ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜುಲೈ 18ರಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭ

By ಒನ್ ಇಂಡಿಯಾ ಡೆಸ್ಕ್
|
Google Oneindia Kannada News

ನವದೆಹಲಿ, ಜೂನ್ 25: ಸಂಸತ್ತಿನ ಮುಂಗಾರು ಅಧಿವೇಶನ ಇದೇ ಜುಲೈ 18ರಿಂದ ಆರಂಭವಾಗಲಿದೆ. ಆಗಸ್ಟ್ 10ರಂದು ಅಧಿವೇಶನ ಮುಕ್ತಾಯವಾಗಲಿದೆ. ಸಂಸದೀಯ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ ಮುಂಗಾರು ಅಧಿವೇಶನಕ್ಕೆ ದಿನ ನಿಗದಿ ಮಾಡಿ ಶಿಫಾರಸ್ಸು ಮಾಡಿದೆ ಹೊರಡಿಸಿದೆ.

ಮುಂಗಾರು ಅಧಿವೇಶನಕ್ಕೆ ದಿನ ನಿಗದಿ ಮಾಡಿ ಶಿಫಾರಸ್ಸು ಮಾಡಲು ರಾಜನಾಥ್ ಸಿಂಗ್ ನೇತೃತ್ವದ ಸಂಸದೀಯ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ ಇಂದು ಸಭೆ ಸೇರಿತ್ತು. ಇದೀಗ ರಾಷ್ಟ್ರಪತಿಗಳು ಔಪಚಾರಿಕವಾಗಿ ದಿನ ನಿಗದಿ ಮಾಡಬೇಕಿದೆ.

ಅಧಿವೇಶನಕ್ಕೆ ಅಡ್ಡಿಪಡಿಸಿದ ಕಾಂಗ್ರೆಸ್ ನಡೆ ಖಂಡಿಸಿ ಮೋದಿ ಉಪವಾಸ ಅಧಿವೇಶನಕ್ಕೆ ಅಡ್ಡಿಪಡಿಸಿದ ಕಾಂಗ್ರೆಸ್ ನಡೆ ಖಂಡಿಸಿ ಮೋದಿ ಉಪವಾಸ

ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಂಸದೀಯ ವ್ಯವಹಾರ ಸಚಿವ ಅನಂತ್ ಕುಮಾರ್, ಒಟ್ಟು 18 ದಿನಗಳ ಅಧಿವೇಶನ ನಡೆಯಲಿದೆ ಎಂದು ಮಾಹಿತಿ ನೀಡಿದರು.

Monsoon session from July 18

ಪ್ರಧಾನಿ ನರೇಂದ್ರ ಮೋದಿಯವರಿಗೆ ಇನ್ನು ಬೆರಳೆಣಿಕೆಯ ತಿಂಗಳುಗಳಷ್ಟೇ ಬಾಕಿ ಉಳಿದಿದ್ದು ಈ ಅಧಿವೇಶನದಲ್ಲಿ ಸರಕಾರ ಮಹತ್ವದ ಮಸೂದೆಗಳಿಗೆ ಅನುಮೋದನೆ ಪಡೆದುಕೊಳ್ಳಲು ನಿರ್ಧರಿಸಿದೆ.

English summary
The Monsoon session of Parliament will commence from July 18 and end on August 10, the Cabinet Committee of Parliamentary Affairs recommended today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X