• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

Mix and Match ಲಸಿಕೆ; ವೈಜ್ಞಾನಿಕ ಮಾಹಿತಿ ಅಗತ್ಯ ಎಂದ ತಜ್ಞರು

By ಒನ್‌ಇಂಡಿಯಾ ಡೆಸ್ಕ್
|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 16: ಎರಡು ಭಿನ್ನ ಕೊರೊನಾ ಲಸಿಕೆಗಳ ಸಂಯೋಜನೆಯಿಂದ ದೇಹದಲ್ಲಿ ಸೋಂಕಿನ ವಿರುದ್ಧ ಅಧಿಕ ಮಟ್ಟದಲ್ಲಿ ಪ್ರತಿಕಾಯ ಉತ್ಪಾದನೆ ಮಾಡುವ ಸಂಬಂಧ ಪ್ರಯೋಗ ನಡೆಸಲು ವೆಲ್ಲೂರಿನ ಕ್ರಿಶ್ಚಿಯನ್ ವೈದ್ಯಕೀಯ ಕಾಲೇಜಿಗೆ ಔಷಧ ನಿಯಂತ್ರಕ ಸಂಸ್ಥೆ ಅನುಮತಿ ನೀಡಿದ್ದು, ಈ ಕುರಿತು ಸ್ಪಷ್ಟತೆ ಸಿಗಲು ಮತ್ತಷ್ಟು ವೈಜ್ಞಾನಿಕ ಮಾಹಿತಿಯ ಅವಶ್ಯಕತೆಯಿದೆ ಎಂದು ಜೈವಿಕ ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ರೇಣು ಸ್ವರೂಪ್ ಹೇಳಿದ್ದಾರೆ.

ಮುಂಬರುವ ದಿನಗಳಲ್ಲಿ ಝೈಡಸ್ ಕ್ಯಾಡಿಲಾದ ಝೈಕೋವ್-ಡಿ ಹಾಗೂ ಬಯೋಲಾಜಿಕಲ್ ಇ ಕೋರ್ಬೆವ್ಯಾಕ್ಸ್‌ ಲಸಿಕೆಗಳ ಸಂಯೋಜನೆ ಪ್ರಯೋಗ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಕೊರೊನಾ ಬೂಸ್ಟರ್‌ ಡೋಸ್; ದುಬಾರಿ ಸಂಗತಿಯಲ್ಲ ಎಂದ WHOಕೊರೊನಾ ಬೂಸ್ಟರ್‌ ಡೋಸ್; ದುಬಾರಿ ಸಂಗತಿಯಲ್ಲ ಎಂದ WHO

'ಡಿಸಿಜಿಐ ವೆಲ್ಲೂರಿನ ಸಿಎಂಸಿಗೆ ಎರಡು ಕೊರೊನಾ ಲಸಿಕೆಗಳ ಸಂಯೋಜನೆ ಮಾಡುವ ಪ್ರಯೋಗ ನಡೆಸಲು ಅನುಮತಿ ನೀಡಲಾಗಿದೆ. ಈ ಸಂಬಂಧ ಎರಡು ಅಧ್ಯಯನಗಳನ್ನು ನಡೆಸಲಾಗುತ್ತಿದೆ. ಇನ್ನಷ್ಟು ಹೆಚ್ಚಿನ ವೈಜ್ಞಾನಿಕ ಮಾಹಿತಿ ಅಗತ್ಯವಿದೆ' ಎಂದು ಮಾಹಿತಿ ನೀಡಿದ್ದಾರೆ.

ಈ ಕುರಿತು ನಿರೀಕ್ಷಿತ ಫಲಿತಾಂಶ ದೊರೆಯುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ಏನಿದು ಮಿಕ್ಸ್‌ ಅಂಡ್ ಮ್ಯಾಚ್ ಲಸಿಕೆ?:
ಕೊರೊನಾ ಸೋಂಕಿನ ವಿರುದ್ಧ ದೇಹದಲ್ಲಿ ಹೆಚ್ಚಿನ ಪ್ರತಿಕಾಯ ಸೃಷ್ಟಿಗೆ ಒಂದು ಕಂಪನಿಯ ಮೊದಲ ಡೋಸ್ ಲಸಿಕೆಯನ್ನು ನೀಡಿ, ಮತ್ತೊಂದು ಕಂಪನಿಯ ಎರಡನೇ ಡೋಸ್ ಲಸಿಕೆ ನೀಡುವ ಪ್ರಯೋಗಕ್ಕೆ ಕೆಲವು ತಜ್ಞರು ಸಲಹೆ ನೀಡಿದ್ದರು. ಎರಡು ಭಿನ್ನ ಲಸಿಕೆಗಳ ಸಂಯೋಜನೆ ದೇಹದಲ್ಲಿ ಪ್ರತಿಕಾಯವನ್ನು ಅಧಿಕ ಮಟ್ಟದಲ್ಲಿ ಸೃಷ್ಟಿಸುವ ಸಾಧ್ಯತೆ ಕುರಿತು ಚರ್ಚೆಗಳು ನಡೆದಿದ್ದವು. ಒಂದು ಕಂಪನಿಯ ಎರಡು ಡೋಸ್ ಕೊರೊನಾ ಲಸಿಕೆ ಪಡೆದವರಿಗಿಂತ ಎರಡು ಕಂಪನಿಗಳ ಲಸಿಕೆ ಪಡೆದವರಲ್ಲಿಯೇ ರೋಗ ನಿರೋಧಕ ಶಕ್ತಿ ಹೆಚ್ಚಿನ ಮಟ್ಟದಲ್ಲಿ ಕಂಡುಬಂದಿರುವುದಾಗಿ ಪಶ್ಚಿಮ ಜರ್ಮನಿಯ ಸಾರ್ಲ್ಯಾಂಡ್ ವಿಶ್ವವಿದ್ಯಾಲಯದ ಅಧ್ಯಯನದಲ್ಲಿ ಉಲ್ಲೇಖಿಸಲಾಗಿತ್ತು.

ರೂಪಾಂತರ ಸೋಂಕಿಗೆ ಎರಡು ಲಸಿಕೆಗಳ ಸಂಯೋಜನೆ ಪರಿಣಾಮಕಾರಿಯೇ? ರೂಪಾಂತರ ಸೋಂಕಿಗೆ ಎರಡು ಲಸಿಕೆಗಳ ಸಂಯೋಜನೆ ಪರಿಣಾಮಕಾರಿಯೇ?

ಹೀಗಾಗಿ ಇಂಥ ಪ್ರಯೋಗವನ್ನು ಭಾರತದಲ್ಲಿ ನಡೆಸಲು ಸರ್ಕಾರ ಮುಂದಾಗಿತ್ತು. ಕೊರೊನಾ ಸೋಂಕಿನ ವಿರುದ್ಧ ಲಸಿಕೆಗಳ ದಕ್ಷತೆ ಪರಿಶೀಲಿಸಲು ಎರಡು ಭಿನ್ನ ಲಸಿಕೆಗಳ ಸಂಯೋಜನೆಯ ಪ್ರಯೋಗಕ್ಕೆ ಜುಲೈ ತಿಂಗಳಿನಲ್ಲಿ ಕೇಂದ್ರ ಔಷಧ ನಿಯಂತ್ರಕ ಮಂಡಳಿ ಶಿಫಾರಸು ಮಾಡಿತ್ತು.

More Scientific Data Required On Mixing Of COVID-19 Vaccine Doses

ಕೇಂದ್ರ ಔಷಧ ನಿಯಂತ್ರಕ ಮಂಡಳಿಯ ವಿಷಯ ತಜ್ಞರು ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿಗೆ ಈ ಲಸಿಕೆಗಳ ಸಂಯೋಜನೆ ಸಂಬಂಧ ಪ್ರಯೋಗ ನಡೆಸಲು ಅನುಮತಿ ನೀಡಿದ್ದರು. ಭಾರತದ ಸೆರಂ ಇನ್‌ಸ್ಟಿಟ್ಯೂಟ್‌ನ ಕೋವಿಶೀಲ್ಡ್ ಹಾಗೂ ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಲಸಿಕೆಗಳ ನಾಲ್ಕನೇ ಹಂತದ ಪ್ರಯೋಗವನ್ನು ಸುಮಾರು 300 ಆರೋಗ್ಯವಂತ ಸ್ವಯಂ ಸೇವಕರ ಮೇಲೆ ನಡೆಸಲು ಅನುಮತಿ ನೀಡಲಾಗಿತ್ತು.

ಮನುಷ್ಯರಲ್ಲಿ ರೋಗನಿರೋಧಕ ಶಕ್ತಿಯ ಹೆಚ್ಚಳಕ್ಕೆ ಎರಡು ಭಿನ್ನ ಭಿನ್ನ ಲಸಿಕೆ ಡೋಸ್ ನೀಡುವ ಕುರಿತು ಪ್ರಯೋಗಗಳನ್ನು ನಡೆಸುವಂತೆ ಈ ಹಿಂದೆಯೂ ತಜ್ಞರು ಕೇಂದ್ರವನ್ನು ಕೇಳಿಕೊಂಡಿದ್ದರು. ಈ ಮುನ್ನ ಎಬೋಲಾ ಹಾಗೂ ಏಡ್ಸ್‌ ಸೋಂಕಿಗೂ ಲಸಿಕೆಗಳ ಸಂಯೋಜನೆಯ ಪ್ರಯೋಗವನ್ನು ನಡೆಸಲಾಗಿತ್ತು.

ಕೊರೊನಾ ಸೋಂಕಿನ ವಿರುದ್ಧ ಪ್ರಬಲ ಹೋರಾಟಕ್ಕೆ ಎರಡು ಕೊರೊನಾ ಲಸಿಕೆಗಳ ಮಿಶ್ರ ಡೋಸ್ ನೀಡುವ ಕುರಿತು ಕಳೆದ ಕೆಲವು ತಿಂಗಳಿನಿಂದಲೂ ಚರ್ಚೆಗಳು ಕೇಳಿಬರುತ್ತಿವೆ. ಎರಡು ಭಿನ್ನ ಕಂಪನಿಯ ಕೊರೊನಾ ಲಸಿಕೆಯ ಡೋಸ್‌ಗಳನ್ನು ನೀಡುವುದು ಸೋಂಕಿನ ವಿರುದ್ಧ ದೇಹದಲ್ಲಿ ಪ್ರತಿಕಾಯ ಸೃಷ್ಟಿಗೆ ನೆರವಾಗುತ್ತದೆ. ಹೀಗಾಗಿ ಮಿಶ್ರ ಡೋಸ್ ನೀಡಿದರೆ ಕೊರೊನಾ ಸೋಂಕನ್ನು ಹತೋಟಿಗೆ ತರಬಹುದು ಎಂದು ಕೆಲವು ತಜ್ಞರು ಸಲಹೆ ನೀಡಿದ್ದರು.

ದಿನಕ್ಕೊಂದು ಸ್ವರೂಪ ತಾಳುತ್ತಿರುವ ಕೊರೊನಾ ರೂಪಾಂತರಗಳ ವಿರುದ್ಧ ಹೋರಾಡಲು ಎರಡು ಲಸಿಕೆಗಳ ಮಿಶ್ರಣ ಪರ್ಯಾಯ ಆಯ್ಕೆಯಾಗಬಹುದು ಎಂದು ಕೆಲವು ಅಧ್ಯಯನಗಳು ತಿಳಿಸಿವೆ.

ಆದರೆ ವಿಶ್ವ ಆರೋಗ್ಯ ಸಂಸ್ಥೆ ಲಸಿಕೆಗಳ ಈ ಪ್ರಯೋಗವನ್ನು ಅಪಾಯಕಾರಿ ಎಂದು ಕರೆದಿತ್ತು. ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ಒಬ್ಬರಿಗೆ ಎರಡು ಭಿನ್ನ ಕಂಪನಿಗಳ ಲಸಿಕೆಗಳ ಬಳಕೆಯನ್ನು "ಅಪಾಯಕಾರಿ ಪ್ರವೃತ್ತಿ" ಎಂದು ಕರೆದಿದ್ದು, ಈ ಪ್ರಯೋಗದ ಯಾವುದೇ ಮಾಹಿತಿ ಲಭ್ಯವಿಲ್ಲದ ಕಾರಣ ಆರೋಗ್ಯದ ಮೇಲೆ ಇದರ ಪರಿಣಾಮದ ಬಗ್ಗೆಯೂ ಸೂಕ್ತ ಅರಿವಿಲ್ಲ. ಹೀಗಾಗಿ ಈ ಪ್ರಯೋಗವನ್ನು ಮಾಡದೇ ಇರುವುದು ಒಳಿತು ಎಂದು ತಿಳಿಸಿತ್ತು.

English summary
More scientific data required on mixing of COVID-19 vaccine doses says Secretary of Department of Biotechnology,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X