ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ ಟ್ವಿಟರ್‌ನಲ್ಲಿ ಟ್ರೆಂಡ್‌ ಆಗುತ್ತಿದೆ 'ಗೋ ಬ್ಯಾಕ್‌ ಮೋದಿ'

|
Google Oneindia Kannada News

ಹೈದರಾಬಾದ್‌, ಮೇ 26: ಗುರುವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೈದರಾಬಾದ್‌ ಮತ್ತು ತಮಿಳುನಾಡಿಗೆ ಭೇಟಿ ನೀಡಲಿದ್ದು, ಈ ಹಿನ್ನೆಲೆಯಲ್ಲಿ ಅದನ್ನು ವಿರೋಧಿಸಿ ಟ್ವಿಟ್ಟರ್‌ನಲ್ಲಿ ಗೋ ಬ್ಯಾಕ್‌ ಮೋದಿ ಎಂಬುದು ಟ್ರೆಂಡ್‌ ಆಗುತ್ತಿದೆ.

ಮೋದಿಯವರ ರಾಜ್ಯ ಭೇಟಿಗೆ ಪ್ರತಿಕ್ರಿಯೆಯಾಗಿ ಜನರು ಸಾಮಾಜಿಕ ಜಾಲತಾಣಗಳಲ್ಲಿ ಟ್ವೀಟ್ ಮಾಡುತ್ತಿದ್ದಾರೆ. ಬಿಜೆಪಿಯ ಸಿದ್ಧಾಂತ, ಬೆಲೆ ಏರಿಕೆ, ಇಂಧನ ದರಗಳು, ಹಿಂದಿ ಭಾಷಾ ವಿವಾದ, ಉದ್ಯಮಿಗಳನ್ನು ಬೆಂಬಲಿಸುವ ಆರೋಪಗಳು ಸೇರಿದಂತೆ ವಿವಿಧ ಕಾರಣಗಳಿಂದಾಗಿ ಟ್ವಿಟರ್‌ನಲ್ಲಿ ಹಲವು ಮಂದಿ ಮೋದಿ ವಿರುದ್ಧ ಅಸಮಾಧಾನಗೊಂಡಿದ್ದಾರೆ.

ಗುರುವಾರ ಮೋದಿ ಹೈದರಾಬಾದ್‌ನಲ್ಲಿ ಎರಡೂವರೆ ಗಂಟೆಗಳ ಕಾಲ ಇರಲಿದ್ದು, ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್ (ISB)ನ 20ನೇ ವಾರ್ಷಿಕ ದಿನಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ISBನಲ್ಲಿ ಅವರು ಹೈದರಾಬಾದ್ ಮತ್ತು ಮೊಹಾಲಿ ಕ್ಯಾಂಪಸ್‌ಗಳ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮಧ್ಯಾಹ್ನ 3.55ಕ್ಕೆ ಚೆನ್ನೈಗೆ ತೆರಳಲಿದ್ದಾರೆ.

Modi Visit To Hyderabad Tamil Nadu Go Back Modi Trend on Twitter

ತಮಿಳುನಾಡಿನ ಕನ್ಯಾಕುಮಾರಿ ರೈಲ್ವೆ ನಿಲ್ದಾಣದ ಚಿತ್ರವೊಂದನ್ನು ಎಡಿಟ್ ಮಾಡಿ ಗೋ ಬ್ಯಾಕ್‌ ಮೋದಿ, ವಿ ಹೇಟ್‌ ಯು ಎಂದು ಬರೆಯಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಮೇ 26 ರಂದು ಚೆನ್ನೈಗೆ ಭೇಟಿ ನೀಡಲಿದ್ದು, ಅಲ್ಲಿ ಅವರು ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ.

Modi Visit To Hyderabad Tamil Nadu Go Back Modi Trend on Twitter

ಆದಾಗ್ಯೂ ಮೂಲ ಫೋಟೋವು ಕನ್ಯಾಕುಮಾರಿ ರೈಲು ನಿಲ್ದಾಣದಲ್ಲಿ 'ಕನ್ನಿಯಾಕುಮಾರಿ' ಎಂದು ಬರೆಯಲಾದ ಸೈನ್‌ಬೋರ್ಡ್ ಅನ್ನು ತೋರಿಸುತ್ತದೆ. ಇದನ್ನುಗೋ ಬ್ಯಾಕ್‌ ಮೋದಿ ಎಂದು ಬರೆದು ವೈರಲ್ ಚಿತ್ರವನ್ನು ಸಂಪಾದಿಸಲಾಗಿದೆ ಎಂದು ದಿ ಕ್ವಿಂಟ್‌ ವರದಿ ಮಾಡಿದೆ.

ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಬಂದು ತುಮಕೂರಿನ ಸಿದ್ದಗಂಗಾ ಮಠಕ್ಕೆ ತೆರಳಿದ್ದ ವೇಳೆಯೂ ಟ್ವಿಟ್ಟರ್‌ನಲ್ಲಿಗೋ ಬ್ಯಾಕ್‌ ಮೋದಿ ಎಂದು ಟ್ರೆಂಡ್‌ ಆಗಿತ್ತು. ಪ್ರಮುಖವಾಗಿ ನೆರೆ ಪರಿಹಾರದಲ್ಲಿ ವಿಳಂಬ, ಕಳಸಾ ಬಂಡೂರಿ ವಿವಾದ ಹಾಗೂ ಬೆಳಗಾವಿ ಗಡಿ ವಿವಾದ ಸೇರಿದಂತೆ ರಾಜ್ಯ ಎದುರಿಸುತ್ತಿರುವ ವಿವಿಧ ಸಮಸ್ಯೆಗಳಿಗೆ ಕೇಂದ್ರ ಧ್ವನಿಯಾಗದಿರುದಕ್ಕೆಈ ಆಕ್ರೋಶ ಕಾರಣವಾಗಿತ್ತು. ಇದೇ ವೇಳೆ ಕೆಪಿಸಿಸಿ ಕೂಡ ಪ್ರಧಾನಿ ಮೋದಿ ಅವರ ರಾಜ್ಯ ಪ್ರವಾಸವನ್ನು ವಿರೋಧಿಸಿದ್ದು, ತುಮಕೂರಿಗೆ ಭೇಟಿ ನೀಡಿರುವ ಪ್ರಧಾನಿ ಜಿಲ್ಲೆಯ ಅಭಿವೃದ್ಧಿಗಾಗಿ ಈ ಹಿಂದೆ ನೀಡಿದ್ದ ಭರವಸೆಗಳು ಏನಾದವು ಎಂದು ಪ್ರಶ್ನಿಸಿತ್ತು.

ಟ್ವಿಟ್ಟರ್‌ಗಳ ಕೆಲವು ಪ್ರತಿಕ್ರಿಯೆಗಳು ಈ ಕೆಳಗಿನಂತಿವೆ.

English summary
Prime Minister Narendra Modi is scheduled to visit Hyderabad and Tamil Nadu on Thursday. Protest against Modi and go back modi trending on Twitter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X