ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

#ModiInsultsIndia ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಏಕೆ?

By Mahesh
|
Google Oneindia Kannada News

ಬೆಂಗಳೂರು, ಮೇ.19: ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳುವವರು, ತೆಗಳುವವರ ಅಂಕಿ ಸಂಖ್ಯೆ ಲೆಕ್ಕಕ್ಕೆ ಸಿಗುವುದಿಲ್ಲ. ಜನಪ್ರಿಯತೆಯ ತುತ್ತತುದಿಯಲ್ಲಿರುವ ಮೋದಿ ಅವರು ಮೂರು ದೇಶಗಳ ಪ್ರವಾಸ ಸಂದರ್ಭದಲ್ಲಿ ನೀಡಿದ ಒಂದು ಹೇಳಿಕೆ ಈಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ಮೋದಿ ವಿರುದ್ಧ ಥರಾವರಿ ಟ್ವೀಟ್ಸ್ ಹರಿದು ಬರುತ್ತಿದೆ.

ಚೀನಾ ಪ್ರವಾಸದ ವೇಳೆ ಮೋದಿ ಅವರು ಶಾಂಘೈ ನಗರದಲ್ಲಿ ಭಾಷಣ ಮಾಡುವಾಗ ನೀಡಿದ ಹೇಳಿಕೆ ಜನತೆಯನ್ನು ಘಾಸಿಗೊಳಿಸಿದೆ.

'ಅಧಿಕಾರ ವಹಿಸಿಕೊಂಡು ಒಂದು ವರ್ಷ ಪೂರೈಸಲಾಗಿದೆ. ಇದು ಸಂತಸದ ವಿಷಯ. ಈ ಮುಂಚೆ ನೀವೆಲ್ಲ ಭಾರತೀಯರು ಹೇಳಿಕೊಳ್ಳಲು ನಾಚಿಕೆ ಪಟ್ಟುಕೊಳ್ಳಬೇಕಾಗಿತ್ತು. ಈಗ ದೇಶವನ್ನು ಪ್ರತಿನಿಧಿಸಲು ಹೆಮ್ಮೆಯಿಂದ ಎದ್ದು ನಿಲ್ಲಬಹುದಾಗಿದೆ. ವಿದೇಶದಲ್ಲಿರುವ ಭಾರತೀಯರು ಸರ್ಕಾರ ಬಂದಾಗಿನಿಂದ ನಮ್ಮ ಬೆಂಬಲಕ್ಕೆ ನಿಂತಿರುವುದಕ್ಕೆ ನಾವು ಆಭಾರಿಯಾಗಿದ್ದೇವೆ ಎಂದಿದ್ದರು.[ಮೋಡಿಗಾರ, ಸೊಗಸುಗಾರ ಸೆಲ್ಫಿ ಮೋಹಿ ಮೋದಿ ]

ನಂತರ ಸಿಯೋಲ್ ನಲ್ಲೂ ಇದೇ ಧಾಟಿಯಲ್ಲಿ ಮಾತನಾಡಿದ ಮೋದಿ, "ಈ ಮುಂಚೆ ನೀವೆಲ್ಲ ಏನು ಕರ್ಮ ಮಾಡಿ ಹಿಂದೂಸ್ತಾನ್ ನಲ್ಲಿ ಜನಿಸಿದೆವೋ ಎಂದು ವ್ಯಥೆ, ಇದು ಒಂದು ದೇಶ, ಇದು ಒಂದು ಸರ್ಕಾರ ಎಂದು ದೇಶ ತೊರೆಯುವ ಮನಸ್ಥಿತಿ ನಿಮ್ಮಲ್ಲಿತ್ತು. ಈಗ ಕಾಲ ಬದಲಾಗಿದೆ..." ಎಂದಿದ್ದರು. ಟ್ವಿಟ್ಟರ್ ನಲ್ಲಿ ಬಂದಿರುವ ಆಕ್ರೋಶದ ಮಾತುಗಳು ಇಲ್ಲಿವೆ...

ಮೋದಿ ಮಾತಿನ ಉದ್ದೇಶ ಏನಾಗಿತ್ತು?

ಮೋದಿ ಮಾತಿನ ಉದ್ದೇಶ ಏನಾಗಿತ್ತು?

'ಈ ಮುಂಚೆ ಯುಪಿಎ ಸರ್ಕಾರವಿದ್ದಾಗ ಎನ್ನಾರೈಗಳು ದುಃಸ್ಥಿತಿಯಲ್ಲಿದ್ದರು ಎನ್ ಡಿಎ ಸರ್ಕಾರ ಬಂದು ಸುಭಿಕ್ಷ ಕಾಲ ಬಂದಿದೆ ಎಂದು ಹೇಳುವುದು' ಮೋದಿ ಅವರ ಭಾಷಣದ ಉದ್ದೇಶವಾಗಿತ್ತು. ಅದರೆ, ವಾಕ್ಯ ರಚನೆ, ಪದ ಬಳಕೆ ವ್ಯತ್ಯಾಸದಿಂದ ಭಾರಿ ಪ್ರಮಾದವಾಗಿದ್ದು, ಈಗ ಸಾರ್ವಜನಿಕರ ಸಿಟ್ಟಿನ ನುಡಿಗಳನ್ನು ಸಹಿಸಿಕೊಳ್ಳುವುದು ಅನಿವಾರ್ಯವಾಗಿದೆ.

ಭಾರತದಲ್ಲಿ ಏನೇ ತೊಂದರೆ ಇರಬಹುದು

ಭಾರತದಲ್ಲಿ ಏನೇ ತೊಂದರೆ ಇರಬಹುದು ಅದರೆ, ಭಾರತೀಯರು ಎಂದು ಹೇಳಿಕೊಳ್ಳಲು ಯಾರೂ ನಾಚಿಕೆ ಪಟ್ಟುಕೊಳ್ಳುವುದಿಲ್ಲ.

ಕಿವಿ ಇದ್ದು, ಹಿಂದಿ ಗೊತ್ತಿದ್ದರೆ ಈ ವಿಡಿಯೋ ನೋಡಿ

ಕಿವಿ ಇದ್ದು, ಹಿಂದಿ ಗೊತ್ತಿದ್ದರೆ ಈ ವಿಡಿಯೋ ನೋಡಿ. ಮೋದಿ ಭಾಷಣ ಕೇಳಿ

ಮೋದಿ ಟೀಕಿಸಿ ಪ್ರತಿಕ್ರಿಯೆ ಪಡೆಯಿರಿ

ಮೋದಿ ಟೀಕಿಸಿ.. ಪ್ರತಿಕ್ರಿಯೆ ಪಡೆಯಿರಿ..ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಿ ಹಾಕಿಕೊಳ್ಳಿ.. ಈ ದೇಶ ಬದಲಾಗಲ್ಲ ಬಿಡಿ.

ಮೂರ್ಖರು ತೆಗೆದುಕೊಂಡ ನಿರ್ಣಯ

2014ರಲ್ಲಿ ಶೇ 31 ರಷ್ಟು ಮೂರ್ಖರು ತೆಗೆದುಕೊಂಡ ನಿರ್ಣಯ 2019ರ ತನಕ ಅನುಭವಿಸಿ.

ಭಾರತದ ಬಗ್ಗೆ ಸರಿಯಾದ ಅರಿವಿಲ್ಲ

ಭಾರತದ ಬಗ್ಗೆ ಸರಿಯಾದ ಅರಿವಿಲ್ಲ.. ಗುಜರಾತ್ ಪ್ರಭೆಯಿಂದ ಹೊರಬಂದು ನೋಡಿ.

ನಮ್ಮದೇ ದುಡ್ಡಲ್ಲಿ ಟೂರ್, ನಮ್ಮನ್ನೇ ಬೈಯುವುದೇ?

ನಮ್ಮದೇ ದುಡ್ಡಲ್ಲಿ ವಿದೇಶಿ ಪ್ರವಾಸ ಮಾಡಿ ನಮ್ಮ ಹಿಂದಿನ ಪೀಳಿಗೆಯನ್ನೇ ದೂಷಿಸುವುದೇ?

ವಾಜಪೇಯಿ ಕೂಡಾ ನಾಚಿಕೆ ಪಟ್ಟುಕೊಂಡರೇ

ವಾಜಪೇಯಿ ಕೂಡಾ ನಾಚಿಕೆ ಪಟ್ಟುಕೊಂಡರೇ ನೀವು ಬಂದ ಮೇಲೆ ಮಾತ್ರ ಎಲ್ಲಾ ಸರಿ ಹೋಯಿತೆ?

ದೇಶಭಕ್ತರ ಮುಂದೆ ಕ್ಷಮೆ ಬೇಡುತ್ತೇನೆ

ಭಗತ್ ಸಿಂಗ್, ರಾಜಗುರು, ಮುಂದೆ ನಾನು ಕ್ಷಮೆ ಯಾಚಿಸುತ್ತೇನೆ.

ಜನರ ಭಾವನೆಗಳಿಗೆ ಧಕ್ಕೆ

ಜನರ ಭಾವನೆಗಳಿಗೆ ಧಕ್ಕೆ ತಂದಿರುವುದರಿಂದ ಎಲ್ಲೆಡೆಯಿಂದ ಆಕ್ರೋಶದ ನುಡಿಗಳು ಕೇಳಿ ಬಂದಿದೆ.

ಭಾರತೀಯರು ಎಂದು ಹೆಮ್ಮೆ ಪಡಿ

ಭಾರತೀಯರು ಎಂದು ಹೆಮ್ಮೆ ಪಡಿ... ಪ್ರಧಾನಿ ಹೇಳಿಕೆ ಬಿಟ್ಟುಬಿಡಿ

2014ರಿಂದ ಯಾವುದೇ ಕಷ್ಟ ನಾವು ಎದುರಿಸಿಲ್ಲ

ಭಾರತದಲ್ಲಿ ಬಡತನ, ಕ್ಷಾಮ, ಭ್ರಷ್ಟಾಚಾರ ಇಲ್ಲ ನಾವು ಹೆಮ್ಮೆ ಪಡುತ್ತೇವೆ.

English summary
Prime Minister Narendra Modi's statement during his recent three-nation tour that Indians were ashamed of being born in the country before his government has not gone down well with the people and thus, the hashtag #ModiInsultsIndia is trending on the microblogging website.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X