ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನವರಿಯಲ್ಲಿ ಭಾರತೀಯ ವಾಯುಪಡೆಗೆ ಸೇರ್ಪಡೆಯಾಗಲಿವೆ 3 ರಫೇಲ್ ಯುದ್ಧ ವಿಮಾನಗಳು

|
Google Oneindia Kannada News

ನವದೆಹಲಿ, ಡಿಸೆಂಬರ್ 27: ಜನವರಿಯಲ್ಲಿ ಫ್ರಾನ್ಸ್‌ನಿಂದ ಭಾರತಕ್ಕೆ ಮತ್ತೆ 3 ರಫೇಲ್ ಯುದ್ಧ ವಿಮಾನಗಳು ಸೇರ್ಪಡೆಯಾಗಲಿವೆ.

ಫ್ರಾನ್ಸ್ ನಿಂದ ಮತ್ತೆ ಮೂರು ರಫೇಲ್ ಯುದ್ಧ ವಿಮಾನಗಳು ಜನವರಿ ತಿಂಗಳಿನಲ್ಲಿ ಭಾರತಕ್ಕೆ ಆಗಮಿಸಲಿವೆ. ಈ ಮೂಲಕ ವಾಯುಪಡೆಯಲ್ಲಿ ರಫೇಲ್ ಸಂಖ್ಯೆ 11ಕ್ಕೆ ಏರಿಕೆಯಾಗಲಿದೆ. ಇದರಿಂದಾಗಿ ಲಡಾಖ್ ನಲ್ಲಿ ಚೀನಾವನ್ನು ಎದುರಿಸಲು ಭಾರತಕ್ಕೆ ಮತ್ತಷ್ಟು ಬಲ ದೊರೆಯಲಿದೆ.

ಭಾರತೀಯ ವಾಯುಪಡೆ: ಮತ್ತೆ 3 ರಫೇಲ್ ಯುದ್ಧ ವಿಮಾನಗಳ ಸೇರ್ಪಡೆ ಭಾರತೀಯ ವಾಯುಪಡೆ: ಮತ್ತೆ 3 ರಫೇಲ್ ಯುದ್ಧ ವಿಮಾನಗಳ ಸೇರ್ಪಡೆ

ಮೂರನೇ ಹಂತದ ರಫೆಲ್‌ ಹಸ್ತಾಂತರ ಇದಾಗಿದ್ದು, ಇದರಿಂದ ಭಾರತ ಸೇರಿದ ಒಟ್ಟು ರಫೆಲ್‌ಗಳ ಸಂಖ್ಯೆ 11ಕ್ಕೆ ತಲುಪಲಿದೆ. ಈ ಬ್ಯಾಚ್‌ನ ಫೈಟರ್ ಜೆಟ್‌ಗಳು ಫ್ರಾನ್ಸ್‌ನಿಂದ ಗುಜರಾತ್‌ನ ಜಾಮ್‌ನಗರ್‌ಕ್ಕೆ ತಡೆರಹಿತ ಹಾರಾಟ ನಡೆಸಲಿದ್ದು, ಫ್ರೆಂಚ್ ಮತ್ತು ಭಾರತೀಯ ಟ್ಯಾಂಕರ್‌ಗಳು ದಾರಿ ಮಧ್ಯ ಗಾಳಿಯಲ್ಲಿ ಇಂಧನ ತುಂಬಿಸುತ್ತವೆ.

More Muscle To IAF With At Least 3 More Rafales Flying-In Next Month

ಪ್ರತಿ ಎರಡು ತಿಂಗಳಿಗೊಮ್ಮೆ ಮೂರರಿಂದ ನಾಲ್ಕು ಜೆಟ್‌ಗಳನ್ನು ಸೇರಿಸಲು ಐಎಎಫ್ ಯೋಜಿಸಿದೆ, ಎಲ್ಲಾ 36 ಜೆಟ್‌ಗಳನ್ನು ಪಂಜಾಬ್‌ನ ಅಂಬಾಲಾ ಮತ್ತು ಪಶ್ಚಿಮ ಬಂಗಾಳದ ಹಸಿಮಾರ ಮೂಲದ ಎರಡು ಸ್ಕ್ವಾಡ್ರನ್‌ಗಳಲ್ಲಿ ನಿಯೋಜನೆಗೊಳಿಸಲಾಗುತ್ತದೆ.

59,000 ಕೋಟಿ ರೂ.ಗಳ ವೆಚ್ಚದಲ್ಲಿ 36 ಉನ್ನತ ದರ್ಜೆಯ ರಫೆಲ್ ಫೈಟರ್ ಜೆಟ್‌ಗಳನ್ನು ಸ್ವೀಕರಿಸಲು ಭಾರತ ಮತ್ತು ಫ್ರಾನ್ಸ್ 2016 ರ ಸೆಪ್ಟೆಂಬರ್‌ನಲ್ಲಿ ಸರ್ಕಾರದಿಂದ ಸರ್ಕಾರದ ನಡುವೆ ಖರೀದಿ ಒಪ್ಪಂದಕ್ಕೆ ಸಹಿ ಹಾಕಿದ್ದವು.

ಸುಧಾರಿತ ಜೆಟ್‌ಗಳನ್ನು ಕ್ಷಿಪ್ರವಾಗಿ ನಿಯೋಜಿಸುವ ಐಎಎಫ್‌ನ ಸಾಮರ್ಥ್ಯಕ್ಕೆ ಇವುಗಳು ಉತ್ತೇಜನ ನೀಡುತ್ತವೆ, ಇವುಗಳು ಸುಧಾರಿತ ಶಸ್ತ್ರಾಸ್ತ್ರಗಳ ಸಂವೇದಕಗಳು ಮತ್ತು ಶಸ್ತ್ರಾಸ್ತ್ರಗಳನ್ನು ಹೊಂದಿವೆ.

ಈ ವರ್ಷದ ಜುಲೈ 29 ರಂದು, ಭಾರತವು ಮೂರು ರಫೆಲ್ ಜೆಟ್‌ಗಳ ಮೊದಲ ಬ್ಯಾಚ್ ಅನ್ನು ಪಡೆದುಕೊಂಡಿತು, ಸೆಪ್ಟೆಂಬರ್ 10 ರಂದು ಇದನ್ನು ವಾಯುಸೇನೆಗೆ ಸೇರಿಸಲಾಯಿತು. ಇದರ ನಂತರ, ನವೆಂಬರ್‌ನಲ್ಲಿ ಫೈಟರ್ ಜೆಟ್‌ಗಳನ್ನು ಪಡೆದುಕೊಂಡಿತು.

English summary
The Indian Air Force’s solitary Rafale squadron will add more muscle with the arrival of at least three more fighter jets in January, a shot in the arm for the IAF that is grappling with a shortage of combat planes, people familiar with developments said on Saturday on the condition of anonymity.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X