ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಂಕಣದಲ್ಲಿ ಭಾರಿ ಮಳೆ ಮುನ್ಸೂಚನೆ, ಕರ್ನಾಟಕ, ಗೋವಾಕ್ಕೆ ಎಚ್ಚರಿಕೆ!

By Mahesh
|
Google Oneindia Kannada News

ಬೆಂಗಳೂರು, ಜೂನ್ 17: ಮುಂಗಾರು ಮಳೆ ಮಾರುತಗಳು ಸದ್ಯ ತನ್ನ ದಿಕ್ಕನ್ನು ಕೊಂಕಣ ಭಾಗಕ್ಕೆ ತಿರುಗಿಸಿದೆ. ಕರ್ನಾಟಕ ಕರಾವಳಿ, ಗೋವಾ, ಉತ್ತರ ತಮಿಳುನಾಡು, ಈಶಾನ್ಯ ರಾಜ್ಯಗಳ ಪೈಕಿ ಸಿಕ್ಕಿಂನಲ್ಲಿ ಮುಂದಿನ 24 ಗಂಟೆಗಳಲ್ಲಿ ಭಾರಿ ಗಾಳಿ ಸಹಿತ ಮಳೆಯಾಗುವ ಸಾಧ್ಯತೆಗಳಿವೆ.

ಭಾರತೀಯ ಹವಾಮಾನ ಇಲಾಖೆ (ಐಎಂಡಿ)ಯು ಭಾನುವಾರ(ಜೂಣ್ 17) ಕ್ಕೆ ನೀಡಿರುವ ಮುನ್ಸೂಚನೆಯಂತೆ ಮುಂಗಾರು ಮಾರುತಗಳು ಮುಂಬೈ ಸೇರಿದಂತೆ ಥಾಣೆ, ಅಹ್ಮದ್ ನಗರ, ಬುಲ್ದಾನಾ, ಅಮರಾವತಿ, ಗೋಂಡಿಯಾ, ಟಿಟ್ಲಾಘರ್, ಕಟಕ್, ಮಿಡ್ನಾಪುರ್, ಗೋಲಾಪರ ಹಾಗೂ ಬಾಘ್ ಡೋಗ್ರಾಗಳಲ್ಲಿ ಹಾದು ಹೋಗಲಿದೆ.

Monsoon update: Heavy rain likely over Konkan & Goa

ನೈಋತ್ಯ ಮುಂಗಾರು ಮುಂದಿನ 67 ದಿನಗಳ ಕಾಲ ಸಕ್ರಿಯವಾಗಿದ್ದರೂ, ಕಳೆದ ಬಾರಿಗೆ ಹೋಲಿಸಿದರೆ ಸಾಧಾರಣ ಎನಿಸುವಷ್ಟು ಪರಿಣಾಮ ಬೀರಲಿದೆ.

ಮುಂಗಾರು ಎಲ್ಲೆಲ್ಲಿ ಜೋರು:

ಕೊಂಕಣ ಭಾಗದ ಮಧ್ಯ ಮಹಾರಾಷ್ಟ್ರ, ಗೋವಾ ಹಾಗೂ ಕರ್ನಾಟಕದ ಕರಾವಳಿಯಲ್ಲಿ ಅಲ್ಲಲ್ಲಿ ಭಾರಿ ಮಳೆ ನಿರೀಕ್ಷಿತ, ಉಳಿದಂತೆ, ಅಂಡಮಾನ್ ಹಾಗೂ ನಿಕೋಬಾರ್ ದ್ವೀಪ, ಉತ್ತರಾಖಂಡ್, ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ಪಶ್ಚಿಮ ಬಂಗಾಲದ ಹಿಮಾಲಯ ಪ್ರದೇಶ ಹಾಗೂ ಸಿಕ್ಕಿಂನಲ್ಲಿ ಮಳೆ ಬೀಳಬಹುದು.

Monsoon update: Heavy rain likely over Konkan & Goa

ಹಿಮಾಚಲ ಪ್ರದೇಶ, ಪಂಜಾಬ್, ಹರ್ಯಾಣ, ಚಂದೀಗಢ ದೆಹಲಿ ಹಾಗೂ ಉತ್ತರಪ್ರದೇಶದ ಪಶ್ಚಿಮ ಭಾಗದಲ್ಲಿ ಅಲ್ಲಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರಾವಳಿ ಕರ್ನಾಟಕದಲ್ಲಿ ಭಾರೀ ಮಳೆ ಮುನ್ಸೂಚನೆಕರಾವಳಿ ಕರ್ನಾಟಕದಲ್ಲಿ ಭಾರೀ ಮಳೆ ಮುನ್ಸೂಚನೆ

ಉಳಿದಂತೆ, ಜಮ್ಮು ಮತ್ತು ಕಾಶ್ಮೀರ ಭಾಗದ ಜಮ್ಮು, ಆಂಧ್ರಪ್ರದೇಶದ ಉತ್ತರ ಕರಾವಳಿ, ಉತ್ತರಪ್ರದೇಶದ ಪೂರ್ವ, ಮರಾಠ್ ವಾಡ, ಉತ್ತರ ಬಿಹಾರ ಹಾಗೂ ರಾಜಸ್ಥಾನ ಕೆಲ ಭಾಗದಲ್ಲಿ ಧೂಳು, ಗಾಳಿ,ಸಿಡಿಲು- ಗುಡುಗು ಸಹಿತ ಮಳೆ ನಿರೀಕ್ಷಿಸಬಹುದು ಎಂದು ಹವಾಮಾನ ಇಲಾಖೆ ಸೂಚಿಸಿದೆ.

English summary
Active to vigorous Monsoon conditions were witnessed over the northeastern states, Sikkim, Konkan & Goa Coast and North Tamil Nadu. In the span of 24 hours, active to vigorous Monsoon conditions are expected over Konkan and Goa Coast, North Tamil Nadu Coast, Northeastern states, Andaman and Nicobar Islands, Sikkim and pockets of Sub-Himalayan West Bengal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X