ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರವಾಹ ಬಂದಿದ್ದು ನಿಜ, ಆದರೂ ಈ ಬಾರಿ ಮಳೆ ಕೊರತೆ!

|
Google Oneindia Kannada News

Recommended Video

ಮುಂಗಾರು 2018 ಸೆಪ್ಟೆಂಬರ್ 30ಕ್ಕೆ ಅಂತ್ಯ : ಈ ಬಾರಿ ಪ್ರವಾಹವಾದರೂ ಮಳೆಯ ಕೊರತೆ | Oneindia Kannada

ನವದೆಹಲಿ, ಅಕ್ಟೋಬರ್ 01: ಪ್ರಸಕ್ತ ಮುಂಗಾರು ಋತು ಸೆ.30 ರವಿವಾರದಂದು ಅಂತ್ಯಗೊಂಡಿದ್ದು, ಈ ಬಾರಿ ದೇಶವು ಶೇ.9.4 ರಷ್ಟು ಮಳೆ ಕೊರತೆ ಅನುಭವಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಕೇರಳ ಮತ್ತು ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಅತೀವ ಮಳೆಯಿಂದ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು ನಿಜವಾದರೂ, ದೇಶದ ಎಷ್ಟೋ ರಾಜ್ಯಗಳು ಮಳೆ ಕೊರತೆ ಅನುಭವಿಸಿವೆ.

ಕೇರಳಕ್ಕೆ ಮತ್ತೆ ಅಪ್ಪಳಿಸಲಿದೆ ಧಾರಾಕಾರ ಮಳೆ: yellow alert ಘೋಷಣೆಕೇರಳಕ್ಕೆ ಮತ್ತೆ ಅಪ್ಪಳಿಸಲಿದೆ ಧಾರಾಕಾರ ಮಳೆ: yellow alert ಘೋಷಣೆ

ಪ್ರತಿ ಬಾರಿಯೂ ಹವಾಮಾನ ಇಲಾಖೆಯ ಲೆಕ್ಕಾಚಾರ ತಪ್ಪಾಗುತ್ತಿರಲಿಲ್ಲ. ಅದು ಮುನ್ಸೂಚನೆ ನೀಡಿದಷ್ಟೇ ಮಳೆಯಾಗುತ್ತಿತ್ತು. ಆದರೆ ಈ ಬಾರಿ ಹವಾಮಾನ ಇಲಾಖೆಯ ಮುನ್ಸೂಚನೆ ತಲೆಕೆಳಗಾಗಿದೆ. ಹವಾಮಾನ ಇಲಾಖೆಯ ಅಂದಾಜು ಗುರಿ ತಲುಪುವುದಕ್ಕೆ ಇನ್ನೂ ಶೇ.6 ರಷ್ಟಾದರೂ ಹೆಚ್ಚು ಮಳೆಯಾಗಬೇಕಿತ್ತು.

Monsoon season ends, IMD was wrong this time!

ಆಗಸ್ಟ್ ತಿಂಗಳಿನಲ್ಲಿ ಉತ್ತಮ ಮಳೆ ಕಂಡುಬಂದರೂ, ಸೆಪ್ಟೆಂಬರ್ ತಿಂಗಳಿನಲ್ಲಿ ನಿರೀಕ್ಷಿಸಿದಷ್ಟು ಮಳೆಯಾಗದೆ, ಏಕಾಏಕಿ ಮಳೆ ಕೊರತೆ ಕಂಡುಬಂದಿದ್ದೇ ಇದಕ್ಕೆ ಕಾರಣ ಎನ್ನಲಾಗಿದೆ.

ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ: 13 ಮಂದಿ ಸಾವುಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ: 13 ಮಂದಿ ಸಾವು

ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ಶೇ.95 ರಷ್ಟು ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಭವಿಷ್ಯ ನುಡಿದಿತ್ತು. ಆದರೆ ಮಳೆಯಾಗಿದ್ದು ಮಾತ್ರ ಶೇ.87 ರಷ್ಟು!

ಬೆಂಗಳೂರಿನ ಭಾರೀ ಮಳೆಗೆ ಮುಳುಗುವ ಅಪಾಯದಲ್ಲಿರುವ ಪ್ರದೇಶಗಳು ಯಾವವು! ಬೆಂಗಳೂರಿನ ಭಾರೀ ಮಳೆಗೆ ಮುಳುಗುವ ಅಪಾಯದಲ್ಲಿರುವ ಪ್ರದೇಶಗಳು ಯಾವವು!

ಆಗಸ್ಟ್ ನಲ್ಲಿ ಶೇ.88 ರಷ್ಟು ಮಳೆಯಾಗಲಿದ್ದು, ಸೆಪ್ಟೆಂಬರ್ ನಲ್ಲಿ ಶೇ.93ರಷ್ಟು ಮಳೆಯಾಗಲಿದೆ ಎಂದು ಸ್ಕೈಮೆಟ್ ವೆದರ್ ಹೇಳಿತ್ತು. ಆದರೆ ಅದು ಉಲ್ಟಾ ಹೊಡೆದು, ಆಗಸ್ಟ್ ನಲ್ಲೇ ಹೆಚ್ಚು ಮಳೆಯಾಗಿದ್ದು, ಸೆಪ್ಟೆಂಬರ್ ನಲ್ಲಿ ಕಡಿಮೆ ಮಳೆಯಾಗಿದೆ.

English summary
Monsoon season ended on Sunday at a rain deficit of 9.4%. Indian meteorological department's forecast was wrong this time!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X