ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋಮವಾರದ ಹತ್ತು ಹಲವು ಸುದ್ದಿ ಚಿತ್ರ ಸಹಿತ ನೋಡಿ

By Kiran B Hegde
|
Google Oneindia Kannada News

ಬೆಂಗಳೂರು, ಫೆ. 2: ದೇಶ ಹಾಗೂ ವಿದೇಶಗಳಲ್ಲಿ ಸೋಮವಾರ ನಡೆದ ಹಲವು ಘಟನಾವಳಿಗಳ ಸುದ್ದಿಗಳ ಕುರಿತು ಚಿತ್ರ ಸಹಿತ ಸಂಕ್ಷಿಪ್ತ ವಿವರಣೆಯನ್ನು ಇಲ್ಲಿ ನೀಡಲಾಗಿದೆ.

ದೇಶದಲ್ಲಿ ಇದೇ ಪ್ರಥಮ ಬಾರಿಗೆ ಮನು ಎಂಬುವರಿಗೆ ಕೈ ಕಸಿ ಮಾಡಲಾಗಿದೆ. ಕಸಿಗೊಂಡಿರುವ ಕೈಯನ್ನು ಅವರು ಕೊಚ್ಚಿಯಲ್ಲಿರುವ ಅಮೃತಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಕಾಲೇಜಿನಲ್ಲಿ ಮಾಧ್ಯಮಗಳ ಎದುರು ಪ್ರದರ್ಶಿಸಿದ್ದಾರೆ.

ಅಮೆರಿಕ ಹಾಗೂ ಕಾಶ್ಮೀರದಲ್ಲಿ ಬೀಳುತ್ತಿರುವ ಹಿಮ ಮಳೆಗಳು ಸ್ಥಳೀಯರ ದಿನಚರಿಯನ್ನು ಭಾಗಶಃ ಸ್ಥಬ್ಧಗೊಳಿಸಿದೆ. ಅಲ್ಲಿನವರಿಗೆ ಚಳಿಯಿಂದ ರಕ್ಷಿಸಿಕೊಳ್ಳುವುದು ಹಾಗೂ ಹೊರಗಿನ ಸಂಚಾರ ದುಸ್ತರವಾಗಿ ಪರಿಣಮಿಸುತ್ತಿದೆ. ಕೇರಳದ ಕೊಚ್ಚಿಯಲ್ಲಿ 35ನೇ ರಾಷ್ಟ್ರೀಯ ಗೇಮ್ಸ್‌ನಲ್ಲಿ ಕಂಡುಬಂದ ಹಲವು ಚಿತ್ರಗಳನ್ನು ಇಲ್ಲಿ ನೋಡಬಹುದು.

ಭಾರತದ ಪ್ರಥಮ ಕೈ ಕಸಿ

ಭಾರತದ ಪ್ರಥಮ ಕೈ ಕಸಿ

ಕೈ ಕಸಿ ಮಾಡಿಸಿಕೊಂಡ ಭಾರತದ ಪ್ರಥಮ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಮನು ಎಂಬುವರು ಕೊಚ್ಚಿಯಲ್ಲಿರುವ ಅಮೃತಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಕಾಲೇಜಿನಲ್ಲಿ ಮಾಧ್ಯಮಗಳಿಗೆ ತನ್ನ ಕೈ ತೋರಿಸಿದರು.

ಹಿಮದಿಂದ ರಕ್ಷಣೆ

ಹಿಮದಿಂದ ರಕ್ಷಣೆ

ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಬೀಳುತ್ತಿರುವ ಹಿಮ ಮಳೆಯಿಂದ ತನ್ನ ಮಗುವನ್ನು ರಕ್ಷಿಸಿಕೊಳ್ಳುತ್ತಿರುವ ತಂದೆಯೋರ್ವ ಕಂಡುಬಂದಿದ್ದು ಹೀಗೆ.

ಹಿಮದ ಹೊದಿಕೆ

ಹಿಮದ ಹೊದಿಕೆ

ಕಾಶ್ಮೀರದ ಶ್ರೀನಗರದ ನಿವಾಸಿ ಮಹಿಳೆಯೋರ್ವರು ತನ್ನ ಕಾರಿನ ಮೇಲೆ ಬಿದ್ದ ಹಿಮ ಹೊದಿಕೆಯನ್ನು ಸ್ವಚ್ಛಗೊಳಿಸಿದರು.

ಹಿಮಾಚ್ಛಾದಿತ ಉದ್ಯಾನ

ಹಿಮಾಚ್ಛಾದಿತ ಉದ್ಯಾನ

ಕಾಶ್ಮೀರದ ಶ್ರೀನಗರದಲ್ಲಿ ಬಿದ್ದ ಹಿಮ ಮಳೆಯಿಂದ ಉದ್ಯಾನಗಳು ಹಿಮಾಚ್ಛಾದಿತವಾಗಿವೆ. ಶ್ರೀನಗರ-ಜಮ್ಮು ಹೆದ್ದಾರಿಯಲ್ಲಿ ಸಂಚಾರ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.

ವಿಮಾನಕ್ಕೆ ಹಿಮದ ಹೊದಿಕೆ

ವಿಮಾನಕ್ಕೆ ಹಿಮದ ಹೊದಿಕೆ

ಅಮೆರಿಕದ ಚಿಕಾಗೋದಲ್ಲಿ ಬೀಳುತ್ತಿರುವ ಹಿಮ ಮಳೆಯಿಂದ ವಿಮಾನ ನಿಲ್ದಾಣದಲ್ಲಿ ನೆಲ ಬಿಟ್ಟು ಏಳದ ವಿಮಾನಗಳ ಮೇಲೆ ಕಾಣಿಸುತ್ತಿರುವ ಹಿಮ ಹೊದಿಕೆ. ಈ ನಿಲ್ದಾಣದಲ್ಲಿ ಸುಮಾರು 1,100 ವಿಮಾನಗಳ ಪ್ರಯಾಣ ರದ್ದಾಗಿದೆ. ವಿಮಾನ ನಿಲ್ದಾಣ ಹಾಗೂ ರಸ್ತೆಗಳು ಹಿಮಾಚ್ಛಾದಿತವಾಗಿವೆ.

ಸಚಿವರ ಬಿಲ್ವಿದ್ಯೆ

ಸಚಿವರ ಬಿಲ್ವಿದ್ಯೆ

ಕೇರಳದ ಕೊಚ್ಚಿಯಲ್ಲಿ ಆರಂಭವಾದ 35ನೇ ರಾಷ್ಟ್ರೀಯ ಗೇಮ್ಸ್‌ನಲ್ಲಿ ಹಿಂದುಳಿದವರ ಕಲ್ಯಾಣ ಇಲಾಖೆ ಸಚಿವೆ ಪಿ.ಕೆ. ಜಯಲಕ್ಷ್ಮಿ ಅವರು ತಮ್ಮ ಬಿಲ್ವಿದ್ಯೆ ಪ್ರದರ್ಶಿಸಿದ್ದು ಹೀಗೆ.

ಕಳರಿಯಪಟ್ಟು

ಕಳರಿಯಪಟ್ಟು

ಕೊಚ್ಚಿಯಲ್ಲಿ ನಡೆಯುತ್ತಿರುವ 35ನೇ ರಾಷ್ಟ್ರೀಯ ಗೇಮ್ಸ್‌ ಉದ್ಘಾಟನೆ ಕಾರ್ಯಕ್ರಮದಲ್ಲಿ ಕಳರಿಯಪಟ್ಟು ಹೋರಾಟ ವಿದ್ಯೆ ಪ್ರದರ್ಶಿಸಲಾಯಿತು.

ಗೆಲುವಿನ ಸಂತಸ

ಗೆಲುವಿನ ಸಂತಸ

ಕಣ್ಣೂರಿನಲ್ಲಿ ನಡೆಯುತ್ತಿರುವ 35ನೇ ರಾಷ್ಟ್ರೀಯ ಗೇಮ್ಸ್‌ನಲ್ಲಿ ಪದಕ ಗೆದ್ದ ಭಾರತದ ಕುಸ್ತಿಪಟುಗಳಾದ ಜಿತೇಂದ್ರ ಸಿಂಗ್, ಮನೋಜ್ ಕುಮಾರ್, ಸುಮನ್ ಕುಂಡು, ರಿತು ಮಲಿಕ್, ರವೀಂದರ್ ಸಿಂಗ್.

ಜವಾಬ್ದಾರಿಯುತ ಯುವ ನಾಗರಿಕರು

ಜವಾಬ್ದಾರಿಯುತ ಯುವ ನಾಗರಿಕರು

ಮುಂಬೈನಲ್ಲಿ ಆಯೋಜಿಸಿದ್ದ ಜವಾಬ್ದಾರಿಯುತ ಯುವ ನಾಗರಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ.

ಮೋದಿ ಭಾಷಣ ವೈಖರಿ

ಮೋದಿ ಭಾಷಣ ವೈಖರಿ

ನವದೆಹಲಿಯ ದ್ವಾರಕಾದಲ್ಲಿ ಭಾನುವಾರ ಆಯೋಜಿಸಿದ್ದ ಚುನಾವಣಾ ರ್ಯಾಲಿಯಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದ ಒಂದು ಭಂಗಿ.

ರಷ್ಯಾ, ಶ್ರೀಲಂಕಾ ಕಲಾವಿದರ ನರ್ತನ

ರಷ್ಯಾ, ಶ್ರೀಲಂಕಾ ಕಲಾವಿದರ ನರ್ತನ

ಹರ್ಯಾಣದ ಸೂರಜ್‌ಕುಂಡ್‌ನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ನೈಪುಣ್ಯತೆಯ ಮೇಳದಲ್ಲಿ ರಷ್ಯಾ ಹಾಗೂ ಶ್ರೀಲಂಕಾ ಕಲಾವಿದರು ನರ್ತಿಸಿದರು.

ಜಾನಪದ ಕಲಾವಿದೆಯರು

ಜಾನಪದ ಕಲಾವಿದೆಯರು

ಹರ್ಯಾಣದ ಸೂರಜ್‌ಕುಂಡ್‌ನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ನೈಪುಣ್ಯತೆಯ ಮೇಳದಲ್ಲಿ ನರ್ತಿಸಿದ ಜಾನಪದ ಕಲಾವಿದೆಯರಿವರು.

ವೇಷಧಾರಿಗಳ ಪ್ರಚಾರ

ವೇಷಧಾರಿಗಳ ಪ್ರಚಾರ

ನವದೆಹಲಿಯಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪರ ರಾಮದೇವ ಬಾಬಾ ಹಾಗೂ ಪ್ರಧಾನಿ ನರೇಂದ್ರ ಮೋದಿ ವೇಷಧಾರಿಗಳು ಪ್ರಚಾರ ನಡೆಸಿದರು.

ವೀರ ವನಿತೆಯರು

ವೀರ ವನಿತೆಯರು

ಪಾಕಿಸ್ತಾನದ ಪೇಶಾವರದಲ್ಲಿನ ಸೈನಿಕ ಶಾಲೆಯ ಮೇಲೆ ಉಗ್ರರು ದಾಳಿ ನಡೆಸಿ ನೂರಾರು ಮಕ್ಕಳನ್ನು ಹತ್ಯೆಗೈದ ಮೇಲೆ ಅಲ್ಲಿನ ಸರ್ಕಾರ ಶಿಕ್ಷಕರಿಗೆ ಶಸ್ತ್ರ ತರಬೇತಿ ನೀಡುತ್ತಿದೆ. ಮಹಿಳೆಯರಿಗೆ ತೀವ್ರ ಧಾರ್ಮಿಕ ಕಟ್ಟುಪಾಡುಗಳಿದ್ದರೂ ಮಕ್ಕಳ ರಕ್ಷಣೆಗಾಗಿ ಮಹಿಳೆಯರು ಶಸ್ತ್ರ ತರಬೇತಿ ಪಡೆಯುತ್ತಿದ್ದಾರೆ.

ವೀರ ವನಿತೆಯರು

ವೀರ ವನಿತೆಯರು

ಪಾಕಿಸ್ತಾನದ ಪೇಶಾವರದಲ್ಲಿನ ಸೈನಿಕ ಶಾಲೆಯ ಮೇಲೆ ಉಗ್ರರು ದಾಳಿ ನಡೆಸಿ ನೂರಾರು ಮಕ್ಕಳನ್ನು ಹತ್ಯೆಗೈದ ಮೇಲೆ ಅಲ್ಲಿನ ಸರ್ಕಾರ ಶಿಕ್ಷಕರಿಗೆ ಶಸ್ತ್ರ ತರಬೇತಿ ನೀಡುತ್ತಿದೆ. ಮಹಿಳೆಯರಿಗೆ ತೀವ್ರ ಧಾರ್ಮಿಕ ಕಟ್ಟುಪಾಡುಗಳಿದ್ದರೂ ಮಕ್ಕಳ ರಕ್ಷಣೆಗಾಗಿ ಮಹಿಳೆಯರು ಶಸ್ತ್ರ ತರಬೇತಿ ಪಡೆಯುತ್ತಿದ್ದಾರೆ.

ಪ್ರಧಾನಿ ಸಭೆ

ಪ್ರಧಾನಿ ಸಭೆ

ನವದೆಹಲಿಯಲ್ಲಿ ಜಾಗತಿಕ ಮಟ್ಟದ ವಿವಿಧ ಕಂಪನಿಗಳ ಸಿಇಒಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಭೆ ನಡೆಸಿದರು.

ಹಸ್ತ ಲಾಘವ

ಹಸ್ತ ಲಾಘವ

ಚೀನಾ ರಾಜಧಾನಿ ಬೀಜಿಂಗ್‌ನಲ್ಲಿ ವಿದೇಶಾಂಗ ಸಚಿವರಾದ ರಷ್ಯಾದ ಸರ್ಜಿ ಲಾರೊವ್, ಚೀನಾದ ವಾಂಗ್ ಯಿ ಹಾಗೂ ಭಾರತದ ಸುಷ್ಮಾ ಸ್ವರಾಜ್ ಪರಸ್ಪರ ಹಸ್ತಲಾಘವ ಮಾಡಿದರು.

ಕದ್ದ ಆಭರಣ ಪ್ರದರ್ಶನ

ಕದ್ದ ಆಭರಣ ಪ್ರದರ್ಶನ

ಮುಂಬೈನ ಕ್ರೈಂ ಬ್ರಾಂಚ್ ಪೊಲೀಸ್ ಅಧಿಕಾರಿಗಳು ಥಾಣೆಯಲ್ಲಿ ಬಂಧಿಸಿದ ಏಳು ಜನರಿಂದ ವಶಪಡಿಸಿಕೊಂಡ ಕಳ್ಳತನದ ಆಭರಣಗಳನ್ನು ಪ್ರದರ್ಶಿಸಿದರು.

ರಾಜಗಾಂಭೀರ್ಯದ ನಡಿಗೆ

ರಾಜಗಾಂಭೀರ್ಯದ ನಡಿಗೆ

ಕಾಶ್ಮೀರದ ಶ್ರೀನಗರದಲ್ಲಿನ ಡಾಚಿಗಾಮ್ ವನ್ಯಜೀವಿ ಅಭಯಾರಣ್ಯದಲ್ಲಿ ಬೀಳುತ್ತಿರುವ ಹಿಮ ಮಳೆಯ ಮಧ್ಯೆಯೂ ಚಿರತೆಯೊಂದು ರಾಜಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಿದೆ.

English summary
Here are many news with pictures happened on Monday in India and around the world.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X