ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಭಾರತದಲ್ಲಿ ಮಂಕಿಪಾಕ್ಸ್‌: ದೆಹಲಿಯಲ್ಲಿ 8ನೇ ಪ್ರಕರಣ ಪತ್ತೆ

|
Google Oneindia Kannada News

ನವದೆಹಲಿ, ಆಗಸ್ಟ್‌. 2: ದೆಹಲಿಯಲ್ಲಿ ಮತ್ತೊಬ್ಬ ನೈಜೀರಿಯ ಮೂಲದ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ಪಾಸಿಟಿವ್‌ ದೃಢವಾಗಿದೆ ಎಂದು ಅಧಿಕೃತ ಮೂಲಗಳು ಮಂಗಳವಾರ ತಿಳಿಸಿವೆ. ಇದು ರಾಷ್ಟ್ರ ರಾಜಧಾನಿಯಲ್ಲಿ ವೈರಲ್ ಕಾಯಿಲೆಯ ಮೂರನೇ ಪ್ರಕರಣವಾಗಿದೆ. ಇದರೊಂದಿಗೆ ಮಂಗನ ಕಾಯಿಲೆಯ ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ ಎಂಟಕ್ಕೇರಿದೆ.

ಸೋಮವಾರ ಯುಎಇಯ 30 ವರ್ಷದ ಯುವಕ ಕೇರಳದಲ್ಲಿ ಮಂಕಿಪಾಕ್ಸ್ ವೈರಸ್‌ಗೆ ಪಾಸಿಟಿವ್‌ ಆಗಿದ್ದರು. ಯುವಕ ಸದ್ಯ ಮಲಪ್ಪುರಂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಮಾಹಿತಿ ನೀಡಿದ್ದರು. ಅವರು ಯುಎಇಯಿಂದ ಜುಲೈ 27 ರಂದು ಕೋಝಿಕ್ಕೋಡ್ ವಿಮಾನ ನಿಲ್ದಾಣವನ್ನು ತಲುಪಿದ್ದರು. ಜುಲೈ 30 ರಂದು ಸಾವನ್ನಪ್ಪಿದ 22 ವರ್ಷದ ಯುವಕನ ಮಾದರಿಗಳು ಪಾಸಿಟಿವ್‌ ಬಂದಿರುವುದನ್ನು ಕೇರಳ ದೃಢಪಡಿಸಿದ ಒಂದು ದಿನದ ನಂತರ ಈ ಘಟನೆ ವರದಿಯಾಗಿದೆ. ಇದು ಭಾರತದ ಮೊದಲ ಮಂಕಿಪಾಕ್ಸ್- ಸಂಬಂಧಿತ ಮರಣವಾಗಿದೆ.

Monkeypox in India: 8th case detected in Delhi

ಭಾರತದಲ್ಲಿ ಇದುವರೆಗೆ ಎಂಟು ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿವೆ ಮತ್ತು ರೋಗನಿರ್ಣಯ ಮತ್ತು ಲಸಿಕೆಗಳ ಅಭಿವೃದ್ಧಿಯನ್ನು ಮೇಲ್ವಿಚಾರಣೆ ಮಾಡಲು ರಾಷ್ಟ್ರೀಯ ಕಾರ್ಯಪಡೆಯನ್ನು ಸ್ಥಾಪಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ತಿಳಿಸಿದ್ದಾರೆ.

Monkeypox in India: 8th case detected in Delhi

ಮಂಕಿಪಾಕ್ಸ್ ಎಂಬುದು ಮಂಕಿಪಾಕ್ಸ್ ವೈರಸ್‌ನಿಂದ ಉಂಟಾಗುವ ಝೂನೋಟಿಕ್ ಕಾಯಿಲೆಯಾಗಿದ್ದು, ಸಿಡುಬುಗೆ ಕಾರಣವಾಗುವ ವೈರಸ್‌ಗಳ ಒಂದೇ ಕುಟುಂಬಕ್ಕೆ ಸೇರಿದೆ. ಈ ರೋಗವು ಪಶ್ಚಿಮ ಮತ್ತು ಮಧ್ಯ ಆಫ್ರಿಕಾದಂತಹ ಪ್ರದೇಶಗಳಲ್ಲಿ ಸ್ಥಳೀಯವಾಗಿದೆ. ಆದರೆ ಇತ್ತೀಚೆಗೆ ಡಬ್ಲ್ಯುಎಚ್‌ಒ ಪ್ರಕಾರ ಸ್ಥಳೀಯವಲ್ಲದ ದೇಶಗಳಿಂದಲೂ ಪ್ರಕರಣಗಳು ವರದಿಯಾಗಿವೆ. ಮಂಕಿಪಾಕ್ಸ್ ವಿಶಿಷ್ಟವಾಗಿ ಜ್ವರ, ದೇಹದಲ್ಲಿ ಗಂಟುಗಳೊಂದಿಗೆ ಗೋಚರವಾಗುತ್ತದೆ. ರೋಗಲಕ್ಷಣಗಳು ಎರಡರಿಂದ ನಾಲ್ಕು ವಾರಗಳವರೆಗೆ ಇರುತ್ತದೆ.

English summary
Another person of Nigerian origin has tested positive for monkeypox in Delhi, official sources said on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X