ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯರ ಸ್ವಿಸ್ ಬ್ಯಾಂಕ್ ಹೂಡಿಕೆ ಗಣನೀಯ ಕುಸಿತ: ಮೋದಿ ಎಫೆಕ್ಟ್?

|
Google Oneindia Kannada News

ನವದೆಹಲಿ, ಜುಲೈ 01: ಸ್ವಿಸ್ ನ್ಯಾಶನಲ್ ಬ್ಯಾಂಕ್ (ಎಸ್ ಎನ್ ಬಿ) ಭಾನುವಾರ (ಜೂ 30) ಬಿಡುಗಡೆಗೊಳಿಸಿದ ಅಂಕಿಅಂಶದ ಪ್ರಕಾರ, ಭಾರತೀಯರ ಮತ್ತು ಭಾರತದ ಕಂಪೆನಿಗಳ ಸ್ವಿಜರ್ಲ್ಯಾಂಡ್ ನಲ್ಲಿ ಹೂಡಿಕೆ ಪ್ರಮಾಣ ಗಣನೀಯವಾಗಿ ಕುಸಿದಿದೆ.

ಜೂನ್ 30ರಂದು ಬಿಡುಗಡೆಯಾದ ರಿಪೋರ್ಟ್ ಪ್ರಕಾರ, ಭಾರತ 74ನೇ ಸ್ಥಾನದಲ್ಲಿದ್ದು, ಬ್ರಿಟನ್ ಮೊದಲನೇ ಸ್ಥಾನದಲ್ಲಿ ಮುಂದುವರಿದಿದೆ. 2018ರ ಹಣ ಹೂಡಿಕೆಗೆ ಹೋಲಿಸಿದರೆ, ಭಾರತ ಒಂದು ಸ್ಥಾನದ ಕುಸಿತವನ್ನು ಕಂಡಿದೆ.

ಸ್ವಿಸ್ ಬ್ಯಾಂಕ್ ಕಪ್ಪು ಹಣದ ಪ್ರಮಾಣ ಶೇ 80ರಷ್ಟು ಇಳಿಕೆ: ಕೇಂದ್ರಸ್ವಿಸ್ ಬ್ಯಾಂಕ್ ಕಪ್ಪು ಹಣದ ಪ್ರಮಾಣ ಶೇ 80ರಷ್ಟು ಇಳಿಕೆ: ಕೇಂದ್ರ

ಕಳೆದ ವರ್ಷ 88ನೇ ಸ್ಥಾನದಿಂದ 74ಸ್ಥಾನಕ್ಕೆ ಭಾರತ ಜಿಗಿತವನ್ನು ಕಂಡಿತ್ತು. ಆದಾಗ್ಯೂ, ಇತ್ತೀಚಿನ ದಿನಗಳಲ್ಲಿ ಸ್ವಿಸ್ ಬ್ಯಾಂಕ್ ನಲ್ಲಿ ಭಾರತೀಯರ ಹಣಹೂಡಿಕೆ ಗಣನೀಯ ಪ್ರಮಾಣದಲ್ಲಿ ಕಮ್ಮಿಯಾಗಿದೆ.

Money parked in Switzerland Banks, India ranked 74th position

ಒಟ್ಟಾರೆಯಾಗಿ ವಿದೇಶಿಗರು ಸ್ವಿಜರ್ಲ್ಯಾಂಡಿನ ವಿವಿಧ ಬ್ಯಾಂಕುಗಳಲ್ಲಿ ಹೂಡಿದ ಹಣದ ಲೆಕ್ಕಾಚಾರದಲ್ಲಿ ಭಾರತೀಯರ ಹೂಡಿಕೆಯ ಪ್ರಮಾಣ ಕೇವಲ ಶೇ. 0.07.

ವಿದೇಶಿಗರ ಹೂಡಿಕೆಯಲ್ಲಿ ಬ್ರಿಟನ್ ಶೇ. 26, ಇದಾದ ನಂತರ, ಅಮೆರಿಕ, ವೆಸ್ಟ್ ಇಂಡೀಸ್, ಫ್ರಾನ್ಸ್ , ಹಾಂಕಾಂಗ್ ಸ್ಥಾನವನ್ನು ಪಡೆದಿದೆ. ಈ ಐದು ದೇಶಗಳ ಜನರು ಹೂಡಿರುವ ಹಣ ವಿದೇಶಿ ಹೂಡಿಕೆಯ ಅರ್ಧದಷ್ಟಿದೆ.

ಬ್ರಿಕ್ಸ್ ಒಕ್ಕೂಟದ ಐದು ದೇಶಗಳ ಪೈಕಿ, ಸ್ವಿಜರ್ಲ್ಯಾಂಡ್ ಬ್ಯಾಂಕುಗಳಲ್ಲಿನ ಹಣ ಹೂಡಿಕೆಯಲ್ಲಿ ಭಾರತ ಕೊನೆಯ ಸ್ಥಾನದಲ್ಲಿದ್ದರೆ, ಬ್ರಿಟನ್ ಮೊದಲನೇ ಸ್ಥಾನದಲ್ಲಿದೆ.

ವಿದೇಶದಲ್ಲಿರುವ ಕಪ್ಪುಹಣದ ಮಾಹಿತಿ ಶೀಘ್ರದಲ್ಲೇ ಹೊರಕ್ಕೆ: ಗೋಯಲ್ವಿದೇಶದಲ್ಲಿರುವ ಕಪ್ಪುಹಣದ ಮಾಹಿತಿ ಶೀಘ್ರದಲ್ಲೇ ಹೊರಕ್ಕೆ: ಗೋಯಲ್

ನರೇಂದ್ರ ಮೋದಿ ನೇತೃತ್ವದ ಸರ್ಕಾರ 2014ರಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಸ್ವಿಸ್ ಬ್ಯಾಂಕ್‌ನಲ್ಲಿ ಭಾರತೀಯರು ಇರಿಸುವ ಕಪ್ಪುಹಣದ ಪ್ರಮಾಣ ಶೇ 80ರಷ್ಟು ಕಡಿಮೆಯಾಗಿದೆ ಎಂದು ಕೇಂದ್ರ ಹಣಕಾಸು ಸಚಿವರಾಗಿದ್ದ ಪಿಯೂಷ್ ಗೋಯಲ್ ತಿಳಿಸಿದ್ದರು.

English summary
Money parked in Switzerland Banks, India ranked 74th position. India was ranked 73rd in 2018 after it jumped 15 places from its 88th position a year ago.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X