧ್ಯಯನವನ್ನು ಪ್ರಕಟಿಸಿದ್ದಾರೆ. ಈ ಅಧ್ಯಯನದ ಪ್ರಕಾರ ಭಾರತದಲ್ಲಿ ಸುಮಾರು 7000 ಕೊರೊನಾ ಸೋಂಕಿನ ರೂಪಾಂತರಗಳು ಇವೆ ಎಂದು ತಿಳಿಸಿದ್ದಾರೆ.

ಭಾರತ: 38 ದಿನಗಳಲ್ಲಿ ಎಷ್ಟು ಜನರಿಗೆ ಸಿಕ್ಕಿದೆ ಕೊರೊನಾ ಲಸಿಕೆ?ಭಾರತ: 38 ದಿನಗಳಲ್ಲಿ ಎಷ್ಟು ಜನರಿಗೆ ಸಿಕ್ಕಿದೆ ಕೊರೊನಾ ಲಸಿಕೆ?

 ಜೆನೋಮ್ ಪರೀಕ್ಷೆಗೆಂದೇ ಇದೆ ಹತ್ತು ಸಂಸ್ಥೆಗಳು

ಜೆನೋಮ್ ಪರೀಕ್ಷೆಗೆಂದೇ ಇದೆ ಹತ್ತು ಸಂಸ್ಥೆಗಳು

ಸಿಸಿಎಂಬಿ ಸಂಸ್ಥೆ ಕೊರೊನಾ ವೈರಸ್‌ನ ರಚನೆ, ರೂಪಾಂತರ ಹಾಗೂ ಅವುಗಳ ಹರಡುವಿಕೆ ಕುರಿತು ಅಧ್ಯಯನ ಮಾಡುತ್ತಿದೆ. ಬ್ರಿಟನ್ ಹಾಗೂ ಬ್ರೆಜಿಲಿಯನ್ ರೂಪಾಂತರಗಳು ಹೆಚ್ಚು ಪರಿಣಾಮಕಾರಿ ಎಂಬುದು ತಿಳಿದುಬರುತ್ತಿದ್ದಂತೆ ಭಾರತವೂ ರೂಪಾಂತರದ ಜೆನೋಮ್ ಪರೀಕ್ಷೆಗೆ ಮುಂದಾಗಿತ್ತು. ಈ ಜೆನೋಮ್ ಪರೀಕ್ಷೆಗೆಂದೇ ಹತ್ತು ಸಂಸ್ಥೆಗಳನ್ನು ನಿಯೋಜಿಸಲಾಗಿತ್ತು. ಇದೀಗ ಪರೀಕ್ಷೆಗಳು ನಡೆಯುತ್ತಿದ್ದು, ಸೋಂಕಿನ ರೂಪಾಂತರಗಳ ಕುರಿತು ಮಾಹಿತಿ ನೀಡಿದೆ.

"ಪ್ರತಿ ರೂಪಾಂತರವೂ ತಳಿಯಾಗುವುದಿಲ್ಲ"

ಭಾರತದಲ್ಲಿ ಸದ್ಯಕ್ಕೆ ರೂಪಾಂತರಗಳ ಉಪಸ್ಥಿತಿಯಿದ್ದು, ಕೆಲವು ಗಂಭೀರ ಪರಿಣಾಮ ಬೀರಬಹುದು ಎನ್ನಲಾಗಿದೆ. ಆದರೆ ಪ್ರತಿ ರೂಪಾಂತರವೂ ಹೊಸ ತಳಿಯಾಗಿ ಪರಿವರ್ತನೆಯಾಗುವುದಿಲ್ಲ. ಹೀಗೆಂದು ನಿರ್ಲಕ್ಷ್ಯ ವಹಿಸುವಂತಿಲ್ಲ. ಕೊರೊನ ಸೋಂಕು ಹರಡುವಿಕೆ ತಡೆಗೆ ಅಗತ್ಯ ಕ್ರಮ ಕೈಗೊಳ್ಳಲೇಬೇಕು ಎಂದು ತಿಳಿಸಿದ್ದಾರೆ.

English summary
There are more than 7,000 coronavirus mutations in India of which some could pose a serious risk, a senior scientist of ccmb said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X