ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವಿಡ್-19 ಅಲ್ಲ: ಭಾರತದಲ್ಲಿ ಈ ಲಸಿಕೆ ಪಡೆಯದೇ 12 ಲಕ್ಷ ಮಕ್ಕಳು ಸಾವು!

|
Google Oneindia Kannada News

ನವದೆಹಲಿ, ನವೆಂಬರ್.15: ಕೊರೊನಾವೈರಸ್ ಸೋಂಕಿನ ಆತಂಕದ ನಡುವೆ ದಡಾರದಿಂದ ಅತಿಹೆಚ್ಚು ಶಿಶುಗಳು ಪ್ರಾಣ ಬಿಟ್ಟಿರುವ ಬಗ್ಗೆ ಆಘಾತಕಾರಿ ವರದಿ ಹೊರ ಬಿದ್ದಿದೆ. 2019ರಲ್ಲಿ ದಡಾರ ಸೋಂಕಿನಿಂದ ವಿಶ್ವದಲ್ಲಿ ಅತಿಹೆಚ್ಚು ಶಿಶುಗಳು ಪ್ರಾಣ ಬಿಟ್ಟಿರುವುದು ಗೊತ್ತಾಗಿದೆ. ಈ ಪೈಕಿ ಭಾರತವು ಐದನೇ ಸ್ಥಾನದಲ್ಲಿದೆ.

ಕಳೆದ ವರ್ಷ ದಡಾರ ಸೋಂಕಿಗೆ ಚುಚ್ಚುಮದ್ದು ಪಡೆದುಕೊಳ್ಳದೇ ಪ್ರಾಣ ಬಿಟ್ಟ ಶಿಶುಗಳ ಸಂಖ್ಯೆಯು 23 ವರ್ಷಗಳಲ್ಲೇ ಅತಿಹೆಚ್ಚು ಎಂದು ತಿಳಿದು ಬಂದಿದೆ. ವಿಶ್ವ ಆರೋಗ್ಯ ಸಂಸ್ಥೆ ಮತ್ತು ಅಮೆರಿಕಾದ ಸಾಂಕ್ರಾಮಿಕ ರೋಗ ನಿಯಂತ್ರಣ ಮತ್ತು ನಿರ್ವಹಣಾ ಕೇಂದ್ರವು ಈ ಬಗ್ಗೆ ವರದಿ ನೀಡಿದೆ.

ವಿಶ್ವದಲ್ಲಿ 20 ಕೋಟಿಗೂ ಹೆಚ್ಚು ಮಂದಿ ಬಲಿ ಪಡೆದಿತ್ತು 'ದ ಬ್ಲ್ಯಾಕ್ ಡೆತ್'ವಿಶ್ವದಲ್ಲಿ 20 ಕೋಟಿಗೂ ಹೆಚ್ಚು ಮಂದಿ ಬಲಿ ಪಡೆದಿತ್ತು 'ದ ಬ್ಲ್ಯಾಕ್ ಡೆತ್'

ಭಾರತದಲ್ಲಿ 2019ರಲ್ಲಿ ಶಿಶುಗಳಿಗೆ ದಡಾರ ನಿಯಂತ್ರಿಸುವ ಲಸಿಕೆ(ಎಂಸಿವಿ-1)ಯನ್ನು ನೀಡುವಲ್ಲಿ ನಿರ್ಲಕ್ಷ್ಯ ತೋರಲಾಗಿದೆ. ಒಂದು ವರ್ಷದಲ್ಲಿ ಬರೋಬ್ಬರಿ 12 ಲಕ್ಷ ಶಿಶುಗಳಿಗೆ ಲಸಿಕೆ ನೀಡಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯು ನೀಡಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಜಗತ್ತಿನಲ್ಲಿ ಅತಿಹೆಚ್ಚು ದಡಾರ ಲಸಿಕೆ ಪಡೆಯದ ಅಗ್ರರಾಷ್ಟ್ರಗಳ ಪಟ್ಟಿಯಲ್ಲಿ ಭಾರತವು ಐದನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ.

ಶಿಶುಗಳಿಗೆ ದಡಾರ ಲಸಿಕೆ ನೀಡದ ಅಗ್ರ ರಾಷ್ಟ್ರಗಳು

ಶಿಶುಗಳಿಗೆ ದಡಾರ ಲಸಿಕೆ ನೀಡದ ಅಗ್ರ ರಾಷ್ಟ್ರಗಳು

ವಿಶ್ವದಲ್ಲಿ ದಡಾರ ಲಸಿಕೆ ಪಡೆಯದೇ ಅತಿಹೆಚ್ಚು ಶಿಶುಗಳು ಪ್ರಾಣ ಬಿಟ್ಟಿರುವ ಪ್ರಕರಣಗಳು ವರದಿಯಾಗಿರುವ ಅಗ್ರರಾಷ್ಟ್ರಗಳ ಪಟ್ಟಿಯಲ್ಲಿ ಭಾರತವೂ ಸ್ಥಾನ ಪಡೆದುಕೊಂಡಿದೆ. ನೈಜಿರಿಯಾದಲ್ಲಿ 33 ಲಕ್ಷ ಶಿಶುಗಳ ದಡಾರ ಲಸಿಕೆಯಿಲ್ಲದೇ ಪ್ರಾಣ ಬಿಟ್ಟಿದ್ದರೆ, ಇಥಿಯೊಪಿಯಾದಲ್ಲಿ 15 ಲಕ್ಷ ಶಿಶುಗಳು ದಡಾರಕ್ಕೆ ಲಸಿಕೆ ಪಡೆಯದೇ ಬಲಿಯಾಗಿವೆ. ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ಹಾಗೂ ಪಾಕಿಸ್ತಾನದಲ್ಲಿ 14 ಲಕ್ಷ ಶಿಶುಗಳು ಸಾವನ್ನಪ್ಪಿದ್ದರೆ, ಭಾರತದಲ್ಲಿ 12 ಲಕ್ಷ ಶಿಶುಗಳು ದಡಾರಕ್ಕೆ ಲಸಿಕೆಯಿಲ್ಲದೇ ಪ್ರಾಣ ಬಿಟ್ಟಿವೆ. ಫಿಲಿಫೈನ್ಸ್ ನಲ್ಲಿ 70,000 ಶಿಶುಗಳು ದಡಾರ ಸೋಂಕಿನಿಂದ ಮೃತಪಟ್ಟಿವೆ.

ದಡಾರ ಸಾವಿನ ಸಂಖ್ಯೆಯಲ್ಲಿ 8.69 ಲಕ್ಷ ಏರಿಕೆ

ದಡಾರ ಸಾವಿನ ಸಂಖ್ಯೆಯಲ್ಲಿ 8.69 ಲಕ್ಷ ಏರಿಕೆ

'ವಿಶ್ವವ್ಯಾಪಿ ಪ್ರಾದೇಶಿಕ ದಡಾರ ನಿರ್ಮೂಲನೆ ಪ್ರಗತಿ 2000-2019' ಎಂಬ ಶೀರ್ಷಿಕೆಯಡಿ ಸಿದ್ಧಪಡಿಸಿದ ವರದಿಯಲ್ಲಿ ಈ ಕುರಿತು ಉಲ್ಲೇಖಿಸಲಾಗಿದೆ. ವಿಶ್ವದಾದ್ಯಂತ 2019ರಲ್ಲಿ ದಡಾರ ಲಸಿಕೆ ಪಡೆಯದ ಶಿಶುಗಳ ಸಂಖ್ಯೆಯಲ್ಲಿ 8,69,770ರಷ್ಟು ಏರಿಕೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ತಿಳಿಸಿದೆ. 2016ರಿಂದ ಈಚೆಗೆ ಶೇ.50ರಷ್ಟು ಸಾವಿನ ಸಂಖ್ಯೆಯಲ್ಲೂ ಕೂಡಾ ಏರಿಕೆಯಾಗಿದೆ. 2019ರಲ್ಲಿ 2,07,500 ಶಿಶುಗಳು ದಡಾರಕ್ಕೆ ಲಸಿಕೆ ಪಡೆಯದೇ ಸಾವನ್ನಪ್ಪಿವೆ ಎಂದು ವರದಿ ಹೇಳಿದೆ.

2019ಕ್ಕಿಂತ 2016ರಲ್ಲಿ ಅತಿಹೆಚ್ಚು ಸಾವಿನ ಪ್ರಕರಣ

2019ಕ್ಕಿಂತ 2016ರಲ್ಲಿ ಅತಿಹೆಚ್ಚು ಸಾವಿನ ಪ್ರಕರಣ

ದಡಾರ ಸೋಂಕಿನಿಂದ ಶಿಶುಗಳ ಸಾವಿನ ಸಂಖ್ಯೆಯನ್ನು 2019ರಿಂದ 2016ರವರೆಗೂ ಹೋಲಿಕೆ ಮಾಡಿ ನೋಡಲಾಗಿದೆ. ಈ ವೇಳೆ 2019ಕ್ಕಿಂತ 2016ರಲ್ಲಿ ಅತಿಹೆಚ್ಚು ಶಿಶುಗಳು ದಡಾರ ಸೋಂಕಿಗೆ ತುತ್ತಾಗಿದ್ದವು. ಸೂಕ್ತ ಸಮಯದಲ್ಲಿ ಎಂಸಿವಿ-1 ಮತ್ತು ಎಂಸಿವಿ-2 ಲಸಿಕೆಯನ್ನು ನೀಡದಿರುವುದೇ ಅಪಾಯಕ್ಕೆ ಕಾರಣವಾಗಿತ್ತು. ಹೀಗಾಗಿ ಅತಿಹೆಚ್ಚು ಶಿಶುಗಳು ದಡಾರದಿಂದಲೇ ಪ್ರಾಣ ಬಿಟ್ಟಿದ್ದವು ಎಂಬುದನ್ನು ಅಂಕಿ-ಅಂಶಗಳು ಸ್ಪಷ್ಟವಾಗಿ ಹೇಳುತ್ತಿವೆ.

ಜಾಗತಿಕ ಮಟ್ಟದಲ್ಲಿ ಶಿಶುಗಳ ಸಾವಿನ ಪ್ರಮಾಣ ಏರಿಕೆ

ಜಾಗತಿಕ ಮಟ್ಟದಲ್ಲಿ ಶಿಶುಗಳ ಸಾವಿನ ಪ್ರಮಾಣ ಏರಿಕೆ

ದಡಾರ ಸೋಂಕಿನಿಂದ ಶಿಶುಗಳ ಸಾವಿನ ಪ್ರಮಾಣವನ್ನು ಹೇಗೆ ತಗ್ಗಿಸಬೇಕು ಎಂಬುದರ ಬಗ್ಗೆ ನಮಗೆ ಗೊತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶಕ ಟೆಂಡ್ರಸ್ ಅಧನಮ್ ಗೆಬ್ರಿಯಸಿಸ್ ಸ್ಪಷ್ಟನೆ ನೀಡಿದ್ದಾರೆ. ವಿಶ್ವದ ಎಲ್ಲ ಭಾಗಗಳಲ್ಲಿ ದಡಾರ ಸೋಂಕಿನಿಂದ ಶಿಶುಗಳನ್ನು ರಕ್ಷಿಸುವುದರಲ್ಲಿ ವಿಫಲರಾಗಿರುವುದನ್ನು ಅಂಕಿ-ಅಂಶಗಳು ಸ್ಪಷ್ಟವಾಗಿ ಹೇಳುತ್ತಿವೆ. ವಿಶ್ವದ ಪ್ರತಿಯೊಂದು ಪ್ರದೇಶದ ಪ್ರತಿಯೊಂದು ಸಮುದಾಯಕ್ಕೆ ತಲುಪಿಸುವ ನಿಟ್ಟಿನಲ್ಲಿ ಸಂಘಟಿತ ಪ್ರಯತ್ನ ನಡೆಸಲಾಗುತ್ತದೆ. ಇದಕ್ಕೆ ಎಲ್ಲ ರಾಷ್ಟ್ರಗಳು ಕೈಜೋಡಿಸಬೇಕು. ದಡಾರ ಸೋಂಕಿನಿಂದ ಶಿಶುಗಳ ಸಾವಿನ ಪ್ರಮಾಣವನ್ನು ಇಳಿಮುಖಗೊಳಿಸಲು ಅಗತ್ಯವಾದ ಎಂಸಿವಿ-1 ಮತ್ತು ಎಂಸಿವಿ-2 ಲಸಿಕೆಗಳನ್ನು ಪೂರೈಕೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ದಡಾರ ಸೋಂಕು ನಿಯಂತ್ರಿಸುವ ಲಸಿಕೆಯ ಲಭ್ಯತೆ ಮಾಹಿತ

ದಡಾರ ಸೋಂಕು ನಿಯಂತ್ರಿಸುವ ಲಸಿಕೆಯ ಲಭ್ಯತೆ ಮಾಹಿತ

ಶಿಶುಗಳನ್ನು ದಡಾರ ಸೋಂಕಿನಿಂದ ರಕ್ಷಿಸುವುದಕ್ಕೆ ಪ್ರಮುಖವಾಗಿ ಎಂವಿಸಿ-1 ಮತ್ತು ಎಂವಿಸಿ -2 ಲಸಿಕೆಗಳನ್ನು ಬಳಕೆ ಮಾಡಲಾಗುತ್ತದೆ. ಜಾಗತಿಕ ಮಟ್ಟದಲ್ಲಿ ಶೇ.84 ರಿಂದ 85ರಷ್ಟು ಎಂವಿಸಿ-1 ಲಸಿಕೆಯು ಸ್ಥಿರವಾಗಿ ವ್ಯಾಪಿಸಿಕೊಂಡಿದೆ. ಎಂವಿಸಿ -2 ಲಸಿಕೆಯು ಶೇ.71ರಷ್ಟು ಸ್ಥಿರವಾಗಿದ್ದು, ದಡಾರದಿಂದ ಸಾವಿನ ಸಂಖ್ಯೆ ನಿಯಂತ್ರಿಸಲು ಶೇ.95ರಷ್ಟು ಲಸಿಕೆಗಳ ಅಗತ್ಯವಿದೆ. ಎರಡೂ ಲಸಿಕೆಗಳು ದಡಾರ ಸೋಂಕಿನಿಂದ ಶಿಶುಗಳನ್ನು ರಕ್ಷಿಸುವುದಕ್ಕೆ ಉಪಯುಕ್ತವಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ಕೊರೊನಾವೈರಸ್ ನಡುವೆ ದಡಾರದ ನಿರ್ಲಕ್ಷ್ಯ

ಕೊರೊನಾವೈರಸ್ ನಡುವೆ ದಡಾರದ ನಿರ್ಲಕ್ಷ್ಯ

ಜಗತ್ತಿನಾದ್ಯಂತ ಕೊರೊನಾವೈರಸ್ ಸೋಂಕು ನಿಯಂತ್ರಿಸುವ ಬಗ್ಗೆ ಸಂಶೋಧನೆಗಳನ್ನು ನಡೆಸಲಾಗುತ್ತಿದೆ. ಕೊವಿಡ್-19 ಲಸಿಕೆ ಕಂಡು ಹಿಡಿಯುವ ಭರಾಟೆಯಲ್ಲಿ ಈಗಾಗಲೇ ಅಗತ್ಯವಿರುವ ಲಸಿಕೆಗಳ ಬಗ್ಗೆ ನಿರ್ಲಕ್ಷ್ಯ ವಹಿಸಲಾಗುತ್ತಿದೆ. ದಡಾರ ಸೋಂಕಿಗೆ ಜಗತ್ತಿನಲ್ಲಿ ಲಸಿಕೆಯೇನೋ ಇದೆ. ಆದರೆ ಅದನ್ನು ಸರಿಯಾದ ಸಮಯಕ್ಕೆ ನೀಡುವುದರಲ್ಲಿ ನಿರ್ಲಕ್ಷ್ಯ ವಹಿಸಿರುವುದೇ ಶಿಶುಗಳ ಸಾವಿನ ಸಂಖ್ಯೆ ಏರಿಕೆಗೆ ಕಾರಣವಾಗಿದೆ. ಪರಿಸ್ಥಿತಿ ಮತ್ತಷ್ಟು ಹದಗೆಡುವ ಮೊದಲು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ ಎಂದು ಲಸಿಕೆ ಒಕ್ಕೂಟದ ಸಿಇಓ ಡಾ. ಸೇಥ್ ಬರ್ಕ್ಲಿ ಎಚ್ಚರಿಕೆ ನೀಡಿದ್ದಾರೆ.

English summary
More Than 12 Lakh Children Died From Not Take Measles Vaccine In India. Here You Get Information About Top 5 Nations Of Highest Death Cases.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X