ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂರು ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದ ಮೋದಿ-ಟ್ರಂಪ್

|
Google Oneindia Kannada News

ನವದೆಹಲಿ, ಫೆಬ್ರವರಿ 25: ಭಾರತಕ್ಕೆ ಬಂದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಪ್ರವಾಸದ ಎರಡನೇಯ ದಿನವಾದ ಮಂಗಳವಾರ ಮೂರು ಮಹತ್ವದ ಒಪ್ಪಂದಕ್ಕೆ ಸಹಿ ಮಾಡಿದ್ದಾರೆ.

ಭಾರತವನ್ನು 'ವಿಶ್ವಾಸವಂತ ಗೆಳೆಯ' ಎಂದು ಹಾಡಿಹೊಗಳಿರುವ ಟ್ರಂಪ್ ಭಾರತದೊಂದಿಗೆ ಭದ್ರತೆ, ಸೋಲಾರ್ ಶಕ್ತಿ ಮತ್ತು ವ್ಯಾಪಾರ ಸಂಬಂಧಿ ಒಪ್ಪಂದಕ್ಕೆ ಟ್ರಂಪ್ ಹಾಗೂ ಮೋದಿ ಸಹಿ ಹಾಕಿದ್ದಾರೆ.

Donald Trump India Visit Live: ಮೋದಿ-ಟ್ರಂಪ್ ಜಂಟಿ ಸುದ್ದಿಗೋಷ್ಠಿ ಆರಂಭDonald Trump India Visit Live: ಮೋದಿ-ಟ್ರಂಪ್ ಜಂಟಿ ಸುದ್ದಿಗೋಷ್ಠಿ ಆರಂಭ

''ಎರಡು ದೇಶಗಳ ನಡುವಿನ ರಕ್ಷಣಾ ಸಹಕಾರ ಒಪ್ಪಂದ ಮಾಡಿಕೊಳ್ಳಲಾಗಿದೆ. ಜೊತೆಗೆ ಮಾದಕವಸ್ತು ಕಳ್ಳಸಾಗಣೆಯನ್ನು ಅಂತ್ಯಗಾಣಿಸುವ ನಿಟ್ಟಿನಲ್ಲಿ ಹೊಸ ಒಪ್ಪಂದ ಮಾಡಿಕೊಳ್ಳಲಾಗಿದೆ'' ಎಂದು ಮೋದಿ ಮಂಗಳವಾರ ನಡೆದ ಜಂಟಿ ಸುದ್ದಿಗೋಷ್ಠಿ ಸಮಯ ಹೇಳಿದ್ದಾರೆ.

Modi-Trump Signed Three Important MOUs

ಭಾರತದಲ್ಲಿರುವ ಸಮಯವನ್ನು ಖುಷಿಯಿಂದ ಕಳೆಯುತ್ತಿರುವುದಾಗಿ ಹೇಳಿದ ಟ್ರಂಪ್, ನಿನ್ನೆಯ 'ನಮಸ್ತೆ ಟ್ರಂಪ್' ಕಾರ್ಯಕ್ರಮ ಅಭೂತಪೂರ್ವವಾಗಿತ್ತು ಎಂದಿದ್ದಾರೆ. 'ಜನ ನನ್ನನ್ನು ನೋಡುವುದಕ್ಕಿಂತಲೂ ಹೆಚ್ಚಾಗಿ ನಿಮ್ಮನ್ನು (ಮೋದಿ) ಕಾಣಲು ಬಂದಿದ್ದರು, ಜನರು ನಿಮ್ಮನ್ನು ಪ್ರೀತಿಸುತ್ತಾರೆ' ಎಂದರು.

English summary
Narendra Modi and Donald Trump signed three important MOUs which include defence deal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X