ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಹುಲ್ ಕಣ್ಣೇಟಿನ ವರ್ತನೆಗೆ ಸುಮಿತ್ರಾ ಮಹಾಜನ್ ತರಾಟೆ

|
Google Oneindia Kannada News

ನವದೆಹಲಿ, ಜುಲೈ 20: ಲೋಕಸಭೆಯಲ್ಲಿ ತಮ್ಮ ಭಾಷಣದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಪ್ಪಿಕೊಂಡು ನಂತರ ಕಣ್ಣುಮಿಟುಕಿಸಿದ ರಾಹುಲ್ ಗಾಂಧಿ ಅವರ ವರ್ತನೆ ಅನುಚಿತವಾದುದು ಎಂದು ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಹೇಳಿದರು.

'ಪ್ರಧಾನಿ ಸ್ಥಾನವು ಗೌರವಯುತವಾದುದ್ದಾಗಿದ್ದು, ಮೋದಿ ಅವರು ಆ ಸ್ಥಾನದಲ್ಲಿದ್ದಾರೆ. ಕಣ್ಣು ಮಿಟುಕಿಸುವುದು ಸಂಸತ್‌ನ ಗೌರವಕ್ಕೆ ತಕ್ಕುದಲ್ಲ.

ರಾಹುಲ್ ಗಾಂಧಿ ಅಪ್ಪುಗೆ, ಕಣ್ಮಿಟುಕು: ಗಣ್ಯರು ಏನಂತಾರೆ?ರಾಹುಲ್ ಗಾಂಧಿ ಅಪ್ಪುಗೆ, ಕಣ್ಮಿಟುಕು: ಗಣ್ಯರು ಏನಂತಾರೆ?

ರಾಹುಲ್‌ ನನ್ನ ಶತ್ರುವಲ್ಲ. ಅವರು ನನ್ನ ಮಗನಂತೆ. ತಾಯಿಯ ಕೆಲಸ ತಪ್ಪನ್ನು ತಿದ್ದುವುದು. ಅಪ್ಪುಗೆಯನ್ನು ನಾನ್ಯಾಕೆ ವಿರೋಧಿಸಲಿ? ಆದರೆ ಅಪ್ಪಿಕೊಂಡ ಬಳಿಕ ಕಣ್ಣು ಮಿಟುಕಿಸಿದ್ದು ಸರಿಯಾದ ನಡವಳಿಕೆಯಲ್ಲ' ಎಂದು ಸುಮಿತ್ರಾ ಮಹಾಜನ್ ಹೇಳಿದರು.

monsoon session Rahul gandhi winks improper sumitra mahajan

ಸದಸ್ಯರು ಸದನದ ಶಿಷ್ಟಾಚಾರವನ್ನು ಕಾಪಾಡಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

'ಸಂಸತ್‌ನ ಗೌರವವನ್ನು ಕಾಪಾಡಬೇಕಾದವರು ನಾವು ಎಂಬುದನ್ನು ದಯವಿಟ್ಟು ಅರ್ಥಮಾಡಿಕೊಳ್ಳಿ. ಬೇರೆ ಯಾರೂ ಹೊರಗಿನಿಂದ ಬಂದು ಅದನ್ನು ಮಾಡುವುದಿಲ್ಲ.

ಅವಿಶ್ವಾಸ ನಿರ್ಣಯ LIVE: ರಾಹುಲ್ ನಂತರ ಮೋದಿ ಭಾಷಣದ ಮೋಡಿಅವಿಶ್ವಾಸ ನಿರ್ಣಯ LIVE: ರಾಹುಲ್ ನಂತರ ಮೋದಿ ಭಾಷಣದ ಮೋಡಿ

ಸಂಸತ್‌ನ ಸದಸ್ಯರಾಗಿ ಅದರ ಶಿಷ್ಟಾಚಾರಗಳನ್ನು ನಾವು ಕಾಪಾಡಿಕೊಳ್ಳಬೇಕು. ನೀವೆಲ್ಲರೂ (ವಿರೋಧ ಪಕ್ಷ ಹಾಗೂ ಆಡಳಿತ ಪಕ್ಷ) ಪ್ರೀತಿ ಮತ್ತು ಸ್ನೇಹದಿಂದ ಬದುಕಬೇಕು ಎಂದು ನಾನು ಬಯಸುತ್ತೇನೆ' ಎಂದರು.

ಪ್ರಿಯಾ ವಾರಿಯರ್ ರನ್ನು ಬೀಟ್ ಮಾಡಿದ ರಾಹುಲ್ ಗಾಂಧಿ!ಪ್ರಿಯಾ ವಾರಿಯರ್ ರನ್ನು ಬೀಟ್ ಮಾಡಿದ ರಾಹುಲ್ ಗಾಂಧಿ!

ಅವಿಶ್ವಾಸ ನಿರ್ಣಯ ಮಂಡನೆ ಚರ್ಚೆ ವೇಳೆ ತಮ್ಮ ಭಾಷಣ ಮುಗಿದ ಬಳಿಕ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ತೆರಳಿ ಅಪ್ಪಿಕೊಂಡು, ಕೈಕುಲುಕಿದ್ದರು.

ತಮ್ಮ ಕುರ್ಚಿಯಲ್ಲಿ ಕುಳಿತುಕೊಂಡ ನಂತರ ತಮ್ಮ ಪಕ್ಷದ ಮುಖಂಡರ ಜತೆ ಕುಳಿತು ನಗುತ್ತಾ ಕಣ್ಣು ಮಿಟುಕಿಸಿದ್ದರು.

English summary
monsoon session, no confidence motion: Lok Sabha speaker Sumitra Mahajan on Friday terming that Rahul Gandhi's wink is against the dignity of Parliament.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X