ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ಪಿಸಿ ಆಂಡ್ ಪಿಎನ್‌ಡಿಟಿ ಕಾಯ್ದೆಯನ್ನು ಸರ್ಕಾರ ತೆಗೆದು ಹಾಕಿದೆಯೇ?

|
Google Oneindia Kannada News

ನವದೆಹಲಿ, ಏಪ್ರಿಲ್ 11: ಸರ್ಕಾರವು ಗರ್ಭ ಪೂರ್ವ ಮತ್ತು ಪ್ರಸವ ಪೂರ್ವ ಲಿಂಗ ಪತ್ತೆ ಕಾಯ್ದೆಯನ್ನು ತೆಗೆದು ಹಾಕಿಲ್ಲ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಮಾಧ್ಯಮಗಳ ಕೆಲವು ವರದಿಗಳು ಗರ್ಭ ಪೂರ್ವ ಮತ್ತು ಪ್ರಸವ ಪೂರ್ವ ಲಿಂಗ ಪತ್ತೆ ಕಾಯ್ದೆ 1994ನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತೆಗೆದುಹಾಕಿದೆ ಎಂದು ವರದಿ ಮಾಡಿವೆ.

ಈ ವರದಿ ಸುಳ್ಳು ಅಂತಹ ಯಾವುದೇ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿಲ್ಲ. ಗರ್ಭ ಪೂರ್ವ ಅಥವಾ ಪ್ರಸವಪೂರ್ವ ಲಿಂಗ ಪತ್ತೆ ವಿರುದ್ಧ ಸರ್ಕಾರ ಎಂದಿಗೂ ಕ್ರಮಗಳನ್ನು ಕೈಗೊಂಡಿದೆ.

MoHFW Has Not Suspended The PC And PNDT Act

ಭ್ರೂಣಲಿಂಗ ಪತ್ತೆಗೆ ಎಂದಿಗೂ ಬೆಂಬಲ ನೀಡಿಲ್ಲ ಎಂದು ತಿಳಿಸಿದೆ.ಏಪ್ರಿಲ್ 4ರಂದು 1996ರ ಪಿಸಿ ಆಂಡ್ ಪಿಎನ್‌ಡಿಸಿ ಕಾಯ್ದೆಯಲ್ಲಿ ಸ್ವಲ್ಪ ಬದಲಾವಣೆ ತಂದಿದೆ. ಹಾಗೆಯೇ ಅಲ್ಟ್ರಾಸೌಂಡ್ ಕ್ಲಿನಿಕ್, ಜೆನೆಟಿಕ್ ಕೌನ್ಸೆಲಿಂಗ್ ಸೆಂಟರ್, ಜೆನೆಟಿಕ್ ಲ್ಯಾಬೊರೇಟರಿ, ಜೆನೆಟಿಕ್ ಕ್ಲಿನಿಕ್‌ಗಳಲ್ಲಿ ಕಡ್ಡಾಯವಾಗಿ ದಾಖಲೆಗಳನ್ನಿಟ್ಟುಕೊಳ್ಳಬೇಕು ಎಂದು ಅದರಲ್ಲ ತಿಳಿಸಲಾಗಿದೆ.

ಭ್ರೂಣದ ಲಿಂಗ ಪತ್ತೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಭ್ರೂಣದ ಸ್ಕ್ಯಾನಿಂಗ್ ಅಥವಾ ಸಿಡಿಗಳನ್ನು ಬಳಸಿಕೊಂಡು ಭ್ರೂಣದ ಪತ್ತೆ ಮಾಡುವ ಸಾಧ್ಯತೆಗಳು ಕೂಡ ಇದೆ.
ಜೂನ್ 30ರೊಳಗಾಗಿ ಎಲ್ಲಾ ದಾಖಲೆಗಳನ್ನು ಸರ್ಕಾರಕ್ಕೆ ಸಲ್ಲಿಸಬೇಕು ಅದರಲ್ಲಿ ಯಾವುದೇ ರಿಯಾಯಿತಿ ಇರುವುದಿಲ್ಲ ಎಂದು ಹೇಳಿದೆ.

English summary
A section of the media is speculating that the PC&PNDT (Pre Conception and Pre Natal Diagnostic Techniques (Prohibition of Sex Selection) Act 1994 has been suspended by the Ministry of Health and Family Welfare. It is clarified that MoHFW has not suspended the PC&PNDT Act, which prohibits sex selection before or after conception.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X