ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋನಿಯಾ ಗಾಂಧಿ ಆಪ್ತನ ನಿವಾಸದ ಮೇಲೆ ಇಡಿ ದಾಳಿ

|
Google Oneindia Kannada News

ನವದೆಹಲಿ, ಜೂನ್ 27: ಇತ್ತೀಚಿನ ದಿನಗಳಲ್ಲಿ ಇದೇ ಮೊದಲ ಬಾರಿ ಜಾರಿ ನಿರ್ದೇಶನಾಲಯ (ಇಡಿ) ಪ್ರಮುಖ ರಾಜಕಾರಣಿಯೊಬ್ಬರ ಮನೆ ಮೇಲೆ ದಾಳಿ ನಡೆಸಿದೆ.

Recommended Video

ಇಂತಹ ಪರಿಸ್ಥಿತಿ ಯಾರಿಗೂ ಬರಬಾರದು. | Andhra Pradesh | Oneindia Kannada

ಸೋನಿಯಾ ಗಾಂಧಿ ಪರಮಾಪ್ತ, ರಾಜ್ಯಸಭಾ ಸದಸ್ಯ ಅಹ್ಮದ್ ಪಟೇಲ್ ನಿವಾಸದ ಮೇಲೆ ದಾಳಿ ನಡೆಸಿರುವ ಇಡಿ ಅಧಿಕಾರಿಗಳು, ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ.

 ಯೆಸ್‌ ಬ್ಯಾಂಕ್ ಕೇಸ್: ಮುಂಬೈನ 5 ಸ್ಥಳಗಳ ಮೇಲೆ ದಾಳಿ ನಡೆಸಿದ ಇಡಿ ಯೆಸ್‌ ಬ್ಯಾಂಕ್ ಕೇಸ್: ಮುಂಬೈನ 5 ಸ್ಥಳಗಳ ಮೇಲೆ ದಾಳಿ ನಡೆಸಿದ ಇಡಿ

ಸಂದೇಸರ ಸಮೂಹ ಕಂಪನಿಯ ಹದಿನೈದು ಸಾವಿರ ಕೋಟಿ ವಂಚನೆ ಪ್ರಕರಣದಲ್ಲಿ ಅಹ್ಮದ್ ಪಟೇಲ್ ಶಾಮೀಲಾಗಿರುವ ಆರೋಪದ ಮೇಲೆ ಜಾರಿ ನಿರ್ದೇಶನಾಲಯ, ಇದೇ ಮೊದಲ ಬಾರಿ ದಾಳಿ ನಡೆಸಿ ಕೆಲವು ದಾಖಲೆಗಳನ್ನು ಪರಿಶೀಲಿಸುತ್ತಿದೆ.

Money Laundering Case: ED Knocks Sonia Gandhis Aide Ahmed Patels Residence In Delhi

ಮನಿ ಲಾಂಡ್ರಿಂಗ್ ಕಾಯ್ದೆಯಡಿ, ಇಡಿಯ ಮೂರು ಸದಸ್ಯರ ತಂಡ ಅಹ್ಮದ್ ಪಟೇಲ್ ಅವರ ಕೇಂದ್ರ ದೆಹಲಿಯಲ್ಲಿರುವ ನಿವಾಸಕ್ಕೆ ತೆರಳಿ ದಾಖಲೆಗಳನ್ನು ಪರಿಶೀಲಿಸುತ್ತಿದೆ.

ಎರಡು ಬಾರಿ ವಿಚಾರಣೆಗೆ ಹಾಜರಾಗುವಂತೆ ಇಡಿ ನೊಟೀಸ್ ಕಳುಹಿಸಿತ್ತು.ಆದರೆ, ಕೋವಿಡ್ 19 ಹಾವಳಿ ಹೆಚ್ಚಾಗಿರುವುದರಿಂದ, ಹಿರಿಯ ನಾಗರೀಕರು ಮನೆಯಲ್ಲೇ ಇರಬೇಕು ಎನ್ನುವ ಮಾರ್ಗಸೂಚಿ ಇರುವುದರಿಂದ, ಅಹ್ಮದ್ ಪಟೇಲ್ ವಿಚಾರಣೆಗೆ ಹಾಜರಾಗಿರಲಿಲ್ಲ.

ಕಾಂಗ್ರೆಸ್ ಪಕ್ಷದ ಖಜಾಂಚಿ ಅಹ್ಮದ್ ಪಟೇಲ್‌ಗೆ ಐಟಿ ಸಮನ್ಸ್ಕಾಂಗ್ರೆಸ್ ಪಕ್ಷದ ಖಜಾಂಚಿ ಅಹ್ಮದ್ ಪಟೇಲ್‌ಗೆ ಐಟಿ ಸಮನ್ಸ್

ಸ್ಟೆರ್ಲಿಂಗ್ ಬಯೋಟೆಕ್ ಮಾಲೀಕತ್ವದ ಸಂದೇಸರ ಗ್ರೂಪ್‍, ಅಹ್ಮದ್ ಪಟೇಲ್ ಅವರ ಪ್ರಭಾವದಿಂದ ವಿವಿಧ ಬ್ಯಾಂಕುಗಳಿಂದ 15 ಸಾವಿರ ಕೋಟಿ ಹಣವನ್ನು ಸಾಲದ ರೂಪದಲ್ಲಿ ಪಡೆದಿತ್ತು. ಆದರೆ, ಸಂದೇಸರ ಗ್ರೂಪ್ ಬ್ಯಾಂಕಿಗೆ ಹಣ ಹಿಂದಿರುಗಿಸದ ಆರೋಪವಿತ್ತು. ಬ್ಯಾಂಕ್ ನಿಂದ ಸಾಲ ಕೊಡಿಸಲು ಅಹಮದ್ ಪಟೇಲ್ ಭಾರೀ ಮೊತ್ತದ ಲಂಚವನ್ನು ಪಡೆದಿದ್ದರು ಎನ್ನುವ ಆರೋಪವಿದೆ.

English summary
Money Laundering Case: ED Knocks Sonia Gandhi's Aide Ahmed Patel's Residence In Delhi,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X