ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿರೀಕ್ಷಿಸಿ...ಶೀಘ್ರದಲ್ಲೇ ಯುಪಿ-ದೆಹಲಿಗೆ ಮುಂಗಾರು ಪ್ರವೇಶ

|
Google Oneindia Kannada News

ನವದೆಹಲಿ ಜೂನ್ 14: ಬೇಸಿಗೆಯ ಬಿಸಿ ತಟ್ಟಿರುವ ಉತ್ತರ ಭಾರತದಲ್ಲಿ ಮುಂಗಾರು ಮಳೆಗಾಗಿ ಜನರು ಕಾತರದಿಂದ ಕಾಯುತ್ತಿದೆ. ಯುಪಿ, ದೆಹಲಿ, ಬಿಹಾರಗಳಲ್ಲಿ ತಾಪಮಾನ ನಲವತ್ತು ಡಿಗ್ರಿ ಸೆಲ್ಸಿಯಸ್ ದಾಟುತ್ತಿದೆ. ಜನರು ಮನೆಯಿಂದ ಹೊರಬರಲು ತೀವ್ರತರವಾದ ಶಾಖವನ್ನು ಎದುರಿಸುತ್ತಿದ್ದಾರೆ. ಈ ನಡುವೆ ಭಾರತೀಯ ಹವಾಮಾನ ಇಲಾಖೆಯು ಮುಂಗಾರು ಪ್ರವೇಶದ ಬಗ್ಗೆ ಸಿಹಿ ಸುದ್ದಿಯನ್ನು ನೀಡಿದೆ. ಮುಂಗಾರು ತನ್ನದೇ ಆದ ವೇಗದಲ್ಲಿ ಚಲಿಸುತ್ತಿದ್ದು, ಇದೇ ಪರಿಸ್ಥಿತಿ ಮುಂದುವರೆದರೆ ಅದರ ನಿಗದಿತ ಸಮಯಕ್ಕಿಂತ ಮೊದಲು ದೆಹಲಿ ಮತ್ತು ಯುಪಿ ತಲುಪಬಹುದು ಎಂದು ಹೇಳಿದೆ.

ಪ್ರಸ್ತುತ ಪರಿಸ್ಥಿತಿಯ ಕುರಿತು ಸೋಮವಾರ ಮಾತನಾಡಿದ ಐಎಂಡಿ, ಪ್ರಸ್ತುತ ಅರಬ್ಬಿ ಸಮುದ್ರದ ಕೆಲವು ಭಾಗಗಳು, ಗುಜರಾತ್‌ನ ಕೆಲವು ಭಾಗಗಳು, ಸಂಪೂರ್ಣ ಕೊಂಕಣ, ಮಧ್ಯ ಮಹಾರಾಷ್ಟ್ರದ ಹೆಚ್ಚಿನ ಭಾಗಗಳು, ಮರಾಠವಾಡ, ಕರ್ನಾಟಕ, ತೆಲಂಗಾಣ, ರಾಯಲಸೀಮಾ, ತಮಿಳುನಾಡಿನ ಕೆಲವು ಭಾಗಗಳಲ್ಲಿ ನೈರುತ್ಯ ಮುಂಗಾರು ಇದೆ. ಸದ್ಯ ಇದು ಬಿಹಾರದ ಕೆಲವು ಭಾಗಗಳನ್ನು ತಲುಪಿದೆ. ಇದರಿಂದಾಗಿ ಈ ರಾಜ್ಯಗಳಲ್ಲಿ ಮಳೆಯಾಗುವ ನಿರೀಕ್ಷೆ ತಟ್ಟವಾಗಿದೆ. ಈ ರಾಜ್ಯಗಳ ಕೆಲವೆಡೆ ಗಾಳಿ ಮಳೆ ಸಾಧ್ಯತೆಗಳು ಇವೆ.

ದೇಶದ ಹಲವೆಡೆ ಅಧಿಕ ಶಾಖ ಇನ್ನೂ ಕೆಲವು ಕಡೆ ಅಧಿಕ ಮಳೆಯಾಗುವುದು ಆತಂಕವನ್ನು ಹೆಚ್ಚಿಸಿದೆ. ಇದಕ್ಕೆ ಹವಾಮಾನದಲ್ಲಿನ ಬದಲಾವಣೆ, ಪರಿಸರದ ಮೇಲಾಗುತ್ತಿರುವ ದುಷ್ಪರಿಣಾಮಗಳಾಗಿವೆ ಎನ್ನಲಾಗುತ್ತದೆ. ಹೀಗಾಗಿ, ಕೆಲವೆಡೆ ಕಟ್ಟೆಚ್ಚರ ವಹಿಸಲಾಗಿದೆ.

ದೆಹಲಿಯಲ್ಲಿ ಜೂನ್ 16ಕ್ಕೆ ಮಳೆ

ದೆಹಲಿಯಲ್ಲಿ ಜೂನ್ 16ಕ್ಕೆ ಮಳೆ

ಮುಂಗಾರು ನೆರೆಯ ರಾಜ್ಯಗಳ ಮೇಲೂ ಪರಿಣಾಮ ಬೀರುತ್ತಿದ್ದು, ಕೆಲವು ರಾಜ್ಯಗಳಲ್ಲಿ ಅಲ್ಪ ಪ್ರಮಾಣದ ಮಳೆಯಾಗುತ್ತಿದೆ. ಇದನ್ನು ಮುಂಗಾರು ಪೂರ್ವ ಚಟುವಟಿಕೆ ಎನ್ನುತ್ತಾರೆ. ಈ ಬಾರಿಯ ಮಾನ್ಸೂನ್ ಉತ್ತರ ಪ್ರದೇಶದಲ್ಲಿ ನೇರ ಪ್ರವೇಶವನ್ನು ಹೊಂದಬಹುದು ಎಂದು IMD ಹೇಳಿದೆ. ಯಾವುದೇ ಪೂರ್ವ ಮಾನ್ಸೂನ್ ಕ್ರಿಯೆಯಿಲ್ಲದೆ, ಒಟ್ಟಾರೆ ದೆಹಲಿಯಲ್ಲಿ ಜೂನ್ 16 ರಂದು ಮತ್ತು ಯುಪಿ ಜೂನ್ 17 ರಂದು ಮಳೆಯಾಗುವ ನಿರೀಕ್ಷೆಯಿದೆ. ದೆಹಲಿಯಲ್ಲಿ ಈ ಮಳೆಯು ಮುಂಗಾರು ಪೂರ್ವ ಮಳೆಯಾಗಿದ್ದರೆ, ಯುಪಿಯಲ್ಲಿ ಮಾನ್ಸೂನ್ ಮಳೆಯಾಗಲಿದೆ.

ಹಲವೆಡೆ ಚದುರಿದ ಮಳೆ

ಹಲವೆಡೆ ಚದುರಿದ ಮಳೆ

ಮುಂದಿನ 24 ರಿಂದ 48 ಗಂಟೆಗಳಲ್ಲಿ ದೇಶದಾದ್ಯಂತ ಶಾಖದ ಅಲೆಯು ಕಡಿಮೆಯಾಗುವ ನಿರೀಕ್ಷೆಯಿದೆ. ತಮಿಳುನಾಡು, ಆಗ್ನೇಯ ರಾಜಸ್ಥಾನ, ಉತ್ತರ ಪ್ರದೇಶ, ಜಾರ್ಖಂಡ್ ಮತ್ತು ಗಂಗಾನದಿ ಪಶ್ಚಿಮ ಬಂಗಾಳದಲ್ಲಿ ಚದುರಿದ ಮಳೆಯಾಗಬಹುದು. ಆದರೆ ದೇಶದಾದ್ಯಂತ ಶಾಖದ ಅಲೆಯ ಪರಿಸ್ಥಿತಿಗಳು ಕಡಿಮೆಯಾಗುವ ನಿರೀಕ್ಷೆಯಿದೆ. ಮುಂದಿನ 24 ರಿಂದ 48 ಗಂಟೆಗಳವರೆಗೆ ಶಾಖದ ಅಲೆ ಕಡಿಮೆಯಾಗುವ ಸಾಧ್ಯತೆ ಇದೆ.

ಹಲವೆಡೆ ಭಾಗದಲ್ಲಿ ಗುಡುಗು ಸಹಿತ ಮಳೆ

ಹಲವೆಡೆ ಭಾಗದಲ್ಲಿ ಗುಡುಗು ಸಹಿತ ಮಳೆ

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಮಳೆಯ ಮುನ್ಸೂಚನೆಯಿದೆ. ಜೂನ್ 15ರ ಬೆಳಗ್ಗಿನವರೆಗೂ ಮಳೆ ಮುಂದುವರಿಯಲಿದೆ ಎಂದು ರಾಜ್ಯ ಹವಾಮಾನ ಇಲಾಖೆ (IMD) ಸೂಚನೆ ನೀಡಿದೆ.ಮುಂದಿನ 24 ಗಂಟೆಗಳಲ್ಲಿ ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲಿ ಮತ್ತು ಬಹುತೇಕ ಕಡೆಗಳಲ್ಲಿ ಹಾಗೂ ಒಳನಾಡಿನ ಕೆಲವು ಭಾಗದಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಇದರ ಹೊರತಾಗಿ ರಾಜ್ಯದ ಹವಾಮಾನದಲ್ಲಿ ಯಾವುದೇ ಗಮನಾರ್ಹ ಬದಲಾವಣೆಯಿಲ್ಲ.

ಹಲವೆಡೆ ಬೆಳಗಿನ ಜಾವ ಮಂಜು ಮುಜುಕಿನ ವಾತಾವರಣ

ಹಲವೆಡೆ ಬೆಳಗಿನ ಜಾವ ಮಂಜು ಮುಜುಕಿನ ವಾತಾವರಣ

ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿದ್ದು, ಗುಡುಗು ಸಹಿತ ಮಳೆಯಾಗಿದೆ. ಕೆಲವು ಕಡೆಗಳಲ್ಲಿ ಬೆಳಗಿನ ಜಾವ ಮಂಜು ಮುಸುಕಿದ ವಾತಾವರಣ ನಿರ್ಮಾಣವಾಗಲಿದ್ದು, ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಆಗಿದ್ದರೆ, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಕೊಡಗು, ಕೋಲಾರ, ಮೈಸೂರು, ರಾಮನಗರ, ಶಿವಮೊಗ್ಗ ಮತ್ತು ತುಮಕೂರಿನ ಒಂದೆರೆಡು ಕಡೆಗಳಲ್ಲಿ ಮಳೆಯಾಗಲಿದೆ.

Recommended Video

ಐರ್ಲೆಂಡ್ ವಿರುದ್ಧದ ಸರಣಿಗೆ VVS ಲಕ್ಷ್ಮಣ್ ಕೋಚ್:ಹಾಗಾದ್ರೆ ದ್ರಾವಿಡ್ ಕಥೆ??? | *Cricket | Oneindia Kannada

English summary
The monsoon could reach Delhi and UP ahead of schedule, the Met Department said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X