ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಸೋಂಕಿತರು ಗೃಹ ಬಂಧನದಲ್ಲಿದ್ದು ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?: ಕೇಂದ್ರದ ಸಲಹೆ

|
Google Oneindia Kannada News

ನವದೆಹಲಿ, ಮೇ 1: ಕೊರೊನಾ ಸೋಂಕಿತರು ಗೃಹ ಬಂಧನದಲ್ಲಿದ್ದುಕೊಂಡೇ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ ಎಂಬುದಕ್ಕೆ ಕೇಂದ್ರ ಸಲಹೆ ನೀಡಿದೆ.

ಕೊರೊನಾ ವೈರಸ್ ಸೋಂಕು ಬಹುತೇಕ ಮಂದಿಗೆ ಗಂಭೀರವಾಗುವುದಿಲ್ಲ, ಎಲ್ಲರಿಗೂ ಆಸ್ಪತ್ರೆಯಲ್ಲಿ ದಾಖಲಾಗುವ ಅವಶ್ಯಕತೆ ಬರುವುದಿಲ್ಲ ಎಂದು ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಾರ್ಯಾಲಯ ಹೇಳಿದ್ದು ಗೃಹಬಂಧನದಲ್ಲಿದ್ದುಕೊಂಡು ಯಾವ ರೀತಿ ಆರೋಗ್ಯ ಕಾಪಾಡುವ ಕುರಿತು ಸಲಹೆ ನೀಡಿದೆ.

ಕೊರೊನಾ ಲಸಿಕೆಯ 1 ಡೋಸ್, ಶೇ.50ರಷ್ಟು ಸೋಂಕಿನ ಅಪಾಯದಿಂದ ದೂರವಿಡುತ್ತೆ ಕೊರೊನಾ ಲಸಿಕೆಯ 1 ಡೋಸ್, ಶೇ.50ರಷ್ಟು ಸೋಂಕಿನ ಅಪಾಯದಿಂದ ದೂರವಿಡುತ್ತೆ

ಕೊರೊನಾ ಸೋಂಕಿತರು ಅಥವಾ ಪಾಸಿಟಿವ್ ಬಂದು ರೋಗಲಕ್ಷಣ ಹೊಂದಿಲ್ಲದವರು ಸ್ವ ವೈದ್ಯಕೀಯಗಳನ್ನು ಪಾಲನೆ ಮಾಡಬೇಡಿ, ವೈದ್ಯರು ಹೇಳುವ ರೀತಿಯೇ ಅನುಸರಿಸಿ, ಆಂಟಿಬಯೊಟಿಕ್ಸ್ ಗಳನ್ನು ಅಥವಾ ಅದಕ್ಕೆ ಪೂರಕವಾದದ್ದನ್ನು ತೆಗೆದುಕೊಳ್ಳಿ ಎಂದು ಪ್ರಧಾನ ವೈಜ್ಞಾನಿಕ ಸಲಹೆಗಾರರು ಹೇಳುತ್ತಾರೆ.

 ಕೊರೊನಾ ಸೋಂಕಿನ ಲಕ್ಷಣಗಳು

ಕೊರೊನಾ ಸೋಂಕಿನ ಲಕ್ಷಣಗಳು

ಮನೆಯಲ್ಲಿಯೇ ಸರಳ ಸ್ವ ರಕ್ಷಣೆ ವಿಧಾನಗಳನ್ನು ಅನುಸರಿಸಿ ಕೋವಿಡ್ ಸೋಂಕಿನಿಂದ ಗುಣಮುಖರಾದವರು ಬಹುತೇಕ ಮಂದಿ ಇದ್ದಾರೆ. ಜ್ವರ, ಒಣ ಕೆಮ್ಮು, ಗಂಟಲು ನೋಯುವಿಕೆ, ಉಸಿರಾಟದ ತೊಂದರೆ, ದೇಹದ ನೋವು, ವಾಸನೆ ಅಥವಾ ರುಚಿ ಕಳೆದುಕೊಳ್ಳುವುದು, ತಲೆನೋವು, ಆಯಾಸ, ಶೀತ, ವಾಕರಿಕೆ, ವಾಂತಿ ಮತ್ತು ಅತಿಸಾರವನ್ನು ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಂಡರೆ ತಕ್ಷಣ ಸ್ವ-ಆರೈಕೆ ಕ್ರಮಗಳನ್ನು ಪ್ರಾರಂಭಿಸಬೇಕು ಎಂದು ಪಿಎಸ್ ಎ ಹೇಳುತ್ತದೆ.

 ಕೊರೊನಾ ಸೋಂಕು ತಗುಲಿದರೆ ಆತಂಕಕ್ಕೊಳಗಾಗಬೇಡಿ

ಕೊರೊನಾ ಸೋಂಕು ತಗುಲಿದರೆ ಆತಂಕಕ್ಕೊಳಗಾಗಬೇಡಿ

ಈ ರೀತಿಯ ಲಕ್ಷಣಗಳು ಕಂಡುಬಂದರೆ ಭಯಭೀತರಾಗಬೇಡಿ, ಆತಂಕಕ್ಕೊಳಗಾಗಬೇಡಿ, ಇದರಿಂದ ಸೋಂಕಿನ ವಿರುದ್ಧ ಹೋರಾಡುವ ರೋಗನಿರೋಧಕ ಶಕ್ತಿಯನ್ನು ದೇಹ ಕಳೆದುಕೊಳ್ಳುತ್ತದೆ ಎಂದು ಎಚ್ಚರಿಕೆಯನ್ನು ಸಹ ನೀಡಿದೆ.

ಕೊರೊನಾ ಮೊದಲ ಹಾಗೂ 2ನೇ ಅಲೆ ಲಕ್ಷಣಗಳ ನಡುವಿನ ವ್ಯತ್ಯಾಸ ಹೀಗಿದೆ!ಕೊರೊನಾ ಮೊದಲ ಹಾಗೂ 2ನೇ ಅಲೆ ಲಕ್ಷಣಗಳ ನಡುವಿನ ವ್ಯತ್ಯಾಸ ಹೀಗಿದೆ!

 ಗೃಹ ಬಂಧನದಲ್ಲಿರುವವರು ಏನು ಮಾಡಬೇಕು?

ಗೃಹ ಬಂಧನದಲ್ಲಿರುವವರು ಏನು ಮಾಡಬೇಕು?

ಕೊರೊನಾ ಸೋಂಕಿನ ಲಕ್ಷಣ ಕಂಡುಬಂದರೆ ಅಂತವರು ಮನೆಯ ಬೇರೆ ಸದಸ್ಯರಿಂದ ತಕ್ಷಣ ದೂರವಾಗಿ. ಮನೆಯೊಳಗೆ ಬಾಯಿಗೆ ಎರಡು ಮಾಸ್ಕ್ ಧರಿಸಿಕೊಳ್ಳಿ, ಬೇರೆ ಸದಸ್ಯರಿಂದ ದೂರ ಇರಿ, ದಿನಕ್ಕೆ ಕನಿಷ್ಠ 2ರಿಂದ 3 ಲೀಟರ್ ನೀರು ಕುಡಿಯಿರಿ, ಸಾಧ್ಯವಾದಷ್ಟು ವಿಶ್ರಾಂತಿ ಪಡೆಯಿರಿ.

 ಪ್ರೋನಿಂಗ್ ಮಾಡುವುದು ಹೇಗೆ

ಪ್ರೋನಿಂಗ್ ಮಾಡುವುದು ಹೇಗೆ

ಮೊದಲಿಗೆ ತೆಳುವಾದ ಬೆಡ್ ಮೇಲೆ ಅರ್ಧ ಗಂಟೆಯಿಂದ ಎರಡು ಗಂಟೆಯವರೆಗೆ ಮಲಗಬೇಕು. ಮುಂದಿನ ಹಂತದಲ್ಲಿ ರೋಗಿಯು ಬಲ ಭಾಗದಲ್ಲಿ ಅರ್ಧ ಗಂಟೆಯಿಂದ 2 ಗಂಟೆಯವರೆಗೆ ಮಲಗಬೇಕು. ಮೂರನೇ ಹಂತದಲ್ಲಿ 30 ನಿಮಿಷದಿಂದ 2 ಗಂಟೆಯವರೆಗೆ 30ರಿಂದ 60 ಡಿಗ್ರಿ ಭಂಗಿಯಲ್ಲಿ ಮಲಗಬೇಕು.
ನಾಲ್ಕನೇ ಹಂತದಲ್ಲಿ ಎಡ ಮಗ್ಗುಲಿನಲ್ಲಿ 30 ನಿಮಿಷದಿಂದ 2 ಗಂಟೆಯವರೆಗೆ ಮಲಗಬೇಕು, ಐದನೇ ಹಂತದಲ್ಲಿ ಅರೆ ಪ್ರೋನಿಂಗ್ ಭಂಗಿಯಲ್ಲಿ 30 ನಿಮಿಷದಿಂದ 2 ಗಂಟೆಯವರೆಗೆ ಮಲಗಬೇಕು. ಕೊನೆಯ ಹಂತದಲ್ಲಿ ಮತ್ತೆ ಪ್ರೋನಿಂಗ್ ಹಂತದಲ್ಲಿ 30 ನಿಮಿಷದಿಂದ 2 ಗಂಟೆಯವರೆಗೆ ಮಲಗಬೇಕು, ಹೀಗೆ ಪುನರಾವರ್ತಿಸುತ್ತಿರಬೇಕು.

 ದೇಹದ ಉಷ್ಣತೆ ಪರೀಕ್ಷಿಸಿಕೊಳ್ಳಿ

ದೇಹದ ಉಷ್ಣತೆ ಪರೀಕ್ಷಿಸಿಕೊಳ್ಳಿ

ಕೊರೊನಾ ಸೋಂಕಿತರು ದೇಹದ ಉಷ್ಣತೆ ಮತ್ತು ಆಕ್ಸಿಜನ್ ಮಟ್ಟವನ್ನು ಆಗಾಗ ಪರೀಕ್ಷಿಸುತ್ತಿರಿ. ದಿನಕ್ಕೆ ಮೂರರಿಂದ ನಾಲ್ಕು ಬಾರಿ ದೇಹದ ಉಷ್ಣತೆ ಪರೀಕ್ಷಿಸುತ್ತಿರಿ, ಜ್ವರ 5 ದಿನಗಳವರೆಗೆ ಮುಂದುವರಿಯುತ್ತಿದ್ದರೆ ಆಸ್ಪತ್ರೆಗೆ ವೈದ್ಯರ ಬಳಿಗೆ ತಕ್ಷಣವೇ ಹೋಗಿ.
ನಿಮ್ಮ ಆಕ್ಸಿಜನ್ ಮಟ್ಟವನ್ನು ಪಲ್ಸ್ ಆಕ್ಸಿಮೀಟರ್ ಸಹಾಯದಿಂದ ದಿನಕ್ಕೆ ಮೂರ್ನಾಲ್ಕು ಬಾರಿ ಪರೀಕ್ಷೆ ಮಾಡಿಕೊಳ್ಳಿ. ನಿಮ್ಮ ಉಗುರುಗಳು ಸ್ವಚ್ಛವಾಗಿರಬೇಕು, ಉಗುರಿನಲ್ಲಿ ನೈಲ್ ಪಾಲಿಶ್ ಕೂಡ ಇರಬಾರದು. ಮನೆಯೊಳಗೆ ಹೊರಗಿನ ಸ್ವಚ್ಛ ಗಾಳಿ ಸರಾಗವಾಗಿ ಬೀಸುವಂತಿರಲಿ.

 ವ್ಯಾಯಾಮದ ಅಗತ್ಯವಿದೆ

ವ್ಯಾಯಾಮದ ಅಗತ್ಯವಿದೆ

ದೇಹದಲ್ಲಿ ಆಮ್ಲಜನಕ ಮಟ್ಟ ಹೆಚ್ಚಿಸಲು ಪ್ರೋನಿಂಗ್ ವ್ಯಾಯಾಮ ಮಾಡುತ್ತಿರಿ. ಆಕ್ಸಿಮೀಟರ್ ನಲ್ಲಿ ಎಸ್ ಪಿಒ2 ಮಟ್ಟ ಶೇ.94 ಕಡಿಮೆ ತೋರಿಸಿದರೆ ಆಗ ರೋಗಿಯು ಮನೆಯಲ್ಲಿಯೇ ಹೊಟ್ಟೆಗೆ ವ್ಯಾಯಾಮ ನೀಡುವ ಪ್ರೋನಿಂಗ್ ನ್ನು ಮಾಡುತ್ತಿರಬೇಕು.ಇದರಿಂದ ನಿಮಗೆ ಉಸಿರಾಟ ಸಾಮರ್ಥ್ಯ ಹೆಚ್ಚಾಗಿ ಆಮ್ಲಜನಕ ಸರಾಗವಾಗಿ ದೇಹಕ್ಕೆ ಹೋಗುತ್ತಿರುತ್ತದೆ.

English summary
Most coronavirus infections are not severe and do not need hospitalisation, the Office of the Principal Scientific Adviser said on Friday, prescribing home-care tips for patients.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X