ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋರ್ಬಿ ಸೇತುವೆ ದುರಂತ: ಒರೆವಾ ಗ್ರೂಪ್ ಎಂಡಿ ವಿರುದ್ಧ ಅರೆಸ್ಟ್ ವಾರೆಂಟ್

|
Google Oneindia Kannada News

ಅಹಮದಾಬಾದ್ ಜನವರಿ 23: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ಮೋರ್ಬಿ ಸೇತುವೆ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಒರೆವಾ ಗ್ರೂಪ್ ಎಂಡಿ ವಿರುದ್ಧ ಬಂಧನದ ವಾರೆಂಟ್ ಹೊರಡಿಸಲಾಗಿದೆ. ಗುಜರಾತಿನ ಮೊರ್ಬಿಯಲ್ಲಿ ತೂಗು ಸೇತುವೆ ಕುಸಿದು 141 ಜನರ ಜೀವವನ್ನು ಕಸಿದುಕೊಂಡಿತು. ಈ ಘಟನೆ ನಡೆದು ಎರಡುವರೆ ತಿಂಗಳು ಬಳಿಕ ಸೇತುವೆಯ ನವೀಕರಣ, ಕಾರ್ಯಾಚರಣೆ ಮತ್ತು ನಿರ್ವಹಣೆಯ ಜವಾಬ್ದಾರಿಯುತ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧ ಪೊಲೀಸರು ಬಂಧನ ವಾರಂಟ್ ಹೊರಡಿಸಿದ್ದಾರೆ.

ಅಜಂತಾ ಒರೆವಾ ಗ್ರೂಪ್‌ನ ಪ್ರವರ್ತಕ ಜೈಸುಖ್ ಪಟೇಲ್ ವಿರುದ್ಧ ಗುಜರಾತ್ ಪೊಲೀಸರು ಭಾನುವಾರ ಬಂಧನದ ವಾರಂಟ್ ಹೊರಡಿಸಿದ್ದಾರೆ. ಬ್ರಿಟಿಷರ ಕಾಲದ ತೂಗುಸೇತುವೆಯ ಕಾರ್ಯಾಚರಣೆ ಮತ್ತು ನಿರ್ವಹಣೆಯ ಜವಾಬ್ದಾರಿಯನ್ನು ಪಟೇಲ್ ಅವರ ಕಂಪನಿ ವಹಿಸಿಕೊಂಡಿದ್ದು, ಅವರ ವಿರುದ್ಧ ಪೊಲೀಸರು ಲುಕ್‌ಔಟ್ ಸುತ್ತೋಲೆ ಹೊರಡಿಸಿದ್ದಾರೆ.

ಜನವರಿ 16 ರಂದು ಜೈಸುಖ್ ಪಟೇಲ್ ಮೊರ್ಬಿ ಸೆಷನ್ಸ್ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಪ್ರಕರಣದಲ್ಲಿ ಬಂಧಿಸುವ ಭಯದಿಂದ ಸಲ್ಲಿಸಿದ್ದರು. ಅಜಂತಾ ಮ್ಯಾನುಫ್ಯಾಕ್ಚರಿಂಗ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ಸೆಷನ್ ಕೋರ್ಟ್ ಶನಿವಾರ ಫೆಬ್ರವರಿ 1 ಕ್ಕೆ ಮುಂದೂಡಿದೆ. ಪಬ್ಲಿಕ್ ಪ್ರಾಸಿಕ್ಯೂಟರ್ ಹಾಜರಾಗದ ಕಾರಣ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಪಿ ಸಿ ಜೋಶಿ ಅವರು ಜೈಸುಖ್ ಪಟೇಲ್ ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ಫೆಬ್ರವರಿ 1 ಕ್ಕೆ ಮುಂದೂಡಿದರು.

 Morbi Bridge disaster: Arrest warrant against Orewa Group MD

ಮೊರ್ಬಿ ದುರಂತದಲ್ಲಿ ಒರೆವಾ ಗುಂಪಿನ ಪಾತ್ರ

ಮೊರ್ಬಿ ಪಟ್ಟಣದ ಮಚ್ಚು ನದಿಯ ತೂಗು ಸೇತುವೆ ಕಳೆದ ವರ್ಷ ಅಕ್ಟೋಬರ್ 30 ರಂದು ಕುಸಿದು 135 ಜನರು ಸಾವನ್ನಪ್ಪಿದ್ದರು. ಮೋರ್ಬಿ ಪುರಸಭೆಯೊಂದಿಗೆ ಸಹಿ ಮಾಡಿದ ಒಪ್ಪಂದದ ಪ್ರಕಾರ ಸೇತುವೆಯನ್ನು ಒರೆವಾ ಗ್ರೂಪ್ ನಿರ್ವಹಿಸುತ್ತದೆ. ಸೇತುವೆಯ ನಿರ್ವಹಣೆಗಾಗಿ 15 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿತ್ತು. ಮಾರ್ಬಿ ಮುನ್ಸಿಪಲ್ ಕಾರ್ಪೊರೇಷನ್ ಮತ್ತು ಅಜಂತಾ ಒರೆವಾ ಕಂಪನಿ ನಡುವೆ ಮಾರ್ಚ್ 2022 ರಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಇದು 2037 ರವರೆಗೆ ಮಾನ್ಯವಾಗಿತ್ತು.

ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ವರದಿಯು ತುಕ್ಕು ಹಿಡಿದ ಕೇಬಲ್‌ಗಳು, ಮುರಿದ ಆಂಕರ್ ಪಿನ್‌ಗಳು ಮತ್ತು ಸಡಿಲವಾದ ಬೋಲ್ಟ್‌ಗಳು ತೂಗು ಸೇತುವೆಯನ್ನು ನವೀಕರಿಸುವಾಗ ಗಮನಿಸದ ಲೋಪಗಳಾಗಿವೆ ಎಂದು ಬಹಿರಂಗಪಡಿಸಿದೆ. ಸೇತುವೆಯನ್ನು ಸಾರ್ವಜನಿಕರಿಗೆ ತೆರೆದಿಡುವ ಮೊದಲು ಅದರ ಭಾರ ಹೊರುವ ಸಾಮರ್ಥ್ಯವನ್ನು ನಿರ್ಣಯಿಸಲು ಒರೆವಾ ಗ್ರೂಪ್ ಯಾವುದೇ ಪರಿಣಿತ ಏಜೆನ್ಸಿಯನ್ನು ನೇಮಿಸಿಕೊಂಡಿಲ್ಲ ಎಂದು ವರದಿಯು ಬಹಿರಂಗಪಡಿಸಿದೆ.

 Morbi Bridge disaster: Arrest warrant against Orewa Group MD

ಮೊರ್ಬಿ ದುರಂತದ ತನಿಖೆಗಾಗಿ ಸರ್ಕಾರವು ರಚಿಸಿರುವ ವಿಶೇಷ ತನಿಖಾ ತಂಡವು (SIT) ಬ್ರಿಟಿಷರ ಕಾಲದ ಸೇತುವೆಯ ದುರಸ್ತಿ, ನಿರ್ವಹಣೆ ಮತ್ತು ಕಾರ್ಯಾಚರಣೆಯಲ್ಲಿ ಒರೆವಾ ಗ್ರೂಪ್‌ನ ಹಲವಾರು ಲೋಪಗಳನ್ನು ಉಲ್ಲೇಖಿಸಿದೆ.

English summary
Arrest warrant issued against Orewa Group MD in connection with Gujarat's Morbi Bridge disaster case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X