• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸರ್ಜಿಕಲ್ ಸ್ಟ್ರೈಕ್ ಸೇಡು ತೀರಿಸಿಕೊಳ್ಳಲು ತಯಾರಾಗಿದ್ದಾರೆ 300 ಭಯೋತ್ಪಾದಕರು

|

ನವದೆಹಲಿ, ಸೆಪ್ಟೆಂಬರ್ 28: ವಿಶ್ವ ಬೆಚ್ಚಿ ಬೀಳುವಂತೆ ಭಾರತ ಮಾಡಿದ ಸರ್ಜಿಕಲ್‌ ಸ್ಟ್ರೈಕ್‌ಗೆ ದ್ವೇಷ ತೀರಿಸಿಕೊಳ್ಳಲು 300ಕ್ಕೂ ಹೆಚ್ಚು ಭಯೋತ್ಪಾದಕರು ತಯಾರಾಗಿದ್ದಾರೆ.

ಭಾರತದ ಗಡಿಯೊಳಕ್ಕೆ ನುಗ್ಗಿ ಭಾರತದ ಮೇಲೆ ಸೇಡು ತೀರಿಸಿಕೊಳ್ಳಲೆಂದು 300 ಭಯೋತ್ಪಾದಕರು ಸಜ್ಜಾಗಿದ್ದಾರೆ ಎಂದು ಗುಪ್ತಚರ ಇಲಾಖೆ ಹೇಳಿದೆ. ಈ ಭಯೋತ್ಪಾದಕರು ಸರ್ಜಿಕಲ್ ಸ್ಟ್ರೈಕ್‌ಗೆ ಮುಯ್ಯಿ ತೀರಿಸಿಕೊಳ್ಳಲೆಂದೇ ಕಾಯುತ್ತಿದ್ದಾರೆ.

ಸರ್ಜಿಕಲ್ ಸ್ಟ್ರೈಕ್: ಮತ್ತೆರಡು ರೋಚಕ ವಿಡಿಯೋ ಬಿಡುಗಡೆ

ಒಂದೆಡೆ ಪಾಕಿಸ್ತಾನದ ಪ್ರಧಾನಿ ಭಾರತದೊಂದಿಗೆ ಶಾಂತಿ ಮಾತುಕತೆಯ ಬಗ್ಗೆ ಮಾತನ್ನಾಡುತಿದ್ದರೆ ಮತ್ತೊಂದೆಡೆ ಅದೇ ಪಾಕಿಸ್ತಾನ ಪ್ರೇರಿತ ಭಯೋತ್ಪಾದಕರು ಪಾಕ್ ಮಿಲ್ಟ್ರಿ ಸಹಾಯದೊಂದಿಗೆ ಎಲ್‌ಓಸಿ ದಾಟಿ ಭಾರತದ ಮೇಲೆ ದಾಳಿ ನಡೆಸಲು ತಯಾರಿ ನಡೆಸಿದ್ದಾರೆ.

ಎಲ್‌ಒಸಿ ಬಳಿ ಸುಮಾರು 27 ಶಿಬಿರಗಳಲ್ಲಿ ಭಯೋತ್ಪಾದಕರು ತಂಗಿದ್ದು, ಭಾರತಕ್ಕೆ ನುಗ್ಗುವ ಅವಕಾಶಕ್ಕಾಗಿ ಕಾದು ಕುಳಿತಿದಿದ್ದಾರೆ ಎಂದು ಗುಪ್ತಚರ ಇಲಾಖೆ ಕೇಂದ್ರಕ್ಕೆ ವರದಿ ನೀಡಿದೆ. ಈ ಹಿಂದೆ ಭಾರತವು ಸರ್ಜಿಕಲ್ ಸ್ಟ್ರೈಕ್ ನಡೆದಿದ್ದ ಜಾಗದಲ್ಲಿ ಈಗ ಮತ್ತೆ ಶಿಬಿರಗಳನ್ನು ತೆರೆಯಲಾಗಿದೆ ಎಂದು ಗುಪ್ತಚರ ಇಲಾಖೆಯಲ್ಲಿ ಉಲ್ಲೇಖಿತವಾಗಿದೆ.

2016 ಸೆಪ್ಟೆಂಬರ್ 16ರಂದು ಪಾಕಿಸ್ತಾನದ ಗಡಿಯ ಒಳಕ್ಕೆ ನುಗ್ಗಿದ್ದ ಭಾರತೀಯ ಸೇನೆಯ ತಂಡವು ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿತ್ತು. ಇದು ವಿಶ್ವಾದ್ಯಂತ ಭಾರಿ ಸುದ್ದಿಯಾಯಿತು. ಈ ದಾಳಿಯಲ್ಲಿ ಹಲವು ಉಗ್ರರು ಸಾವನ್ನಪ್ಪಿದ್ದರು. ಈಗ ಆ ದಾಳಿಗೆ ಮುಯ್ಯಿ ತೀರಿಸಿಕೊಳ್ಳಲು ಇನ್ನಷ್ಟು ಉಗ್ರರು ಸಜ್ಜಾಗಿದ್ದಾರೆ.

ಸರ್ಜಿಕಲ್ ಸ್ಟ್ರೈಕ್ ನಲ್ಲಿ ಚಿರತೆ ಮಲ-ಮೂತ್ರ ಬಳಕೆ, ಲೆ.ಜನರಲ್ ರೋಚಕ ಮಾಹಿತಿ

ಕಾಶ್ಮೀರಿ ಉಗ್ರ ಬುಹ್ರಾನ್‌ ವಾನಿ ಹತ್ಯೆಗೂ ಮುನ್ನ ಪಾಕ್ ಆಶ್ರಮಿತ ಕಾಶ್ಮೀರದ 14 ಶಿಬಿರಗಳಲ್ಲಿ 160 ಮಂದಿ ಉಗ್ರರರಿದ್ದರು. ಬುಹ್ರಾನ್‌ ಹತ್ಯೆ ಬಳಿಕ ಉಗ್ರರ ಸಂಖ್ಯೆ 190-250ಕ್ಕೆ ಏರಿಕೆಯಾಗಿದೆ. ಇಮ್ರಾನ್ ಖಾನ್ ಪಾಕಿಸ್ತಾನದ ಪ್ರಧಾನಿಯಾದ ನಂತರವೂ ಉಗ್ರರ ಸಂಖ್ಯೆ ಹೆಚ್ಚಳವಾಗಿದೆ ಎಂದು ಗುಪ್ತಚರ ಇಲಾಖೆ ಹೇಳಿದೆ.

ಸರ್ಜಿಕಲ್ ಸ್ಟ್ರೈಕ್‌ನಿಂದ ವಿಶ್ವಕ್ಕೆ ನಮ್ಮ ಶಕ್ತಿ ತೋರಿಸಿದೆವು : ಅಮಿತ್ ಶಾ

ಲಿಪಾ, ಚಕೋತಿ, ಬಾರಕೋಟ್, ಶರ್ಡಿ, ಜುರ್ರಾ, ಚನೇನಿಯನ್ ಸೇರಿದಂತೆ ಮತ್ತಿತರ ಕಡೆ ಲಷ್ಕರ್-ಎ-ತೊಯಿಬಾ ಸೇರಿದಂತೆ ಹಲವು ಉಗ್ರರ ಶಿಬಿರಗಳು ಸಕ್ರಿಯವಾಗಿದೆ. ಇತ್ತೀಚೆಗೆ ಗುರೋಜ್ ಜರಲ್‍ಕೊಟ್ಲಿ, ಸೋಪುರ್, ಬಂಡಿಪುರ ಮತ್ತಿತರ ಕಡೆ ಉಗ್ರರ ಚಟುವಟಿಕೆಗಳು ಹೆಚ್ಚಾಗುತ್ತಿದ್ದು, ಇದನ್ನು ಹಿಮ್ಮೆಟ್ಟಿಸಲು ಸೇನಾಪಡೆ ಕೂಡ ಸರ್ವ ಸನ್ನದ್ದವಾಗಿದೆ.

English summary
More than 300 Terrorists waiting to infiltrate into the India to take revenge for Surgical strike which Indian army did two years before.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X