ಕೊಚ್ಚಿ: ಮಹಿಳಾ ದಿನದಂದೇ ಜೋಡಿ ಮೇಲೆ ಮುಗಿಬಿದ್ದ ಶಿವಸೇನೆ ಕಾರ್ಯಕರ್ತರು

By: ಅನುಶಾ ರವಿ
Subscribe to Oneindia Kannada

ಕೊಚ್ಚಿ, ಮಾರ್ಚ್ 8: ಮಹಿಳಾ ದಿನಾಚರಣೆ ದಿನವೇ ನೈತಿಕ ಪೊಲೀಸ್ ಗಿರಿ ಹೆಸರಿನಲ್ಲಿ ಯುವ ಜೋಡಿಯೊಂದರ ಮೇಲೆ ಕೊಚ್ಚಿಯಲ್ಲಿ ಶಿವ ಸೇನೆ ಕಾರ್ಯಕರ್ತರು ದಾಳಿ ನಡೆಸಿದ ಘಟನೆ ಬೆಳಕಿಗೆ ಬಂದಿದೆ.

ಕೊಚ್ಚಿಯ ಕಡಲ ತೀರದಲ್ಲಿ ವಿಹರಿಸುತ್ತಿದ್ದ ಜೋಡಿಯೊಂದರ ಮೇಲೆ ಬುಧವಾರ ಮಧ್ಯಾಹ್ನ ಶಿವಸೇನೆ ಕಾರ್ಯಕರ್ತರು ದೊಣ್ಣೆಗಳಿಂದ ಹಲ್ಲೆ ಮಾಡಿದ್ದಾರೆ. ಯವತಿ ಮತ್ತು ಯುವಕ ಇಬ್ಬರ ಮೇಲೆಯೂ ಹಲ್ಲೆ ಮಾಡುತ್ತಿದ್ದರೆ ಸಾರ್ವಜನಕರು ನಿಂತು ನೋಡಿದ್ದಾರೆ. ಇಡೀ ವಿಶ್ವವೇ ಮಹಿಳಾ ದಿನಚಾರಣೆಯಲ್ಲಿ ಮಿಂದೇಳುತ್ತಿದ್ದರೆ ಇಲ್ಲಿ ಮಾತ್ರ ಅದೇ ಮಹಿಳೆಯ ಮೇಲೆ ಅಮಾನವೀಯವಾಗಿ ಹಲ್ಲೆ ಮಾಡಲಾಗಿದೆ.[ಕೇರಳದ ಈ ಗರ್ಲ್ಸ್ ಹಾಸ್ಟೆಲಿನಲ್ಲಿ ಬಟ್ಟೆ ಬದಲಿಸಲೂ ಡೋರ್ ಹಾಕುವಂತಿಲ್ಲ]

 Moral policing in Kochi, couples thrashed on Women's day

ಶಿವಸೇನೆ ಕಾರ್ಯಕರ್ತರು ಮಹಿಳೆಗೆ ಹಲ್ಲೆ ಮಾಡುತ್ತಿದ್ದರೆ ಸಾರ್ವಜನಿಕರು ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿಕೊಳ್ಳುತ್ತಿದ್ದರು. ಇನ್ನೊಂದು ಕಡೆ ಸ್ಥಳದಲ್ಲಿದ್ದ ಪೊಲೀಸರೂ ಮಧ್ಯ ಪ್ರವೇಶ ಮಾಡದೇ ನಿಂತುಕೊಂಡು ಚಂದ ನೋಡಿದ್ದಾರೆ. ಜೋಡಿಯ ಮೇಲೆ ಹಲ್ಲೆ ನಡೆದು ಮುಗಿದ ನಂತರವಷ್ಟೆ ಮೈ ಮೇಲಿದ್ದ ಖಾಕಿ ನೆನಪಾಗಿ 5 ಜನರನ್ನು ಕಾಟಾಚಾರಕ್ಕೆ ಬಂಧಿಸಿ ಕರೆದೊಯ್ದಿದ್ದಾರೆ.[ಕೇರಳದಲ್ಲಿ 7 ಅಪ್ರಾಪ್ತ -ಅನಾಥ ಬಾಲಕಿಯರ ಮೇಲೆ ಸರಣಿ ರೇಪ್]

ಇತ್ತೀಚೆಗೆ ಕೇರಳದಲ್ಲಿ ನೈತಿಕ ಪೊಲೀಸ್ ಗಿರಿ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಇತ್ತೀಚೆಗಷ್ಟೆ ಪ್ರೇಮಿಗಳ ದಿನದಂದು ನೈತಿಕ ಪೊಲೀಸ್ ಗಿರಿ ಮಾಡಿ ಯುವಕನೊಬ್ಬನ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರಿಂದ ಆತ ಆತ್ಮಹತ್ಯೆಗೆ ಶರಣಾಗಿದ್ದ. ಈ ಘಟನೆ ಹಸಿರಾಗಿರುವಾಗಲೇ ಈಗ ಮತ್ತೊಂದು ದಾಳಿ ನಡೆದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Members of Shiv Sena attacked youngsters at Kochi Marine drive on Wednesday afternoon. Swinging lathis at men and women, Shiv Sena members indulged in moral policing even as the public remained mute spectators.
Please Wait while comments are loading...