ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರಾಖಂಡ: 2,000 ಕ್ಕೂ ಹೆಚ್ಚು ಪೊಲೀಸರಿಗೆ ಕೊರೊನಾ ಪಾಸಿಟಿವ್‌

|
Google Oneindia Kannada News

ಡೆಹ್ರಾಡೂನ್, ಜೂ. 03: ಕೊರೊನಾ ಎರಡನೇ ಅಲೆಯ ಸಂದರ್ಭದಲ್ಲಿ 2,000 ಕ್ಕೂ ಹೆಚ್ಚು ಉತ್ತರಾಖಂಡ ಪೊಲೀಸ್ ಸಿಬ್ಬಂದಿಗಳಲ್ಲಿ ಕೊರೊನಾ ದೃಢಪಟ್ಟಿದ್ದು, ಈ ಪೈಕಿ ಶೇ.90 ರಷ್ಟು ಪೊಲೀಸರು ಸೋಂಕಿಗೆ ಒಳಗಾಗುವ ಮೊದಲು ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವರದಿ ಪ್ರಕಾರ, ಕರ್ತವ್ಯದಲ್ಲಿದ್ದ 2,382 ಪೊಲೀಸರಲ್ಲಿ ಏಪ್ರಿಲ್ ಮತ್ತು ಮೇ ನಡುವೆ ಕೊರೊನಾ ಸೋಂಕು ಪಾಸಿಟಿವ್‌ ಆಗಿದೆ. ಈ ಪೈಕಿ 2,204 ಮಂದಿ ಪೊಲೀಸರು ಈಗಾಗಲೇ ಚೇತರಿಸಿಕೊಂಡಿರುವುದು ಆಶಾದಾಯಕ ವಿಚಾರವಾಗಿದೆ.

ರಾಜ್ಯದಲ್ಲಿ 510 ಪೊಲೀಸ್ ಸಿಬ್ಬಂದಿಗೆ ಕೊರೊನಾ ಸೋಂಕುರಾಜ್ಯದಲ್ಲಿ 510 ಪೊಲೀಸ್ ಸಿಬ್ಬಂದಿಗೆ ಕೊರೊನಾ ಸೋಂಕು

ಇನ್ನು ಐವರು ಪೊಲೀಸರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿವೆ. ಮಾಹಿತಿಯ ಪ್ರಕಾರ, ಸಾವನ್ನಪ್ಪಿದ ಐವರು ಪೊಲೀಸರಲ್ಲಿ ಇಬ್ಬರು ಇತರ ಆರೋಗ್ಯ ಸಮಸ್ಯೆಗಳನ್ನೂ ಹೊಂದಿದ್ದರು ಹಾಗೂ ಉಳಿದ ಮೂವರು ಲಸಿಕೆ ಹಾಕಿಸಿಕೊಂಡಿರಲಿಲ್ಲ.

 More than 2,000 Uttarakhand cops test positive for covid-19

ಈ ಬಗ್ಗೆ ಮಾಹಿತಿ ನೀಡಿರುವ ಡಿಐಜಿ (ಕಾನೂನು ಸುವ್ಯವಸ್ಥೆ) ಮತ್ತು ಉತ್ತರಾಖಂಡ ಪೊಲೀಸ್ ಮುಖ್ಯ ವಕ್ತಾರ ನಿಲೇಶ್ ಆನಂದ್ ಭರ್ನೆ, ''ಕೊರೊನಾ ದೃಢಪಟ್ಟ ಪೊಲೀಸರ ಸಾವುನೋವುಗಳು ಕಡಿಮೆ ಇದೆ'' ಎಂದು ಹೇಳಿದ್ದಾರೆ. ''ಹಾಗೆಯೇ ಲಸಿಕೆ ತಯಾರಕರು ಎರಡೂ ಡೋಸ್‌ ಲಸಿಕೆ ಪಡೆದ ಬಳಿಕ ಕೋವಿಡ್‌ ದೃಢಪಡುವುದಿಲ್ಲ ಎಂದು ಎಲ್ಲೂ ಹೇಳಿಲ್''ಲ ಎಂದು ತಿಳಿಸಿದ್ದಾರೆ.

10,000 ಕರ್ನಾಟಕ ಪೊಲೀಸರಿಗೆ ಕೊರೊನಾವೈರಸ್ ಪಾಸಿಟಿವ್!10,000 ಕರ್ನಾಟಕ ಪೊಲೀಸರಿಗೆ ಕೊರೊನಾವೈರಸ್ ಪಾಸಿಟಿವ್!

''ಕೋವಿಡ್ -19 ರಿಂದ ಮೃತಪಟ್ಟ ಪೊಲೀಸರನ್ನು ಹರಿದ್ವಾರದ ಕುಂಭಮೇಳದಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಆದರೆ ಅವರ ಸಾವು ಮತ್ತು ಧಾರ್ಮಿಕ ಸಭೆಗೂ ಯಾವುದೇ ಸಂಬಂಧವಿಲ್ಲ'' ಎಂದು ಕೂಡಾ ಆನಂದ್ ಭರ್ನೆ ಇದೇ ಸಂದರ್ಭದಲ್ಲಿ ಸ್ಪಷ್ಟನೆ ನೀಡಿದ್ದಾರೆ.

 More than 2,000 Uttarakhand cops test positive for covid-19

ಇನ್ನು ಕೊರೊನಾ ದೃಢಪಟ್ಟ ಪೊಲೀಸ್ ಸಿಬ್ಬಂದಿಗಳ ಕುಟುಂಬಸ್ಥರಲ್ಲಿ ಒಟ್ಟು 751 ಮಂದಿಗೆ ಸೋಂಕು ತಗುಲಿದ್ದು ಈ ಪೈಕಿ 64 ಮಂದಿ ಸಾವನ್ನಪ್ಪಿದ್ದಾರೆ. ಸಾಂಕ್ರಾಮಿಕ ರೋಗದ ಮೊದಲ ಅಲೆಯ ಸಂದರ್ಭ 1,982 ಪೊಲೀಸ್ ಸಿಬ್ಬಂದಿಗಳಿಗೆ ಕೊರೊನಾ ತಗುಲಿದ್ದು ಎಂಟು ಮಂದಿ ಸಾವನ್ನಪ್ಪಿದ್ದರು.

ಕಳೆದ ವರ್ಷ ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ ಈವರೆಗೆ 4,364 ಪೊಲೀಸ್ ಸಿಬ್ಬಂದಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಈ ಪೈಕಿ 13 ಮಂದಿ ಸಾವನ್ನಪ್ಪಿದ್ದಾರೆ.

(ಒನ್ಇಂಡಿಯಾ ಸುದ್ದಿ)

English summary
More than 2,000 Uttarakhand cops test positive for covid-19, 90% of them got both covid vaccine doses.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X