ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಸತ್ತಿನ ಉಭಯ ಸದನಗಳ ಸಂಖ್ಯಾಬಲ ಎಷ್ಟಿದೆ?

By Mahesh
|
Google Oneindia Kannada News

ನವದೆಹಲಿ, ಜುಲೈ 18: ಸುಮಾರು 15 ವರ್ಷಗಳ ನಂತರ ಆಡಳಿತಾರೂಢ ಪಕ್ಷದ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಮಂಡಿಸಲಾಗಿದ್ದು, ಲೋಕಸಭೆಯಲ್ಲಿ ಮನವಿ ಸ್ವೀಕಾರಗೊಂಡಿದೆ. ಶುಕ್ರವಾರ(ಜುಲೈ 20)ದಂದು ಬಿಜೆಪಿ ನೇತೃತ್ವದ ಎನ್ಡಿಎಗೆ ಅಗ್ನಿ ಪರೀಕ್ಷೆ.

ವಿಪಕ್ಷಕ್ಕೆ ಸೇರಿದ 50ಕ್ಕೂ ಅಧಿಕ ಸಂಸದರು ಅವಿಶ್ವಾಸ ಮಂಡನೆ ನಿರ್ಣಯವನ್ನು ಬೆಂಬಲಿಸಿದರೆ ನಿಯಮ(198) ಪ್ರಕಾರ ಸ್ಪೀಕರ್ ಅವರು ಆಡಳಿತ ಪಕ್ಷಕ್ಕೆ ಅವಿಶ್ವಾಸ ಮಂಡನೆ ನಿರ್ಣಯ ಮಂಡನೆ ದಿನಾಂಕವನ್ನು ನಿಗದಿಪಡಿಸಿ, 10ದಿನಗಳ ಕಾಲಾವಕಾಶ ನೀಡಬೇಕಾಗುತ್ತದೆ.

2003ರ ಬಳಿಕ ಮೊದಲ ಬಾರಿಗೆ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ!2003ರ ಬಳಿಕ ಮೊದಲ ಬಾರಿಗೆ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ!

Monsoon Session 2018 : No-Trust Vote On July 20 strength of LS and RS

ಸಂಸತ್ತಿನ ಪ್ರಮುಖ ಅಂಗಗಳಲ್ಲಿ ಒಂದೆನಿಸಿರುವ ಲೋಕಸಭೆಗೆ ಸದಸ್ಯರನ್ನು ಜನರು ನೇರವಾಗಿ ಚುನಾವಣೆ ಮೂಲಕ ಆಯ್ಕೆ ಮಾಡುತ್ತಾರೆ. ಭಾರತೀಯ ಸಂವಿಧಾನದಂತೆ ಲೋಕಸಭೆ ಗರಿಷ್ಠವಾಗಿ 552 ಸದಸ್ಯರನ್ನು ಹೊಂದಿಬಹುದು. ಭಾರತದ ವಿವಿಧ ರಾಜ್ಯಗಳಿಂದ ಗರಿಷ್ಠ 530 ಸದಸ್ಯರು ಚುನಾಯಿತರಾಗುತ್ತಾರೆ. 20 ಸದಸ್ಯರು ಕೇಂದ್ರಾಡಳಿತ ಪ್ರದೇಶಗಳಿಂದ ಚುನಾಯಿತರಾದರೆ, ಇನ್ನಿಬ್ಬರು ಸದಸ್ಯರನ್ನು ಆಂಗ್ಲೋ-ಇಂಡಿಯನ್ ವರ್ಗವನ್ನು ಪ್ರತಿನಿಧಿಸಲು ನೇಮಿಸುವ ಅಧಿಕಾರ ಭಾರತದ ಅಧ್ಯಕ್ಷರಿಗೆ ಉಂಟು. ಲೋಕಸಭೆಯ ಸದಸ್ಯರಾಗಲು ಕನಿಷ್ಠ 25 ವರ್ಷ ವಯಸ್ಸಾಗಿರಬೇಕು.

ಪ್ರತಿ ರಾಜ್ಯದಿಂದ ಇರುವ ಲೋಕಸಭಾ ಸದಸ್ಯರ ಸಂಖ್ಯೆ ಆ ರಾಜ್ಯದ ಜನಸಂಖ್ಯೆಯನ್ನು ಅವಲಂಬಿಸಿರುತ್ತದೆ. ಈಗಿನ ಹಂಚಿಕೆ ಹೀಗಿದೆ (545 ಸದಸ್ಯರು: 543 ಚುನಾಯಿತ + 2 ನೇಮಿತ):

2003ರಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಅಂದಿನ ಎನ್ಡಿಎ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದರು. ಆದರೆ, ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ವಿಶ್ವಾಸ ಮತ ಗಳಿಸುವಲ್ಲಿ ಸಫಲರಾಗಿದ್ದರು.

ಲೋಕಸಭೆ ಪಕ್ಷ-ಒಕ್ಕೂಟಗಳ ಬಲಾಬಲ(545)
ಬಿಜೆಪಿ : 273; ಎನ್ಡಿಎ: 314
ಕಾಂಗ್ರೆಸ್: 48:; ಯುಪಿಎ: 66
ರಾಜ್ಯಸಭೆ : 245 (233 ಚುನಾಯಿತ, 12 ನಾಮಾಂಕಿತ, ಬಿಹಾರದ ಒಂದು ಸ್ಥಾನ ಖಾಲಿ)
ಬಿಜೆಪಿ: 71; ಎನ್ಡಿಎ: 87
ಕಾಂಗ್ರೆಸ್: 50; ಯುಪಿಎ: 83

ಮೈತ್ರಿ ಕೂಟಗಳಿಗೆ ಸೇರದಿರುವ ಪಕ್ಷಗಳು: 153
ಎಐಎಡಿಎಂಕೆ (37), ಎಐಟಿಸಿ (34), ಎಸ್ಪಿ(7), ಬಿಜೆಡಿ(20), ಟಿಡಿಪಿ (16), ಸಿಪಿಐ(ಎಂ) (9), ಬಿಎಸ್ಪಿ (4), ಎಎಪಿ (4), ಸಿಪಿಐ (1), ಜೆಕೆ ಪಿಡಿಪಿ(1), ವೈಎಸ್ಸಾರ್ ಕಾಂಗ್ರೆಸ್ (4), ಐಎನ್ ಎಲ್ ಡಿ(2)

ರಾಜ್ಯಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡನೆಯಾಗಿಲ್ಲ.
244 ಸಂಖ್ಯಾಬಲದ ಸದನದಲ್ಲಿ ಅಭ್ಯರ್ಥಿಯು ಗೆಲ್ಲಲು 123 ಮತಗಳು ಬೇಕಾಗುತ್ತದೆ. ಬಿಹಾರದ ಒಂದು ಸ್ಥಾನ ಖಾಲಿ ಇದೆ.

ಬಿಜೆಪಿ 71 ಸಂಖ್ಯಾಬಲ ಹೊಂದಿದ್ದು ಹಾಗೂ ಮಿತ್ರಪಕ್ಷಗಳ ನೆರವಿನಿಂದ 115 ಸಂಖ್ಯೆ ತಲುಪಬಹುದಾಗಿದೆ. ಹೀಗಾಗಿ, ಎಐಎಡಿಎಂಕೆಯ 13 ಸದಸ್ಯರ ಬೆಂಬಲದ ನಿರೀಕ್ಷೆಯಿದೆ. ಇದಲ್ಲದೆ, ಬಿಜೆಡಿಯ 9 ಸದಸ್ಯರ ನೆರವು ಸಿಕ್ಕರೆ, ಬಿಜೆಪಿ ಅಭ್ಯರ್ಥಿಗೆ ಜಯ ಲಭಿಸಲಿದೆ.

ತೆಲುಗು ದೇಶಂ ಪಾರ್ಟಿ 6 ಜನ ಸದಸ್ಯರನ್ನು ಹೊಂದಿದ್ದು, ಈಗ ಎನ್ಡಿಎ ಮೈತ್ರಿಕೂಟದಿಂದ ದೂರಾಗಿದ್ದು, ವಿಪಕ್ಷಗಳು ಟಿಡಿಪಿ ಬೆಂಬಲದ ನಿರೀಕ್ಷೆಯಲ್ಲಿದ್ದು, 117 ಮತಗಳನ್ನು ಹೊಂದಲಿದೆ.

English summary
For the first time in 15 years, a no-confidence motion against the government was moved and accepted in Lok Sabha today. Speaker Sumitra Mahajan said the notice, moved by the Congress, Telugu Desam Party and Sharad Pawar's Nationalist Congress Party, will be taken up on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X