ಅಕ್ಷರಧಾಮದ ಮೆಟ್ಟಿಲುಗಳ ಮೇಲೆ ಮೋದಿ- ಟರ್ನ್‌ಬುಲ್ ಸಮಾಲೋಚನೆ

By: ಅನುಶಾ ರವಿ
Subscribe to Oneindia Kannada

ದೆಹಲಿ, ಏಪ್ರಿಲ್ 10: ಅತಿಥಿ ಸತ್ಕಾರ ಮಾಡುವುದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರದ್ದು ಎತ್ತಿದ ಕೈ. ಈ ಹಿಂದೆ ಅಮೆರಿಕಾ ಅಧ್ಯಕ್ಷರಾಗಿದ್ದ ಬರಾಕ್ ಒಬಾಮ ಭಾರತಕ್ಕೆ ಬಂದಿದ್ದಾಗ ಟೀ ಪಾರ್ಟಿಯನ್ನು ಮೋದಿ ಆಯೋಜಿಸಿದ್ದರು. ಚೀನಾ ಅಧ್ಯಕ್ಷ ಕ್ಷಿ ಜಿನ್ ಪಿಂಗ್ ಭಾರತ ಪ್ರವಾಸಕ್ಕೆ ಹೊರಟು ಬಂದಾಗ ಸಾಬರಮತಿ ನದಿ ದಂಡೆ ಮುಂದೆ ಅಪೂರ್ಪ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ಬಾರಿಯ ಸರದಿ ಆಸ್ಟ್ರೇಲಿಯಾ ಪ್ರಧಾನಿಯದ್ದು.

ಆಸ್ಟ್ರೇಲಿಯಾ ಪ್ರಧಾನಿ ಮಾಲ್ಕಂ ಟರ್ನ್ ಬುಲ್ ರನ್ನು ಪ್ರಧಾನಿ ಸೋಮವಾರ ಹಲವೆಡೆ ಪ್ರವಾಸ ಕರೆದುಕೊಂಡು ಹೋದರು. ಡೆಲ್ಲಿ ಮೆಟ್ರೋ ಹತ್ತಿದ ಉಭಯ ದೇಶಗಳ ಪ್ರಧಾನ ಮಂತ್ರಿಗಳು ಮೆಟ್ರೋ ರೈಲಲ್ಲಿ ಸುತ್ತಾಡಿ ನಂತರ ಐತಿಹಾಸಿಕ ಅಕ್ಷರಧಾಮ ದೇವಾಲಯಕ್ಕೆ ತೆರಳಿದರು. ಅಲ್ಲಿ ಒಂದಷ್ಟು ಸುತ್ತು ಓಡಾಡಿ ಉಭಯ ಕುಶಲೋಪರಿಗಳನ್ನು ಹಂಚಿಕೊಂಡರು. ಹೀಗೆ ದ್ವಿಪಕ್ಷೀಯ ವಾಣಿಜ್ಯೋದ್ಯಮಕ್ಕೆ ಭಾರತಕ್ಕೆ ಬಂದಿದ್ದ ಟರ್ನ್ ಬುಲ್ ಮತ್ತು ನರೇಂದ್ರ ಮೋದಿ ಸುತ್ತಾಟ ಭರ್ಜರಿಯಾಗಿಯೇ ನಡೆಯಿತು.[ಸಿಬ್ಬಂದಿಗಳಿಗೆ ಸಂಬಳ ನೀಡುವುದರಲ್ಲಿ ಬೆಂಗಳೂರಿಗರೇ ಮುಂದು!]

 ದೆಹಲಿ ಮೆಟ್ರೋದಲ್ಲಿ

ದೆಹಲಿ ಮೆಟ್ರೋದಲ್ಲಿ

ದೆಹಲಿ ಮೆಟ್ರೋದ ನೀಲಿ ಮಾರ್ಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಲ್ಕಂ ಟರ್ನ್ ಬುಲ್ ಪ್ರಯಾಣ ಬೆಳೆಸಿದರು. ಐಶಾರಾಮಿ ಕಾರುಗಳನ್ನು ಬದಿಗೊತ್ತಿ ಇಬ್ಬರೂ ಸಾಮಾನ್ಯ ರೈಲಿನಲ್ಲಿ ಪ್ರಯಾಣಿಸಿದರು.[ದಾನವಾಗಿ ಪಡೆದಿದ್ದ ಹಸುವನ್ನು ಹಿಂದಿರುಗಿಸಿದ ಅಜಂಖಾನ್]

ಆಸ್ಟ್ರೇಲಿಯಾ ಪ್ರಾಧಾನಿಯ ಸೆಲ್ಫೀ

ಮೆಟ್ರೋದಲ್ಲಿ ಉಭಯ ಪ್ರಧಾನಿಗಳು ಪ್ರಯಾಣ ಬೆಳೆಸಿ ಸೆಲ್ಫೀ ತೆಗೆದುಕೊಳ್ಳದಿದ್ದರೆ ಹೇಗೆ? ಆಸ್ಟ್ರೇಲಿಯಾ ಪ್ರಧಾನಿ ಮಾಲ್ಕಂ ಟರ್ನ್ ಬುಲ್ ಫೋನ್ ತೆಗೆದವರೇ ಸೆಲ್ಫೀ ಕ್ಲಿಕ್ಕಿಸಿಯೇ ಬಿಟ್ಟರು. ಸೆಲ್ಫೀ ಕ್ಲಿಕ್ಕಿಸಿದವರೇ ನೇರ ಟ್ವಿಟ್ಟರಿಗೆ ಪೋಸ್ಟ್ ಮಾಡಿದರು. ಎರಡೂ ದೇಶಗಳ ಅಧಿಕಾರಿಗಳೂ ಇದಕ್ಕೆ ಸಾಥ್ ನೀಡಿದರು.

 ಮೆಟ್ರೋದಿಂದ ಅಕ್ಷರಧಾಮಕ್ಕೆ

ಮೆಟ್ರೋದಿಂದ ಅಕ್ಷರಧಾಮಕ್ಕೆ

ಮೆಟ್ರೋ ನೀಲಿ ಪಥದಲ್ಲಿ ಪ್ರಯಾಣಿಸಿದ ಉಭಯ ನಾಯಕರು ಅಕ್ಷರಧಾಮ ದೇವಾಲಯಕ್ಕೆ ತೆರಳಿದರು. ಇಡೀ ಯಾತ್ರೆಯುದ್ದಕ್ಕೂ ಆಸ್ಟ್ರೇಲಿಯ ಪ್ರಧಾನಿಗೆ ಮೋದಿ ಮಾರ್ಗದರ್ಶನ ಮಾಡುತ್ತಲೇ ತೆರಳಿದರು. ರೈಲಿನಿಂದ ಇಳಿಯುತ್ತಿದ್ದಂತೆ ಸಾಧುಗಳು ಉಭಯ ಪ್ರಧಾನಿಗಳು ಹಾರ ಹಾಕಿ ಸ್ವಾಗತಿಸಿದರು. ನರೇಂದ್ರ ಮೋದಿ ದೇವಾಲಯದ ಬಗ್ಗೆ ಟರ್ನ್ ಬುಲ್ ಗೆ ವಿವರಿಸಿದರು.

 ಅಕ್ಷರಧಾಮ ಮೆಟ್ಟಿಲುಗಳ ಮೇಲೆ

ಅಕ್ಷರಧಾಮ ಮೆಟ್ಟಿಲುಗಳ ಮೇಲೆ

ಬಹುಶಃ ಇದೊಂದು ಅಪೂರ್ವ ಸಂದರ್ಭವೇ ಸರಿ. ಅಕ್ಷರಧಾಮ ಮೆಟ್ಟಲಿಗಳ ಮೇಲೆ ಉಭಯ ಪ್ರಧಾನಿಗಳು ಕುಳಿತು ಸಮಾಲೋಚನೆ ನಡೆಸಿದರು.[ದೇಶದೊಳಗಿನ ವಿಮಾನ ಯಾನಕ್ಕೆ ಆಧಾರ್ ಕಡ್ಡಾಯಗೊಳಿಸಲು ಸಿದ್ಧತೆ ]

 ಅಕ್ಷರಧಾಮಕ್ಕೆ ಗಣ್ಯರ ಭೇಟಿ

ಅಕ್ಷರಧಾಮಕ್ಕೆ ಗಣ್ಯರ ಭೇಟಿ

ಸೋಮವಾರ ಅಕ್ಷರಧಾಮಕ್ಕೆ ವಿಶೇಷ ಅತಿಥಿಗಳು ಆಗಮಿಸಿದ್ದರು. ಇಬ್ಬರೂ ಬರಿಗಾಲಿನಲ್ಲಿ ನಿಂತು ದೇವಾಲಯದಲ್ಲಿ ಪೂಜಾ ಕಾರ್ಯಗಳನ್ನು ನೆರವೇರಿಸಿದರು. ಇಲ್ಲಿನ ಮೂರ್ತಿಯೊಂದಕ್ಕೆ ಉಭಯ ನಾಯಕರು ಅಭಿಷೇಕವನ್ನೂ ನೆರವೇರಿಸಿದರು. ಜತೆಗೆ ಇಬ್ಬರೂ ದೇವಸ್ಥಾನಕ್ಕೆ ಒಂದು ಸುತ್ತು ಬಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Prime Minister Narendra Modi for one knows how to play the perfect host. The Indian Prime Minister turned Delhi guide for his Australian counterpart. While it was bilateral business, as usual, Narendra Modi turned on his ever charming host avatar to take the Australian Prime Minister around in Delhi.
Please Wait while comments are loading...