ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅವಿಶ್ವಾಸ ನಿರ್ಣಯ : ಲೋಕಸಭೆಯಲ್ಲಿ 12 ಗಂಟೆ ನಡೆದ ಚರ್ಚೆಯ ಮುಖ್ಯಾಂಶ

By Mahesh
|
Google Oneindia Kannada News

ನವದೆಹಲಿ, ಜುಲೈ 20: ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಮಂಡಿಸಲಾಗಿರುವ ಅವಿಶ್ವಾಸ ಗೊತ್ತುವಳಿ ಕುರಿತಂತೆ ಶುಕ್ರವಾರ ಮಧ್ಯಾಹ್ನ ಚರ್ಚೆ, ಭಾಷಣ ನಡೆಯಲಿದೆ. ಅವಿಶ್ವಾಸ ನಿರ್ಣಯ ಮಂಡನೆ ಮೂಲಕ ವಿಪಕ್ಷಗಳು, ಆಡಳಿತಾರೂಢ ಎನ್ಡಿಎ ಸರ್ಕಾರ ಬೀಳಿಸಲು ಸಾಧ್ಯವಿಲ್ಲದಿದ್ದರೂ ಇದು ಪ್ರತಿಷ್ಠೆಯ ನಿರ್ಣಯವಾಗಿದೆ. ರಾಹುಲ್ ಗಾಂಧಿ ಅವರ ಜೂಮ್ಲಾ, ಅಪ್ಪುಗೆ, ಕಣ್ ಮಿಟುಕು ನಡೆ ನಂತರ ಪ್ರಧಾನಿ ಮೋದಿ ಅವರ ಪ್ರತಿಕ್ರಿಯೆಗಾಗಿ ಎಲ್ಲರೂ ಕಾದಿದ್ದಾರೆ.

ಅವಿಶ್ವಾಸ ನಿರ್ಣಯ: ಲೋಕಸಭೆಗೆ ಹಾಜರಾಗದೆ ತಟಸ್ಥವಾಗುಳಿದ ಶಿವಸೇನಾ ಅವಿಶ್ವಾಸ ನಿರ್ಣಯ: ಲೋಕಸಭೆಗೆ ಹಾಜರಾಗದೆ ತಟಸ್ಥವಾಗುಳಿದ ಶಿವಸೇನಾ

ಲೋಕಸಭೆಯಲ್ಲಿ ಎನ್‌ಡಿಎ ಮೈತ್ರಿಕೂಟ 314 ಸದಸ್ಯ ಬಲ ಹೊಂದಿದೆ. ಬಹುಮತ ಸಾಬೀತು ಪಡಿಸಲು ಮ್ಯಾಜಿಕ್ ನಂಬರ್ 268. 'ಬಿಜೆಪಿ ಕೇವಲ ಎನ್‌ಡಿಎ ಮೈತ್ರಿಕೂಟದ ಮತಗಳು ಮಾತ್ರವಲ್ಲ, ಬೇರೆ ಪಕ್ಷಗಳಿಂದಲೂ ಮತಗಳನ್ನು ಪಡೆಯಲಿದೆ' ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಂಸತ್ತಿನ ಉಭಯ ಸದನಗಳ ಸಂಖ್ಯಾಬಲ ಎಷ್ಟಿದೆ? ಸಂಸತ್ತಿನ ಉಭಯ ಸದನಗಳ ಸಂಖ್ಯಾಬಲ ಎಷ್ಟಿದೆ?

Monsoon Session Live Updates No Confidence opposition Parliament

ಟಿಡಿಪಿ ಸಂಸದ ಕೆ.ಶ್ರೀನಿವಾಸ್ ಮಂಡಿಸಿದ ಅವಿಶ್ವಾಸ ನಿರ್ಣಯವನ್ನು ಸ್ಪೀಕರ್ ಸುಮಿತ್ರಾ ಮಹಾಜನ್ ಅಂಗೀಕರಿಸಿದ್ದಾರೆ. ಸದನದಲ್ಲಿ ಬಿಜೆಪಿ ಅವಿಶ್ವಾಸ ನಿರ್ಣಯದಲ್ಲಿ ಜಯಗಳಿಸುವ ಉತ್ಸಾಹದಲ್ಲಿದೆ.

ತಾಯಿಯನ್ನು ಬದುಕಿಸದಿದ್ದರೆ ಬಿಜೆಪಿಗೆ ಶಾಪ : ಮೋದಿ ಮೇಲೆ ವಾಗ್ದಾಳಿತಾಯಿಯನ್ನು ಬದುಕಿಸದಿದ್ದರೆ ಬಿಜೆಪಿಗೆ ಶಾಪ : ಮೋದಿ ಮೇಲೆ ವಾಗ್ದಾಳಿ

Monsoon Session Live Updates No Confidence opposition Parliament

ಅವಿಶ್ವಾಸ ನಿರ್ಣಯದ ಪರ ಮಾತನಾಡಲು ಬಿಜೆಪಿಗೆ 3 ಗಂಟೆ 33 ನಿಮಿಷದ ಅವಕಾಶ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕೊನೆಯಲ್ಲಿ ಮಾತನಾಡಿದರು.

Newest FirstOldest First
11:11 PM, 20 Jul

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿಶ್ವಾಸ ಮತದಲ್ಲಿ ಗೆಲುವು ಸಾಧಿಸಿದೆ. ಸರ್ಕಾರದ ಪರವಾಗಿ325 ಮತ, ವಿರುದ್ಧವಾಗಿ 126 ಮತಗಳು ಚಲಾವಣೆಯಾದವು.
11:00 PM, 20 Jul

ಅವಿಶ್ವಾಸ ನಿರ್ಣಯವನ್ನು ಮತಕ್ಕೆ ಹಾಕಿದ ಸ್ಪೀಕರ್ ಸುಮಿತ್ರಾ ಮಹಾಜನ್.
10:56 PM, 20 Jul

ನರೇಂದ್ರ ಮೋದಿ ಉತ್ತಮ ನಟರು. ಅವರಿಗೆ ಉತ್ತಮ ನಟ ಪ್ರಶಸ್ತಿ ನೀಡಬೇಕು. ಒಂದೂವರೆಗಂಟೆ ಬ್ಲಾಕ್ ಬಾಸ್ಟರ್ ಬಾಲಿವುಡ್ ಸಿನಿಮಾ ನೋಡಿದಂತೆ ಆಯಿತು : ಡಿಟಿಪಿ ಸಂಸದ ಶ್ರೀನಿವಾಸ್ ಅವರಿಂದ ಮೋದಿ ಭಾಷಣಕ್ಕೆ ಟೀಕೆ
10:50 PM, 20 Jul

ಸಂಸತ್‌ನಲ್ಲಿ ಭಾಷಣ ಮುಗಿಸಿದ ಪ್ರಧಾನಿ ನರೇಂದ್ರ ಮೋದಿ
10:45 PM, 20 Jul

ನರೇಂದ್ರ ಮೋದಿ ಅವರಿಗೆ ಪ್ರಶ್ನೆ ಕೇಳಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ
10:41 PM, 20 Jul

ಭಾರತ ಮಾಲಾ ಯೋಜನೆಯಡಿ ರಸ್ತೆಗಳ ಅಭಿವೃದ್ಧಿ ಮಾಡಲಾಗಿದೆ. ರೈಲು, ಮೆಟ್ರೋ ರೈಲುಗಳ ಸೇವೆಯನ್ನು ಅಭಿವೃದ್ಧಿ ಮಾಡಲಾಗುತ್ತಿದೆ.
10:36 PM, 20 Jul

ಬ್ಯಾಂಕುಗಳ ಸಾಲ ತೀರಿಸದವರ ವಿರುದ್ಧ ನಾವು ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಮೋದಿ ಲೋಕಸಭೆಯಲ್ಲಿ ಭರವಸೆ ನೀಡಿದರು.
Advertisement
10:30 PM, 20 Jul

ನಮಗೆ ದೇಶದ ಅರ್ಥ ವ್ಯವಸ್ಥೆ ಬಗ್ಗೆ ಶ್ವೇತ ಪತ್ರ ಹೊರಡಿಸುವ ಮನಸ್ಸು ಇತ್ತು. ಆದರೆ, ದೇಶದ ಆರ್ಥಿಕ ಪರಿಸ್ಥಿತಿ ಯಾವ ಮಟ್ಟದಲ್ಲಿತ್ತು ಎಂಬುದು ಎಲ್ಲರಿಗೂ ತಿಳಿದಿದೆ.
10:25 PM, 20 Jul

ಈ ಸದನದ ಮೂಲಕ ನಾನು ಆಂಧ್ರಪ್ರದೇಶದ ಜನರಿಗೆ ಭರವಸೆ ನೀಡುತ್ತೇನೆ. ರಾಜಧಾನಿ ನಿರ್ಮಾಣ, ರೈತರ ಸಮಸ್ಯೆಗಳಿಗೆ ಕೇಂದ್ರದ ಎನ್‌ಡಿಎ ಸರ್ಕಾರ ಸಹಕಾರ ನೀಡಲಿದೆ. ರಾಜ್ಯದ ಎಲ್ಲಾ ಜನತೆಯ ಬೇಡಿಕೆಯನ್ನು ಸರ್ಕಾರ ಗೌರವಿಸುತ್ತದೆ.
10:21 PM, 20 Jul

ಈ ಸದನದ ಮೂಲಕ ನಾನು ಆಂಧ್ರಪ್ರದೇಶದ ಜನರಿಗೆ ಭರವಸೆ ನೀಡುತ್ತೇನೆ. ರಾಜಧಾನಿ ನಿರ್ಮಾಣ, ರೈತರ ಸಮಸ್ಯೆಗಳಿಗೆ ಕೇಂದ್ರದ ಎನ್‌ಡಿಎ ಸರ್ಕಾರ ಸಹಕಾರ ನೀಡಲಿದೆ. ರಾಜ್ಯದ ಎಲ್ಲಾ ಜನತೆಯ ಬೇಡಿಕೆಯನ್ನು ಸರ್ಕಾರ ಗೌರವಿಸುತ್ತದೆ.
10:17 PM, 20 Jul

ಮೋದಿ ಮತ್ತು ರಾಹುಲ್ ಗಾಂಧಿ ಕಣ್ಣೋಟದ ಆಟ..
10:14 PM, 20 Jul

ಅಟಲ್ ಬಿಹಾರಿ ವಾಜಪೇಯಿ ಅವರು ಮೂರು ರಾಜ್ಯಗಳನ್ನು ರಚನೆ ಮಾಡಿದರು. ಶಾಂತಿ ಸುವ್ಯವಸ್ಥೆಯಿಂದ ರಾಜ್ಯಗಳು ಪ್ರಗತಿ ಹೊಂದುತ್ತಿವೆ. ಆದರೆ, ರಾಜಕೀಯ ಲಾಭಕ್ಕಾಗಿ ಆಂಧ್ರಪ್ರದೇಶ, ತೆಲಂಗಾಣ ರಚನೆ ಮಾಡಲಾಯಿತು
Advertisement
10:11 PM, 20 Jul

ಕಾಂಗ್ರೆಸ್ ಮುಳುಗಿದೆ. ಅವರ ಜೊತೆ ಹೋಗುವವರು ಮುಳುಗುತ್ತಾರೆ ಎಂದು ಮೋದಿ ಲೇವಡಿ ಮಾಡಿದರು.
10:07 PM, 20 Jul

ಕಾಂಗ್ರೆಸ್‌ ಮಂತ್ರ ಒಂದೇ ಅಧಿಕಾರದಲ್ಲಿ ನಾವಿರಬೇಕು. ಇಲ್ಲವಾದಲ್ಲಿ ಬೇರೆಯವರು ಇರಬಾರದು ಎಂದು ಅಪಪ್ರಚಾರ ಮಾಡುತ್ತದೆ.
10:05 PM, 20 Jul

ನಿಮ್ಮ ಕಣ್ಣಿನ ಆಟವನ್ನು ಇಡೀ ದೇಶ ಟಿವಿಯಲ್ಲಿ ನೋಡುತ್ತಿದೆ ಎಂದು ಮೋದಿ ಲೇವಡಿ ಮಾಡಿದರು
10:04 PM, 20 Jul

ದೇವೇಗೌಡರನ್ನು ಅವಮಾನಿಸಿ ಸರ್ಕಾರವನ್ನು ಉರುಳಿಸಲಾಯಿತು. ನಂತರ ಐ.ಕೆ.ಗುಜ್ರಾಲ್ ಸರ್ಕಾರವನ್ನು ಉರುಳಿಸಲಾಯಿತು. ಕಾಂಗ್ರೆಸ್‌ ತನ್ನ ಸರ್ಕಾರವನ್ನು ಉಳಿಸಿಕೊಳ್ಳಲು ವೋಟಿಗಾಗಿ ನೋಟು ಹಗರಣ ನಡೆಸಿತು.
10:01 PM, 20 Jul

ದೇವೇಗೌಡರನ್ನು ಅವಮಾನಿಸಿ ಸರ್ಕಾರವನ್ನು ಉರುಳಿಸಲಾಯಿತು. ನಂತರ ಐ.ಕೆ.ಗುಜ್ರಾಲ್ ಸರ್ಕಾರವನ್ನು ಉರುಳಿಸಲಾಯಿತು. ಕಾಂಗ್ರೆಸ್‌ ತನ್ನ ಸರ್ಕಾರವನ್ನು ಉಳಿಸಿಕೊಳ್ಳಲು ವೋಟಿಗಾಗಿ ನೋಟು ಹಗರಣ ನಡೆಸಿತು.
10:00 PM, 20 Jul

ದೇವೇಗೌಡರನ್ನು ಅವಮಾನಿಸಿ ಸರ್ಕಾರವನ್ನು ಉರುಳಿಸಲಾಯಿತು. ನಂತರ ಐ.ಕೆ.ಗುಜ್ರಾಲ್ ಸರ್ಕಾರವನ್ನು ಉರುಳಿಸಲಾಯಿತು. ಕಾಂಗ್ರೆಸ್‌ ತನ್ನ ಸರ್ಕಾರವನ್ನು ಉಳಿಸಿಕೊಳ್ಳಲು ವೋಟಿಗಾಗಿ ನೋಟು ಹಗರಣ ನಡೆಸಿತು.
9:58 PM, 20 Jul

ರೆಫಲ್ ಯುದ್ಧ ವಿಮಾನದ ಬಗ್ಗೆ ಆರೋಪ ಮಾಡಲಾಗಿದೆ. ಎರಡೂ ದೇಶಗಳು ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿವೆ. ಇಂತಹ ಆರೋಪಗಳನ್ನು ನಾವು ಒಪ್ಪಲ್ಲ.
9:56 PM, 20 Jul

ನರೇಂದ್ರ ಮೋದಿ ಅವರ ಮೇಲೆ ಆರೋಪ ಮಾಡಿ. ಆದರೆ, ದೇಶದ ಗಡಿಯಲ್ಲಿ ಪಹರೆ ಕಾಯುತ್ತಿರುವ ಯೋಧನ ಮೇಲೆ ಆರೋಪ ಮಾಡಬೇಡಿ. ಸರ್ಜಿಕಲ್ ಸ್ಟ್ರೈಟ್ ಬಗ್ಗೆ ಆರೋಪ ಮಾಡಿದರೆ ಯೋಧನಿಗೆ ಅಗೌರವ ತೋರಿಸಿದಂತೆ
9:53 PM, 20 Jul

ಮುದ್ರಾ ಯೋಜನೆಯಡಿ ನಿರುದ್ಯೋಗಿಗಳಿಗೆ ಸಾಲ ಸೌಲಭ್ಯ ನೀಡಲಾಗಿದೆ. ಭಾರತದಲ್ಲಿ ಮೊಬೈಲ್ ತಯಾರಿಸುವ 120 ಕಂಪನಿಗಳಿವೆ
9:49 PM, 20 Jul

ಭೀಮ್ ಅಪ್ಲಕೇಶನ್ ಮೂಲಕ 41 ಸಾವಿರ ಕೋಟಿ ರೂ. ವ್ಯವಹಾರ ನಡೆಯುತ್ತಿದೆ. ಆದರೆ, ವಿಪಕ್ಷಗಳಿಗೆ ಆರ್‌ಬಿಐ ಮತ್ತು ಡಿಜಿಟಲ್ ಇಂಡಿಯಾದ ಮೇಲೆ ವಿಶ್ವಾಸವಿಲ್ಲ
9:48 PM, 20 Jul

ಸ್ವಚ್ಛ ಭಾರತ್, ಅಂತರಾಷ್ಟ್ರೀಯ ಯೋಗ ದಿನ, ದೇಶದ ಮುಖ್ಯ ನ್ಯಾಯಮೂರ್ತಿ, ಚುನಾವಣಾ ಆಯೋಗ, ಇವಿಎಂ ಮೇಲೆ ವಿಶ್ವಾಸವಿಲ್ಲ. ಏಕೆಂದರೆ ಅವರಿಗೆ ಅವರ ಮೇಲೆಯೇ ವಿಶ್ವಾಸವಿಲ್ಲ : ಮೋದಿ
9:45 PM, 20 Jul

ಇದು ಜನಪರ ಸರ್ಕಾರ, ಆಯ್ಯುಷ್‌ಮಾನ್ ಭಾರತ್ ಯೋಜನೆಯನ್ನು ಜಾರಿಗೆ ತಂದು ಜನರಿಗೆ ಉತ್ತಮ ಆರೋಗ್ಯ ಸೇವೆಯನ್ನು ನೀಡುತ್ತಿದ್ದೇವೆ
9:43 PM, 20 Jul

ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ರೈತರನ್ನು ಸರಕಾರ ವಿಶ್ವಾಸಕ್ಕೆ ತೆಗೆದುಕೊಂಡಿದೆ. ರೈತರಿಂದ ಪಡೆದುಕೊಂಡ ಮೂರುಪಟ್ಟನ್ನು ಅವರಿಗೆ ವಾಪಸ್ ನೀಡಲಾಗಿದೆ.
9:42 PM, 20 Jul

ಬಡವರಿಗಾಗಿ ನಾವು ಬ್ಯಾಂಕ್ ಬಾಗಿಲು ತೆರೆದವು. ನಮ್ಮದು ಕೆಲಸ ಮಾಡುವ ಸರ್ಕಾರ ಆದರೂ ವಿಪಕ್ಷಗಳಿಗೆ ನಮ್ಮ ಮೇಲೆ ವಿಶ್ವಾಸವಿಲ್ಲ
9:38 PM, 20 Jul

18 ಸಾವಿರ ಹಳ್ಳಿಗಳಿಗೆ ಸರ್ಕಾರ ವಿದ್ಯುತ್ ವ್ಯವಸ್ಥೆ ಮಾಡಿದೆ. 70 ವರ್ಷಗಳಿಂದ ದೇಶದ ಈಶಾನ್ಯ ಭಾಗದ ಈ ಹಳ್ಳಿಗಳು ಕತ್ತಲಲ್ಲಿ ಇದ್ದವು : ಮೋದಿ
9:36 PM, 20 Jul

ಟಿಡಿಪಿ ಸಂಸದರಿಂದ ಭಾರೀ ಗದ್ದಲ. ವಿ ವಾಂಟ್ ಜಸ್ಟೀಸ್ ಎಂದು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸುತ್ತಿರುವ ಸಂಸದರು
9:35 PM, 20 Jul

ಸಬ್ ಕೇ ಸಾತ್ ಸಬ್‌ ಕೆ ವಿಕಾಸ್ ಎಂಬ ಘೋಷಣೆಯೊಂದಿಗೆ ನಾವು ಸರ್ಕಾರವನ್ನು ರಚನೆ ಮಾಡಿದೆವು
9:34 PM, 20 Jul

ಮುಂದಿನ ಚುನಾವಣೆ ಬಳಿಕ ರಾಹುಲ್ ಗಾಂಧಿ ಪ್ರಧಾನಿಯಾಗುವರೋ? ಇಲ್ಲವೋ? ಎಂಬುದನ್ನು ಜನರು ತೀರ್ಮಾನಿಸಬೇಕು. ಆದರೆ, ರಾಹುಲ್ ಪ್ರಧಾನಿಯಾಗಲು ಆತುರಕ್ಕೆ ಬಿದ್ದಿದ್ದಾರೆ.
READ MORE

English summary
Monsoon Session Live Updates: The day of reckoning for the BJP led NDA government is here as it faces its first no-confidence motion in Parliament. Comfortably perched where the numbers are concerned, the BJP would use the motion as an opportunity to showcase its government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X