ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರಾವಳಿ ಮತ್ತು ದಕ್ಷಿಣ ಒಳನಾಡು ಕರ್ನಾಟಕದಲ್ಲಿ ಭಾರೀ ಮಳೆ ಸಾಧ್ಯತೆ

By ಮಾಧುರಿ ಅದ್ನಾಳ್
|
Google Oneindia Kannada News

ಬೆಂಗಳೂರು, ಜೂನ್ 13: ನೈರುತ್ಯ ಮಾನ್ಸೂನ್ ಮಾರುತಗಳು ಒಡಿಶಾ, ಪಶ್ಚಿಮ ಬಂಗಾಳದ ಕೆಲವು ಭಾಗಗಳು, ಸಂಪೂರ್ಣ ಅರುಣಾಚಲ ಪ್ರದೇಶ, ಅಸ್ಸಾಂನ ಕೆಲವು ಪ್ರದೇಶಗಳು, ಮೇಘಾಲಯ ಮತ್ತು ಸಿಕ್ಕಿಂಗೆ ತಲುಪಿವೆ. ಮುಂದಿನ 24 ಗಂಟೆಗಳಲ್ಲಿ ಮಣಿಪುರ, ಮಿಜೋರಾಂ, ನಾಗಲ್ಯಾಂಡ್ ಮತ್ತು ತ್ರಿಪುರಾದ ಇನ್ನೂ ಹೆಚ್ಚಿನ ಭಾಗಗಳಿಗೆ ತಲುಪಲಿದೆ.

ನೈರುತ್ಯ ಮುಂಗಾರು ಮಾರುತಗಳು ಮುಂಬೈನ ಥಾಣೆ, ಅಹ್ಮದ್ ನಗರ, ಬುಲ್ಧಾನಾ, ಅಮ್ರೋಟಿ, ಗೋಂಡಿಯಾ, ಟಿಟ್ಲಾ ಗರ್, ಕಟಕ್, ಮಿಡ್ನಾಪುರ, ಗೋಲ್ ಪಾರಾ ಮತ್ತು ಬಗ್ಡೋಗ್ರಾ ಮೂಲಕ ಹಾದುಹೋಗಿವೆ. ಮುಂಗಾರು ಮಾರುತಗಳು ಮುಂದಿನ ಒಂದು ವಾರ ದುರ್ಬಲವಾಗಲಿದ್ದು, ಹೆಚ್ಚಿನ ಮಳೆ ಸುರಿಯಲಿಕ್ಕಿಲ್ಲ ಎಂದು ಅಂದಾಜಿಸಲಾಗಿದೆ.

Monsoon update: Heavy rain likely in Nagaland, Manipur, Mizoram and Tripura

ನೈಋತ್ಯ ಮಾನ್ಸೂನ್ ಆರ್ಭಟಕ್ಕೆ ಸಿಲುಕಿ ಜಲಾವೃತವಾದ ನಗರಗಳುನೈಋತ್ಯ ಮಾನ್ಸೂನ್ ಆರ್ಭಟಕ್ಕೆ ಸಿಲುಕಿ ಜಲಾವೃತವಾದ ನಗರಗಳು

ಹವಾಮಾನ ಇಲಾಖೆಯ ಪ್ರಕಾರ ಮುಂದಿನ 24 ಗಂಟೆಗಳಲ್ಲಿ ಕರಾವಳಿ ಮತ್ತು ದಕ್ಷಿಣ ಒಳನಾಡು ಕರ್ನಾಟಕ, ಕೇರಳ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾದಲ್ಲಿ ಭಾರೀ ಮಳೆಯಾಗಲಿದೆ. ಅರುಣಾಚಲ ಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳ, ಸಿಕ್ಕಿಂ, ದಕ್ಷಿಣ ಕೊಂಕಣ್ ಮತ್ತು ಗೋವಾದಲ್ಲಿ ಸಾಧಾರಣ ಮಳೆಯಾಗಲಿದೆ.

Monsoon update: Heavy rain likely in Nagaland, Manipur, Mizoram and Tripura

ಬಿಹಾರ, ಜಾರ್ಖಂಡ್ ಮತ್ತು ಒಡಿಶಾದ ಕೆಲವು ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಎಚ್ಚರಿಕೆ ನೀಡಲಾಗಿದೆ.

Monsoon update: Heavy rain likely in Nagaland, Manipur, Mizoram and Tripura

ಗೋವಾ, ಕರ್ನಾಟಕ, ಕೇರಳ ಕರಾವಳಿಯಲ್ಲಿ ಸಮುದ್ರ ಇದೇ ಅವಧಿಯಲ್ಲಿ ಪ್ರಕ್ಷುಬ್ಧವಾಗಲಿದೆ. ತಮಿಳುನಾಡು ಕರಾವಳಿ, ಆಂಧ್ರ ಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳ ಕರಾವಳಿ, ಸೊಮಾಲಿಯಾ ಕರಾವಳಿ, ಓಮನ್ ಕರಾವಳಿಯಲ್ಲಿಯೂ ಸಮುದ್ರ ಪ್ರಕ್ಷುಬ್ಧವಾಗಲಿದ್ದು ಮೀನುಗಾರರು ಸಮುದ್ರಕ್ಕಿಳಿಯದಂತೆ ಸೂಚನೆ ನೀಡಲಾಗಿದೆ.

English summary
Southwest Monsoon has now reached more parts of Odisha, Gangetic West Bengal, entire Arunachal Pradesh, some more parts of Assam, and Meghalaya and Sikkim. During the next 24 hours, active to vigorous Monsoon conditions are expected over Manipur, Mizoram, Nagaland, and Tripura.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X