ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೌತುಕದ ಕಾರಣ: ದೇಶ ಬಿಟ್ಟು ಓಡಿದ ವಿವೋ ಮೊಬೈಲ್ಸ್ ನಿರ್ದೇಶಕ ಝೆಂಗ್ ಔ!

|
Google Oneindia Kannada News

ನವದೆಹಲಿ, ಜುಲೈ 7: ಚೀನಾ ಸಂಸ್ಥೆಯ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ತನ್ನ ವಿಚಾರಣೆಯನ್ನು ತೀವ್ರಗೊಳಿಸಿರುವುದರ ಮಧ್ಯೆ ವಿವೋ ಇಂಡಿಯಾ ನಿರ್ದೇಶಕರಾದ ಝೆಂಗ್‌ಶೆನ್ ಔ ಮತ್ತು ಜಾಂಗ್ ಜೀ ದೇಶ ತೊರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ವಿವೋ ಸಂಸ್ಥೆಯ 40 ಸ್ಥಳಗಳಲ್ಲಿ ದಾಳಿ ನಡೆಸಿ ಶೋಧ ಕಾರ್ಯಾಚರಣೆ ನಡೆಸಿದ ಒಂದು ದಿನದಲ್ಲೇ ನಿರ್ದೇಶಕರು ದೇಶ ತೊರೆದಿರುವ ಬಗ್ಗೆ ಮಾಹಿತಿ ಸಿಕ್ಕಿದೆ.

ಡೋಲೋ 650 ತಯಾರಕ ಕಂಪನಿ ಮೈಕ್ರೋ ಲ್ಯಾಬ್ಸ್ ಮೇಲೆ ಐಟಿ ದಾಳಿ ಡೋಲೋ 650 ತಯಾರಕ ಕಂಪನಿ ಮೈಕ್ರೋ ಲ್ಯಾಬ್ಸ್ ಮೇಲೆ ಐಟಿ ದಾಳಿ

ವಿವೋ ಮೊಬೈಲ್ ಕಮ್ಯುನಿಕೇಷನ್ಸ್ ಮತ್ತು ಇತರ ಕೆಲವು ಚೀನಾ ಸಂಸ್ಥೆಗಳಿಗೆ ಸಂಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆಡರಲ್ ಏಜೆನ್ಸಿ ಮಂಗಳವಾರ ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಕೆಲವು ದಕ್ಷಿಣದ ರಾಜ್ಯಗಳ 40 ಸ್ಥಳಗಳಲ್ಲಿ ದಾಳಿ ನಡೆಸಿತ್ತು.

ಕೇಂದ್ರೀಯ ತನಿಖಾ ದಳದಿಂದಲೂ ತನಿಖೆ

ಕೇಂದ್ರೀಯ ತನಿಖಾ ದಳದಿಂದಲೂ ತನಿಖೆ

ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದ ಪ್ರಕರಣವನ್ನು ಈಗಾಗಲೇ ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆ ನಡೆಸುತ್ತಿದೆ. ಐಟಿ ಇಲಾಖೆ ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ಚೀನಾದ ಉತ್ಪಾದನಾ ಸಂಸ್ಥೆಗಳ ಮೇಲೆ ನಿಗಾ ಇರಿಸಿದೆ. ಇಡಿ ದಾಳಿಯು ಚೀನಾದ ಸಂಸ್ಥೆಗಳ ವಿರುದ್ಧದ ತನಿಖೆಯನ್ನು ವಿಸ್ತರಿಸಿದೆ.

ಹಣ ವರ್ಗಾವಣೆಯಲ್ಲಿ ಅಕ್ರಮದ ಆರೋಪ

ಹಣ ವರ್ಗಾವಣೆಯಲ್ಲಿ ಅಕ್ರಮದ ಆರೋಪ

ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಉಲ್ಲಂಘನೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶೋಧ ಕಾರ್ಯ ನಡೆಸುತ್ತಿದ್ದಾರೆ. ಈ ನಿಟ್ಟಿನಲ್ಲೇ ಇತ್ತೀಚಿಗೆ ಮೊಬೈಲ್ ಕಂಪನಿಗೆ ಸಂಬಂಧಿಸಿದ 40 ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿತ್ತು. ಅಕ್ರಮ ಹಣ ವರ್ಗಾವಣೆ ಮಾಡಿರುವುದಕ್ಕೆ ಸಂಬಂಧಿಸಿದಂತೆ ಇಡಿ ವಿಚಾರಣೆಯನ್ನು ತೀವ್ರಗೊಳಿಸಿತ್ತು.

ಕೇಂದ್ರದ ಕಣ್ಗಾವಲಿನಲ್ಲಿ ಚೀನಾ ಕಂಪನಿ

ಕೇಂದ್ರದ ಕಣ್ಗಾವಲಿನಲ್ಲಿ ಚೀನಾ ಕಂಪನಿ

ಚೀನಾ ಮೂಲದ ಇತರ ಸಂಸ್ಥೆಗಳ ತನಿಖೆಯ ಭಾಗವಾಗಿ ವಿವೋ ಮೊಬೈಲ್ ಕಮ್ಯುನಿಕೇಷನ್ಸ್‌ನ ಸ್ಥಳೀಯ ಘಟಕಗಳು ಹಣಕಾಸಿನ ಅವ್ಯವಹಾರ ನಡೆಸುತ್ತಿರುವುದರ ಹಿನ್ನೆಲೆ ತೀವ್ರ ಕಣ್ಗಾವಲಿನಲ್ಲಿ ಇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ವಿವೋ ಸಂಸ್ಥೆಯ ವಿರುದ್ಧ ತನಿಖೆಗೆ ವಿಶೇಷ ಗಮನ

ವಿವೋ ಸಂಸ್ಥೆಯ ವಿರುದ್ಧ ತನಿಖೆಗೆ ವಿಶೇಷ ಗಮನ

ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ವಂಚನೆ ಸೇರಿದಂತೆ ಸಂಭಾವ್ಯ ಉಲ್ಲಂಘನೆಗಳ ಮೇಲೆ ವಿಶೇಷ ಗಮನಹರಿಸುತ್ತಿದೆ. ವಿವೋ ಪ್ರಕರಣದಲ್ಲಿ, "ಮಾಲೀಕತ್ವ ಮತ್ತು ಹಣಕಾಸು ವರದಿಯಲ್ಲಿ ಗಮನಾರ್ಹ ಅಕ್ರಮಗಳಿದ್ದರೆ" ಪತ್ತೆ ಮಾಡಲು ಈ ವರ್ಷದ ಏಪ್ರಿಲ್‌ನಲ್ಲಿ ತನಿಖೆಯನ್ನು ಕೋರಲಾಗಿತ್ತು.

Recommended Video

Asia Cupನಲ್ಲಿ ಭಾರತ ಪಾಕಿಸ್ತಾನ ಮುಖಾಮುಖಿ | *Cricket | OneIndia Kannada

English summary
amid Enforcement Directorate intensifies money laundering probe Vivo India director Zhengsheng Ou and Zhang Jie is leave country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X