ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ರಾಜ್ಯಗಳಿಗೆ 30,000 ಮೆಟ್ರಿಕ್ ಟನ್ ಆಮ್ಲಜನಕ ಪೂರೈಕೆ

|
Google Oneindia Kannada News

ನವದೆಹಲಿ, ಮೇ 13: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆ ಆಕ್ಸಿಜನ್ ಎಕ್ಸ್ ಪ್ರೆಸ್ ರೈಲುಗಳ ಮೂಲಕ 30,000 ದ್ರವರೂಪದ ವೈದ್ಯಕೀಯ ಆಮ್ಲಜನಕವನ್ನು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸರಬರಾಜು ಮಾಡಲಾಗಿದೆ.
ಭಾರತೀಯ ರೈಲ್ವೆ ಇಲಾಖೆ ನೀಡಿರುವ ಅಂಕಿ-ಅಂಶಗಳ ಪ್ರಕಾರ, ದೇಶದ ಹಲವು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 421 ಆಕ್ಸಿಜನ್ ಏಕ್ಸ್ ಪ್ರೆಸ್ ರೈಲುಗಳು ಸಂಚಿರಿಸಿವೆ. ಈ ರೈಲುಗಳ 1,734 ಟ್ಯಾಂಕ್ ಗಳಲ್ಲಿ 30,182 ಮೆಟ್ರಿಕ್ ಟನ್ ಲಿಕ್ವಿಡ್ ಆಕ್ಸಿಜನ್ ರವಾನಿಸಲಾಗಿದೆ.

ಅಪೋಲೋ ಆಸ್ಪತ್ರೆಯಲ್ಲಿ ಪಡೆಯುವ ಸ್ಪುಟ್ನಿಕ್-ವಿ ಲಸಿಕೆಗೆ ಎಷ್ಟು ಬೆಲೆ?
15,000 ಮೆಟ್ರಿಕ್ ಟನ್ ಗಿಂತಲೂ ಹೆಚ್ಚು ಲಿಕ್ವಿಡ್ ಆಕ್ಸಿಜನ್ ಅನ್ನು ದಕ್ಷಿಣ ಭಾರತದ ರಾಜ್ಯಗಳಲ್ಲಿ ವಿಶೇಷ ರೈಲುಗಳ ಮೂಲಕ ರವಾನಿಸಲಾಗಿದೆ. ಆಂಧ್ರ ಪ್ರದೇಶಕ್ಕೆ 3,600 ಮೆಟ್ರಿಕ್ ಟನ್, ಕರ್ನಾಟಕಕ್ಕೆ 3,700 ಮೆಟ್ರಿಕ್ ಟನ್ ಹಾಗೂ ತಮಿಳುನಾಡಿಗೆ 4,900 ಮೆಟ್ರಿಕ್ ಟನ್ ಲಿಕ್ವಿಡ್ ಆಕ್ಸಿಜನ್ ಸರಬರಾಜು ಮಾಡಲಾಗಿದೆ.

More Than 30,000 MT Liquid Oxygen Delivered From Express Trains Across India

ಭಾರತದ 15 ರಾಜ್ಯಗಳಿಗೆ ಲಿಕ್ವಿಡ್ ಆಕ್ಸಿಜನ್:
ದೇಶದ 15 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಲಿಕ್ವಿಡ್ ಆಕ್ಸಿಜನ್ ಸರಬರಾಜು ಮಾಡಲಾಗಿದೆ. ಮಹಾರಾಷ್ಟ್ರ- 614 ಮೆ.ಟನ್ ಆಕ್ಸಿಜನ್, ಉತ್ತರಪ್ರದೇಶ - 3797 ಮೆ.ಟನ್ ಆಕ್ಸಿಜನ್, ಮಧ್ಯಪ್ರದೇಶ - 656 ಮೆ.ಟನ್ ಆಕ್ಸಿಜನ್, ದೆಹಲಿ - 5722 ಮೆ.ಟನ್ ಆಕ್ಸಿಜನ್, ಹರಿಯಾಣ - 2354 ಮೆ.ಟನ್ ಆಕ್ಸಿಜನ್, ರಾಜಸ್ಥಾನ - 98 ಮೆ.ಟನ್ ಆಕ್ಸಿಜನ್, ಕರ್ನಾಟಕ - 3782 ಮೆ.ಟನ್ ಆಕ್ಸಿಜನ್, ಉತ್ತರಾಖಂಡ - 320 ಮೆ.ಟನ್ ಆಕ್ಸಿಜನ್, ತಮಿಳುನಾಡು - 4941 ಮೆ.ಟನ್ ಆಕ್ಸಿಜನ್, ಆಂಧ್ರಪ್ರದೇಶ - 3664 ಮೆ.ಟನ್ ಆಕ್ಸಿಜನ್, ಪಂಜಾಬ್‌ - 225 ಮೆ.ಟನ್ ಆಕ್ಸಿಜನ್, ಕೇರಳ - 513 ಮೆ.ಟನ್ ಆಕ್ಸಿಜನ್, ತೆಲಂಗಾಣ - 2972 ಮೆ.ಟನ್ ಆಕ್ಸಿಜನ್, ಜಾರ್ಖಂಡ್ - 38 ಮೆ.ಟನ್ ಆಕ್ಸಿಜನ್ ಮತ್ತು ಅಸ್ಸಾಂ - 480 ಮೆ.ಟನ್ ಆಕ್ಸಿಜನ್ ಪೂರೈಸಲಾಗಿದೆ.

English summary
More Than 30,000 MT Liquid Oxygen Delivered From Express Trains Across India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X