ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿಯಿಂದ ಜಮ್ಮು ಕಾಶ್ಮೀರಕ್ಕೆ ಭರ್ಜರಿ ದೀಪಾವಳಿ ಗಿಫ್ಟ್

|
Google Oneindia Kannada News

ಶ್ರೀನಗರ, ನವೆಂಬರ್, 07: ಬಿಹಾರ ಅಭಿವೃದ್ಧಿಗೆ ಭರ್ಜರಿ ಪ್ಯಾಕೇಜ್ ಘೋಷಿಸಿದ್ದ ಪ್ರಧಾನಿ ನರೇಂದ್ರ ಮೋದಿ ಇದೀಗ ಜಮ್ಮು ಕಾಶ್ಮೀರ ಅಭಿವೃದ್ಧಿಗೆ ಬರೋಬ್ಬರಿ 80 ಸಾವಿರ ಕೋಟಿ ಅನುದಾನ ಬಿಡುಗಡೆ ಮಾಡುತ್ತೇನೆ ಎಂದು ಘೋಷಣೆ ಮಾಡಿದ್ದಾರೆ.

ಶ್ರೀನಗರದ ಶೇರ್‌ -ಇ-ಕಾಶ್ಮೀರ್‌ ಸ್ಟೇಡಿಯಂನಲ್ಲಿ ಬಿಜೆಪಿ ಮತ್ತು ಪಿಡಿಪಿ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಶನಿವಾರ ಮಾತನಾಡಿದ ಮೋದಿ ಕೊಡುಗೆಗಳ ಮಹಾಪೂರವನ್ನೇ ಜಮ್ಮು ಕಾಶ್ಮೀರದ ಜನತೆಗೆ ಹರಿಸಿದ್ದಾರೆ. ಮೋದಿ ಭಾಷಣದ ವೇಳೆ 300ಕ್ಕೂ ಅಧಿಕ ಜನ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆಗೆ ಮುಂದಾದವರನ್ನು ಪೊಲೀಸರು ನಿಯಂತ್ರಣಕ್ಕೆ ತಂದರು.[ಮೋದಿ ಗೆಲುವಿನಿಂದ ಬುದ್ದಿಜೀವಿಗಳಿಗೆ ದಿಗಿಲು: ಭೈರಪ್ಪ ವಾಗ್ದಾಳಿ]

modi

ಶನಿವಾರದ ಮೋದಿ ಭಾಷಣದ ಹೈಲೈಟ್ಸ್ ಇಲ್ಲಿದೆ
* ಕಾಶ್ಮೀರದ ನನ್ನ ಸಹೋದರ ಸಹೋದರಿಯರು ಪ್ರವಾಹದಿಂದ ಕಳೆದ ವರ್ಷದ ತತ್ತರಿಸಿ ಹೋಗಿದ್ದರು. ಅವರ ನೆರವಿಗೆ ಸರ್ಕಾರ ಸದಾ ಬದ್ಧ ಎಂದು ಹೇಳಿಕೊಂಡೇ ಬಂದಿದ್ದೇವೆ. ಈ ಕಾರಣಕ್ಕೆ ನನ್ನ ಜನ್ಮದಿನವನ್ನು ಆಚರಣೆ ಮಾಡಿಕೊಂಡಿರಲಿಲ್ಲ.[ಅಭಿವೃದ್ಧಿಯೇ ಗುರಿ ಎಂದ ನರೇಂದ್ರ ಮೋದಿ]
* ಭಾರತ ಮತ್ತು ಚೀನಾ ಆರ್ಥಿಕ ಅಭಿವೃದ್ಧಿಯಲ್ಲಿ ಒಂದೇ ವೇಗದಲ್ಲಿ ಸಾಗುತ್ತಿದ್ದರೂ ನಾವು ಸದ್ಯವೇ ಚೀನಾವನ್ನು ಹಿಂದಿಕ್ಕಲಿದ್ದೇವೆ.
* ಜಮ್ಮು ಕಾಶ್ಮೀರದ ಯುವಜನತೆಗೆ ತಕ್ಕಷ್ಟು ಉದ್ಯೋಗ ಕಲ್ಪಿಸಿಕೊಡಲಿದ್ದೇವೆ.
* ಹಳ್ಳಿ ಹಳ್ಳಿಗೂ ದಿನದ 24 ಗಂಟೆ ವಿದ್ಯುತ್ ನೀಡಲು ಕ್ರಮ ತೆಗೆದುಕೊಳ್ಳುತ್ತೇವೆ.
* ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಅದನ್ನು ಅಭಿವೃದ್ಧಿ ಮಾಡುವುದು ಎಲ್ಲ ಸರ್ಕಾರಗಳ ಜವಾಬ್ದಾರಿ.
* ಜಮ್ಮುಕಾಶ್ಮೀರದ ಬಗ್ಗೆ ಅಟಲ್ ಬಿಹಾರಿ ವಾಜಪೇಯಿ ಕಂಡ ಕನಸನ್ನು ನನಸು ಮಾಡೋಣ.
* ರಾಜ್ಯದಲ್ಲಿರುವ ಶಿಕ್ಷಣ ಸಂಸ್ಥೆಗಳು, ರೈಲ್ವೆ ಮತ್ತು ರಸ್ತೆಯನ್ನು ಅಭಿವೃದ್ಧಿ ಮಾಡಲು ಕೇಂದ್ರ ಸರ್ಕಾರ ಸಂಪೂರ್ಣ ಅನುದಾನ ನೀಡಲಿದೆ.

English summary
Prime Minister Narendra Modi on Saturday announced Rs.80,000 crore economic package for Jammu and Kashmir.Addressing a public rally in Srinagar, Modi said that the package was just the beginning and that Delhi's treasury will be for residents of this state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X