ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲಿನಲ್ಲಿ ಪ್ರಯಾಣಿಸುವ ಯೋಜನೆ ಹಾಕಿಕೊಳ್ಳುವ ಮೊದಲು ಈ ಸ್ಟೋರಿ ನೋಡಿ

|
Google Oneindia Kannada News

ದೆಹಲಿ, ಡಿಸೆಂಬರ್.20: ರೈಲು ಪ್ರಯಾಣ ಎಂದರು ಒಂದು ರೀತಿಯ ಖುಷಿ. ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಚೀಪ್ ಆಂಡ್ ಬೆಸ್ಟ್ ಎನಿಸಿದರೆ, ನಿರಾಯಾಸ ಪ್ರಯಾಣಕ್ಕೂ ರೈಲು ಸಂಚಾರವೇ ದಿ ಬೆಸ್ಟ್.

ದೆಹಲಿಯಲ್ಲಿ ರೈಲು ಪ್ರಯಾಣ ಮಾಡುವ ಮೊದಲು ಈಗಿನ ಪರಿಸ್ಥಿತಿಯಲ್ಲಿ ನೂರು ಬಾರಿ ಯೋಚನೆ ಮಾಡಬೇಕು. ಇಲ್ಲದಿದ್ದರೆ, ನೀವು ಅಂದುಕೊಂಡ ಸ್ಥಳವನ್ನು ಅಂದುಕೊಂಡ ಟೈಮ್ ಗೆ ತಲುಪಲು ಸಾಧ್ಯವಿಲ್ಲ. ಏಕೆಂದರೆ ಈಗ ದೆಹಲಿಯಲ್ಲಿ ರೈಲುಗಳು ಟೈಮ್ ಗೆ ಸರಿಯಾಗಿ ಬರುತ್ತಿಲ್ಲ.

ದೆಹಲಿ ಜನರಿಗೆ ಈಗ 'ಬೆಂಕಿ' ಎಂದರೆ ಬಲು ಇಷ್ಟ!ದೆಹಲಿ ಜನರಿಗೆ ಈಗ 'ಬೆಂಕಿ' ಎಂದರೆ ಬಲು ಇಷ್ಟ!

ಅಚ್ಚರಿ ಎನಿಸಿದರೂ ಇದು ಸತ್ಯ. ಡಿಸೆಂಬರ್.20ರಂದು ದೆಹಲಿಯಲ್ಲಿ 100ಕ್ಕೂ ಹೆಚ್ಚು ರೈಲುಗಳು ತಡವಾಗಿ ಸಂಚರಿಸಿರುವ ಬಗ್ಗೆ ವರದಿಯಾಗಿದೆ. ಚಳಿಗಾಲ ಆಗಿದ್ದರಿಂದ ದೆಹಲಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ತೀವ್ರ ಮಂಜು ಆವರಿಸಿದೆ. ಹೀಗಾಗಿ ರೈಲು ಸಂಚಾರದಲ್ಲಿ ತೀವ್ರ ವಿಳಂಬವಾಗುತ್ತಿದೆ ಎಂದು ತಿಳಿದು ಬಂದಿದೆ.

More Than 100 Trains Delayed In North India

ದೆಹಲಿಯಲ್ಲಿ ಆವರಿಸಿದ ಮಂಜು, ಮೈಕೊರೆಯುವ ಚಳಿ

ರಾಷ್ಟ್ರ ರಾಜಧಾನಿಯಲ್ಲಿ ಶುಕ್ರವಾರದ ಕನಿಷ್ಠ ತಾಪಮಾನ 6.4 ಡಿಗ್ರಿ ಸೆಲ್ಸಿಯಸ್ ಆಗಿದ್ದು, ನಗರದಲ್ಲಿ ತೀವ್ರ ಮಂಜು ಆವರಿಸಿದೆ. ಇದರಿಂದ ಉತ್ತರ ಭಾರತದ ರೈಲ್ವೆ ಸಂಚಾರದಲ್ಲಿ ತೀವ್ರ ವ್ಯತ್ಯಯ ಉಂಟಾಗಿದೆ. ಅಂಬಾಲಾ, ದೆಹಲಿ, ಫಿರೋಜ್ ಪುರ್, ಲಖನೌ, ಮೊರಾದಾಬಾದ್ ನಲ್ಲಿ ರೈಲ್ವೆ ಮಾರ್ಗವೇ ಕಾಣದಷ್ಟು ಮಂಜು ಆವರಿಸಿದೆ. ಇದರಿಂದ ಜಮ್ಮು-ಕಾಶ್ಮೀರ, ಪಂಜಾಬ್, ಹರಿಯಾಣ, ಹಿಮಾಚಲ ಪ್ರದೇಶ, ಉತ್ತರ ಪ್ರದೇಶ, ಉತ್ತರಾಖಂಡ್, ಚಂಡೀಗಢ್ ಭಾಗದಿಂದ ಸಂಚರಿಸುವ ರೈಲುಗಳು ಕೂಡಾ ಕನಿಷ್ಠ ಎರಡು ಗಂಟೆ ನಿಧಾನವಾಗಿ ಸಂಚರಿಸಿವೆ.

ಇದಿಷ್ಟೇ ಅಲ್ಲದೇ, ದೆಹಲಿಯಿಂದ ತುಂಡ್ಲಾ, ರೆವಾರಿ, ಆಗ್ರಾ, ಅಂಬಾಲಾ, ಮೊರಾದಾಬಾದ್, ಸಹರಾಂಪುರ್, ಭತಿಂಡಾ, ಮಾರ್ಗದ ರೈಲ್ವೆ ಸಂಚಾರದಲ್ಲೂ ವ್ಯತ್ಯಯ ಉಂಟಾಗಿದೆ. ದೆಹಲಿ ಮತ್ತು ಆಗ್ರಾ ಮಾರ್ಗದಲ್ಲಿ ಅತಿಹೆಚ್ಚು ಎಂದರೆ 32 ರೈಲುಗಳು ನಿತ್ಯ ಸಂಚರಿಸುತ್ತವೆ. ಈ ಪೈಕಿ ನಿಜಾಮುದ್ದೀನ್ ಎಕ್ಸ್ ಪ್ರೆಸ್ ಸೇರಿದಂತೆ ಬಹುತೇಕ ರೈಲುಗಳ ಸಂಚಾರದಲ್ಲಿ ವಿಳಂಬವಾಗಿವೆ.

English summary
Passengers Be Alert. More Than 100 Trains Delayed In North India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X