ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರಾಖಂಡಕ್ಕೆ ಮುಂಗಾರು: 4 ದಿನಗಳವರೆಗೆ ಭಾರಿ ಮಳೆ, ಭೂಕುಸಿತದ ಎಚ್ಚರಿಕೆ

|
Google Oneindia Kannada News

ಕೇದರನಾಥ್ ಜುಲೈ 4: ಚಾರ್‌ಧಾಮ್ ಯಾತ್ರೆ ಆರಂಭವಾಗಿದ್ದು ದಿನಕ್ಕೆ ಸಾವಿರಾರು ಯಾತ್ರಾರ್ಥಿಗಳು ಭೇಟಿ ನೀಡುತ್ತಿದ್ದಾರೆ. ಇದರ ನಡುವೆ ಇಲ್ಲಿ ಮಳೆಯ ಆತಂಕ ಹೆಚ್ಚಾಗಿದೆ. ಮುಂದಿನ ನಾಲ್ಕು ದಿನಗಳ ಕಾಲ ಉತ್ತರಾಖಂಡದಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದ್ದು ಯಾತ್ರಾರ್ಥಿಗಳಲ್ಲಿ ಆತಂಕ ಹೆಚ್ಚಾಗಿದೆ. ಹವಾಮಾನ ಇಲಾಖೆ ಪ್ರಕಾರ, ಡೆಹ್ರಾಡೂನ್, ನೈನಿತಾಲ್ ಮತ್ತು ಬಾಗೇಶ್ವರ್ ಜಿಲ್ಲೆಗಳಲ್ಲಿ ಭಾರೀ ಮಳೆಯ ಎಚ್ಚರಿಕೆ ನೀಡಲಾಗಿದೆ. ಜುಲೈ 5, 6 ಮತ್ತು 7 ರಂದು ಡೆಹ್ರಾಡೂನ್, ತೆಹ್ರಿ, ಪೌರಿ, ನೈನಿತಾಲ್ ಮತ್ತು ಚಂಪಾವತ್ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಕಚೇರಿ ತಿಳಿಸಿದೆ. ಇದು ಚಾರ್‌ಧಾಮ್ ಯಾತ್ರಾರ್ಥಿಗಳಿಗೆ ಅಡ್ಡಿಯನ್ನುಂಟು ಮಾಡುವ ಸಾಧ್ಯತೆ ಇದ್ದು ಎಚ್ಚರಿಕೆ ವಹಿಸಲು ಸ್ಥಳೀಯ ಅಧಿಕಾರಿಗಳಿಗೆ ತಿಳಿಸಲಾಗಿದೆ.

ಜೊತೆಗೆ ಪಿಥೋರಗಢ್, ಬಾಗೇಶ್ವರ್, ನೈನಿತಾಲ್, ಡೆಹ್ರಾಡೂನ್, ತೆಹ್ರಿ, ಪೌರಿ ಮತ್ತು ಚಂಪಾವತ್‌ನಲ್ಲಿಯೂ ಭಾರೀ ಮಳೆಯ ಎಚ್ಚರಿಕೆ ನೀಡಲಾಗಿದೆ. ಸೋಮವಾರ ಡೆಹ್ರಾಡೂನ್‌ನಲ್ಲಿ ಭಾರಿ ಮಳೆ ಸುರಿದ ನಂತರ ವಾಹನಗಳು ಹಾನಿಗೊಳಗಾದರೆ ಹಲವಾರು ಮರಗಳು ಧರೆಗುರುಳಿವೆ. ಭಾರೀ ಮಳೆಯಿಂದಾಗಿ ಭೂಕುಸಿತ, ಬಂಡೆ ಕುಸಿತ, ರಸ್ತೆಗಳಲ್ಲಿ ಅವಶೇಷಗಳು, ಸವೆತ ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ನದಿಯ ಚರಂಡಿಗಳಲ್ಲಿ ನೀರು ಹರಿಯುವುದರಿಂದ ಸ್ಥಳೀಯರು ಮತ್ತು ಪ್ರವಾಸಿಗರು ಎಚ್ಚರದಿಂದ ಇರುವಂತೆ ಸೂಚಿಸಲಾಗಿದೆ.

ಭೂಕುಸಿತದ ಎಚ್ಚರಿಕೆ

ಭೂಕುಸಿತದ ಎಚ್ಚರಿಕೆ

IMD ರಾಜ್ಯದಲ್ಲಿ ಮುಂಗಾರು ಆಗಮನವನ್ನು ಘೋಷಿಸುತ್ತಿದ್ದಂತೆ, ರಾಜ್ಯದ ಸುರಕ್ಷತೆಯ ಭಾಗವಾಗಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅಧಿಕಾರಿಗಳಿಗೆ ನಿರ್ದೇಶನಗಳನ್ನು ನೀಡಿದ್ದಾರೆ. ಸಂಭವನೀಯ ವಿಪತ್ತುಗಳ ದೃಷ್ಟಿಯಿಂದ ಮುಂದಿನ ಮೂರು ತಿಂಗಳುಗಳು ಮಹತ್ವದ್ದಾಗಿದೆ ಎಂದು ವಿವರಿಸಿದ ಧಾಮಿ, ಜಿಲ್ಲಾಧಿಕಾರಿಗಳು ತಮ್ಮ ಮಟ್ಟದಲ್ಲಿ ಹೆಚ್ಚಿನ ಸುರಕ್ಷತಾ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ತಿಳಿಸಿದ್ದಾರೆ.

ಈ ದಿನಗಳಲ್ಲಿ ಹಿಮಾಲಯ ದುರ್ಬಲವಾಗಿರುತ್ತದೆ. ಆದ್ದರಿಂದ ಇದು ಭೂಕುಸಿತಗಳು, ಭೂಕಂಪಗಳು ಮತ್ತು ಪ್ರವಾಹಗಳಂತಹ ನೈಸರ್ಗಿಕ ವಿಪತ್ತುಗಳಿಗೆ ಹೆಚ್ಚು ಸೂಕ್ಷ್ಮವಾಗಿರುತ್ತದೆ ಎಂದು ತಜ್ಞರು ಸೂಚಿಸಿದ್ದಾರೆ. ವಿಶೇಷವಾಗಿ ಮಾನ್ಸೂನ್ ಸಮಯದಲ್ಲಿ ವಿಪತ್ತುಗಳಿಗೆ ಹಿಮದ ದುರ್ಬಲತೆ ಕಾರಣವಾಗಬಹುದು ಎಂದು ಸೂಚಿಸಲಾಗಿದೆ.

ಬೆಟ್ಟಗಳ ತೆರವು

ಬೆಟ್ಟಗಳ ತೆರವು

ಇನ್‌ಸ್ಟಿಟ್ಯೂಟ್ ಆಫ್ ಹಿಮಾಲಯನ್ ಜಿಯಾಲಜಿಯ ಮಾಜಿ ಜಿಯೋಫಿಸಿಕ್ಸ್ ಗ್ರೂಪ್ ಮುಖ್ಯಸ್ಥ ಡಾ. ಸುಶೀಲ್ ಕುಮಾರ್, ಹಿಮಾಲಯವು ತುಲನಾತ್ಮಕವಾಗಿ ಕಿರಿಯ ಪರ್ವತ ಶ್ರೇಣಿಯಾಗಿರುವುದರಿಂದ, ಅದರ ಮೇಲಿನ ಮೇಲ್ಮೈಯಲ್ಲಿ 30-50 ಅಡಿಗಳವರೆಗೆ ಮಣ್ಣನ್ನು ಮಾತ್ರ ಒಳಗೊಂಡಿದೆ. ಈ ಮಣ್ಣು ಸ್ವಲ್ಪಮಟ್ಟಿಗೆ ಹಾಳಾದರೆ ಸವೆಯಲು ಪ್ರಾರಂಭಿಸುತ್ತದೆ. ವಿಶೇಷವಾಗಿ ಮಳೆಯ ಸಮಯದಲ್ಲಿ ಭೂಕುಸಿತಕ್ಕೆ ಕಾರಣವಾಗುತ್ತದೆ.

ಸರ್ವಋತು ರಸ್ತೆ ನಿರ್ಮಾಣಕ್ಕಾಗಿ ಬೆಟ್ಟಗಳನ್ನು ಕಡಿಯುವುದು. ಚಾರ್ ಧಾಮ್ ಯಾತ್ರೆಗೆ ಯಾತ್ರಾರ್ಥಿಗಳ ಸಂಖ್ಯೆ ಹೆಚ್ಚಳ ಮತ್ತು ತೆಹ್ರಿ ಅಣೆಕಟ್ಟಿನ ಜಲಾನಯನ, ಮಳೆಯ ಹೆಚ್ಚಳ ನೈಸರ್ಗಿಕ ವಿಕೋಪಗಳಿಗೆ ಕಾರಣವಾಗಿದೆ. ಇದರಿಂದ ರಾಜ್ಯದ ದುರ್ಬಲತೆಯನ್ನು ಹೆಚ್ಚಿಸಿದೆ ಎಂದು ಅವರು ಹೇಳಿದರು.

ಅಂತರ್ಜಾಲ ಬಲಪಡಿಸಲು ಮನವಿ

ಅಂತರ್ಜಾಲ ಬಲಪಡಿಸಲು ಮನವಿ

ಮುಂಚಿತವಾಗಿ ರಾಜ್ಯದಲ್ಲಿ ಮುನ್ನೆಚ್ಚರಿಕೆ ವ್ಯವಸ್ಥೆಯನ್ನು ಅಳವಡಿಸುವ ಮೂಲಕ ವಿಪತ್ತುಗಳಿಂದ ಉಂಟಾಗುವ ಜೀವಹಾನಿಗಳನ್ನು ತಪ್ಪಿಸಬಹುದು. ಆದರೆ ಇದು ಪರಿಣಾಮಕಾರಿಯಾಗಿರಲು ಸರ್ಕಾರ ಅಂತರ್ಜಾಲವನ್ನು ಬಲಪಡಿಸಬೇಕು ಎಂದು ಕುಮಾರ್ ಹೇಳಿದರು.

ವಿಪತ್ತು ಪೀಡಿತ ಪ್ರದೇಶಗಳಲ್ಲಿ ವಾಸಿಸುವ ಜನಸಂಖ್ಯೆಗೆ ಭೂಕಂಪ-ನಿರೋಧಕ ಆಶ್ರಯ ಮನೆಗಳನ್ನು ನಿರ್ಮಿಸಲು ಮತ್ತು ಭೂಕಂಪಗಳಿಂದ ರಕ್ಷಿಸುವ ಕಟ್ಟಡ ನಿರ್ಮಾಣ ತಂತ್ರಗಳನ್ನು ಅಳವಡಿಸಿಕೊಳ್ಳಲು ಅವರನ್ನು ಪ್ರೇರೇಪಿಸಲು ಕುಮಾರ್ ಸರ್ಕಾರವನ್ನು ಒತ್ತಾಯಿಸಿದರು.

600 ಜನ ಸಾವು, 500 ಜನರಿಗೆ ಗಾಯ

600 ಜನ ಸಾವು, 500 ಜನರಿಗೆ ಗಾಯ

ಉತ್ತರಾಖಂಡ ವಿಪತ್ತು ತಗ್ಗಿಸುವಿಕೆ ಮತ್ತು ನಿರ್ವಹಣಾ ಕೇಂದ್ರದ ಅಂಕಿಅಂಶಗಳ ಪ್ರಕಾರ, 2014 ರಿಂದ 2020 ರವರೆಗಿನ ನೈಸರ್ಗಿಕ ವಿಕೋಪಗಳಲ್ಲಿ ಸುಮಾರು 600 ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 500 ಜನರು ಗಾಯಗೊಂಡಿದ್ದಾರೆ. ಈ ಅವಧಿಯಲ್ಲಿ ನೂರಾರು ಮನೆಗಳು, ಇತರ ಕಟ್ಟಡಗಳು, ರಸ್ತೆಗಳು ಮತ್ತು ಸೇತುವೆಗಳು ಹಾನಿಗೊಳಗಾಗಿವೆ. ಈ ದುರಂತಗಳಲ್ಲಿ 2,050 ಹೆಕ್ಟೇರ್‌ಗೂ ಹೆಚ್ಚು ಕೃಷಿ ಭೂಮಿಯೂ ನಾಶವಾಗಿದೆ.

English summary
Heavy rain forecast for 4 days in Uttarakhand has increased anxiety among Chardham pilgrims.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X