ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಗ್ರ ಮೊಹಮ್ಮದ್ ನವೀದ್‌ ಎನ್‌ಐಎ ವಶಕ್ಕೆ

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಆಗಸ್ಟ್ 11 : ಉದಾಂಪುರ್‌ನಲ್ಲಿ ಸೆರೆಸಿಕ್ಕ ಉಗ್ರ ಮೊಹಮ್ಮದ್ ನವೀದ್‌ನನ್ನು 14 ದಿನಗಳ ಕಾಲ ಎನ್‌ಐಎ ವಶಕ್ಕೆ ಒಪ್ಪಿಸಿ ರಾಷ್ಟ್ರೀಯ ತನಿಖಾ ದಳದ ವಿಶೇಷ ಕೋರ್ಟ್ ಆದೇಶ ನೀಡಿದೆ. ಸೋಮವಾರ ರಾತ್ರಿ ನವೀದ್‌ನನ್ನು ಜಮ್ಮು ಕಾಶ್ಮೀರ ಪೊಲೀಸರ ವಶದಿಂದ ಎನ್‌ಐಎ ತಮ್ಮ ವಶಕ್ಕೆ ಪಡೆದುಕೊಂಡಿತ್ತು.

ಎನ್‌ಐಎ ಮಂಗಳವಾರ ಮೊಹಮ್ಮದ್ ನವೀದ್‌ನನ್ನು ವಿಶೇಷ ಕೋರ್ಟ್ ಮುಂದೆ ಹಾಜರುಪಡಿಸಿತು ಮತ್ತು ಹೆಚ್ಚಿನ ವಿಚಾರಣೆಗಾಗಿ ತಮ್ಮ ವಶಕ್ಕೆ ನೀಡುವಂತೆ ಮನವಿ ಮಾಡಿತು. ಮನವಿಯನ್ನು ಪುರಸ್ಕರಿಸಿದ ಕೋರ್ಟ್ 14 ದಿನಗಳ ಕಾಲ ನವೀದ್‌ನನ್ನು ಎನ್‌ಐಎ ವಶಕ್ಕೆ ಒಪ್ಪಿಸಿದೆ. [ನವೀದ್ ಲಷ್ಕರ್ ಸೇರಿದ್ದು ಹೇಗೆ?]

mohammad naved

ಉದಾಂಪುರ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಗ್ಗೆ ಎನ್‌ಐಎ ತನಿಖೆ ನಡೆಸುತ್ತಿದ್ದು, ನವೀದ್‌ನಿಂದ ಸಾಕಷ್ಟು ಮಾಹಿತಿಯನ್ನು ಸಂಗ್ರಹಿಸಬೇಕಾಗಿದೆ. ಎನ್‌ಐಎ ಅಧಿಕಾರಿಗಳು ಒನ್ ಇಂಡಿಯಾಕ್ಕೆ ನೀಡಿರುವ ಮಾಹಿತಿಯಂತೆ ನವೀದ್‌ಗೆ ಸಹಾಯ ಮಾಡಿರುವ ಸ್ಥಳೀಯರ ಬಗ್ಗೆ ಮೊದಲು ವಿಚಾರಣೆ ನಡೆಯಲಿದೆ. [ನವೀದ್ ಬಾಲಾಪರಾಧಿ ಎಂದು ಸಾಬೀತಾದರೆ?]

ಎನ್‌ಐಎ ಈಗಾಗಲೇ 12 ಶಂಕಿತರನ್ನು ಗುರುತಿಸಿದ್ದು, ಇವರು ನವೀದ್‌ಗೆ ಹೇಗೆ ಸಹಾಯ ಮಾಡಿದ್ದಾರೆ? ಎಂದು ತನಿಖೆ ನಡೆಸಲಾಗುತ್ತದೆ. ಉಗ್ರರ ದಾಳಿಯಲ್ಲಿ ಮೃತಪಟ್ಟ ನೋಮನ್ ಮತ್ತು ನವೀದ್ ಗಡಿಯಲ್ಲಿ ಬೇಲಿ ಕತ್ತರಿಸಿ ಭಾರತಕ್ಕೆ ನುಗ್ಗಿದ್ದರು. ಆದ್ದರಿಂದ ಮಾರ್ಗಗಳ ಬಗ್ಗೆಯೂ ಎನ್‌ಐಎ ವಿಚಾರಣೆ ನಡೆಸಲಿದೆ.

English summary
Mohammad Naved, the prime accused in the Udhampur attack case will spend 14 days in the custody of the National Investigating Agency. A special court of the National Investigating Agency granted custody of Naved for 14 days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X