ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಜಯದಶಮಿ ದಿನದಂದು 7 ರಕ್ಷಣಾ ಸಂಸ್ಥೆಗೆ ಮೋದಿಯಿಂದ ಚಾಲನೆ

|
Google Oneindia Kannada News

ನವದೆಹಲಿ, ಅಕ್ಟೋಬರ್ 14: ವಿಜಯದಶಮಿಯ ಪವಿತ್ರ ದಿನದ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, 2021ರ ಅಕ್ಟೋಬರ್ 15ರಂದು ಮಧ್ಯಾಹ್ನ ಸುಮಾರು 12.10ಕ್ಕೆ ರಕ್ಷಣಾ ಸಚಿವಾಲಯ ಆಯೋಜಿಸಿರುವ 7 ಹೊಸ ರಕ್ಷಣಾ ಕಂಪನಿಗಳನ್ನು ರಾಷ್ಟ್ರಕ್ಕೆ ಸಮರ್ಪಿಸುವ ಕಾರ್ಯಕ್ರಮ ಉದ್ದೇಶಿಸಿ ವಿಡಿಯೊ ಭಾಷಣ ಮಾಡಲಿದ್ದಾರೆ.

ರಕ್ಷಣಾ ಸಚಿವರು, ರಕ್ಷಣಾ ಖಾತೆ ಸಹಾಯಕ ಸಚಿವರು ಮತ್ತು ರಕ್ಷಣಾ ಉದ್ಯಮದ ಸಂಸ್ಥೆಗಳ ಪ್ರತಿನಿಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ.

7 ಹೊಸ ರಕ್ಷಣಾ ಕಂಪನಿಗಳ ಕುರಿತು:

ದೇಶದ ರಕ್ಷಣಾ ಸನ್ನದ್ಧತೆಯಲ್ಲಿ ಸ್ವಾವಲಂಬನೆ ಸುಧಾರಿಸುವ ಕ್ರಮವಾಗಿ ಸರ್ಕಾರಿ ಇಲಾಖೆಯಿಂದ ಶಸ್ತ್ರಾಸ್ತ್ರ ಕಾರ್ಖಾನೆ ಮಂಡಳಿಯನ್ನು ಶೇ.100ರಷ್ಟು ಸರ್ಕಾರಿ ಒಡೆತನದ 7 ಕಾರ್ಪೊರೇಟ್ ಸಂಸ್ಥೆಗಳನ್ನಾಗಿ ಪರಿವರ್ತಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದು ಈ ಕ್ರಮವು ಕ್ರಿಯಾತ್ಮಕ ಸ್ವಾಯತ್ತತೆ ವೃದ್ಧಿಸುತ್ತದೆ, ದಕ್ಷತೆಯನ್ನು ತರುತ್ತದೆ ಮತ್ತು ಹೊಸ ಬೆಳವಣಿಗೆಯ ಸಾಮರ್ಥ್ಯ ಮತ್ತು ನಾವೀನತ್ಯೆಯನ್ನು ಹುಟ್ಟು ಹಾಕುತ್ತದೆ.

ಸ್ಥಾಪನೆಯಾಗಿರುವ 7 ಹೊಸ ರಕ್ಷಣಾ ಕಂಪನಿಗಳೆಂದರೆ; ಮುನಿಷನ್ಸ್ ಇಂಡಿಯಾ ಲಿಮಿಟೆಡ್ (ಎಂಐಎಲ್); ಆರ್ಮೊರ್ಡ್ ವೆಹಿಕಲ್ಸ್(ಶಸ್ತ್ರ ಸಜ್ಜಿತ ವಾಹನಗಳು) ನಿಗಮ ಲಿಮಿಟೆಡ್(ಎವಿಎಎನ್ ಐ); ಅಡ್ವಾನ್ಸ್ಡ್ ವೆಪನ್ಸ್ ಅಂಡ್ ಎಕ್ಯೂಪ್ ಮೆಂಟ್ ಇಂಡಿಯಾ ಲಿಮಿಟೆಡ್(ಎಡಬ್ಲ್ಯೂಇ ಇಂಡಿಯಾ); ಟ್ರೂಪ್ ಕಂಫರ್ಟ್ಸ್ ಲಿಮಿಟೆಡ್(ಟಿಸಿಎಲ್); ಯಂತ್ರ ಇಂಡಿಯಾ ಲಿಮಿಟೆಡ್ (ವೈಐಎಲ್); ಇಂಡಿಯಾ ಒಪ್ಟೆಲ್ ಲಿಮಿಟೆಡ್(ಐಒಎಲ್ ) ಮತ್ತು ಗ್ಲೈಡರ್ಸ್ ಇಂಡಿಯಾ ಲಿಮಿಟೆಡ್(ಜಿಐಎಲ್)

Modi to deliver video address in an event to dedicate seven new Defence Companies to the Nation

ಸೌರಾಷ್ಟ್ರದಲ್ಲಿ ಭೂಮಿ ಪೂಜೆ ನೆರವೇರಿಸಲಿರುವ ಪ್ರಧಾನಮಂತ್ರಿ

ಅಕ್ಟೋಬರ್ 15 ರಂದು ಸೂರತ್‌ನಲ್ಲಿ ಸೌರಾಷ್ಟ್ರ ಪಟೇಲ್ ಸೇವಾ ಸಮಾಜದ ವಸತಿ ನಿಲಯ ಹಂತ - 1 ರ ಕಟ್ಟಡಕ್ಕೆ ಭೂಮಿ ಪೂಜೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನೆರವೇರಿಸಲಿದ್ದಾರೆ.

ಸೌರಾಷ್ಟ್ರ ಪಟೇಲ್ ಸೇವಾ ಸಮಾಜದ ವಸತಿ ನಿಲಯ ಹಂತ - 1 ರ ಕಟ್ಟಡದ ಭೂಮಿ ಪೂಜೆ ಕಾರ್ಯಕ್ರಮವು ಅಕ್ಟೋಬರ್ 15 ರಂದು ಬೆಳಿಗ್ಗೆ 11 ಗಂಟೆಗೆ ನಿಗದಿಯಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಪರೆನ್ಸ್ ಮೂಲಕ ಭೂಮಿ ಪೂಜೆ ನೆರವೇರಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಗುಜರಾತ್ ಮುಖ್ಯಮಂತ್ರಿ ಅವರು ಸಹ ಪಾಲ್ಗೊಳ್ಳಲಿದ್ದಾರೆ.

ವಸತಿ ನಿಲಯದ ಕಟ್ಟಡ 1,500 ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ ಒದಗಿಸಲಿದೆ. ವಿದ್ಯಾರ್ಥಿಗಳಿಗಾಗಿಯೇ ಮೀಸಲಾದ ಗ್ರಂಥಾಲಯ ಮತ್ತು ಸಭಾಂಗಣವನ್ನು ಇದು ಒಳಗೊಂಡಿದೆ. ವಸತಿ ನಿಲಯ ಹಂತ - 11 ರ ಕಟ್ಟಡದಲ್ಲಿ 500 ವಿದ್ಯಾರ್ಥಿನೀಯರಿಗೆ ಅವಕಾಶ ಕಲ್ಪಿಸುತ್ತಿದ್ದು, ಇದರ ಕೆಲಸ ಮುಂದಿನ ವರ್ಷ ಕಾರ್ಯಾರಂಭವಾಗಲಿದೆ.

ಸೌರಾಷ್ಟ್ರ ಪಟೇಲ್ ಸೇವಾ ಸಮಾಜ್ ಕುರಿತು:

ಸಮಾಜದಲ್ಲಿನ ದುರ್ಬಲ ವರ್ಗಗಳಿಗೆ ಶಿಕ್ಷಣ ಮತ್ತು ಸಮಾಜಿಕ ಪರಿವರ್ತನೆ ತರುವ ಉದ್ದೇಶದಿಂದ 1983 ರಲ್ಲಿ ಈ ಸಂಸ್ಥೆ ಸ್ಥಾಪನೆಯಾಗಿದ್ದು, ಇದು ನೋಂದಾಯಿತ ಟ್ರಸ್ಟ್ ಆಗಿದೆ. ವಿದ್ಯಾರ್ಥಿಗಳನ್ನು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಜ್ಜುಗೊಳಿಸಲು ಇಲ್ಲಿ ನೆರವು ದೊರೆಯುತ್ತಿದೆ ಮತ್ತು ಕೌಶಲ್ಯ ಅಭಿವೃದ್ಧಿ ಪಡೆಯಲು ಮತ್ತು ಉದ್ಯಮಶೀಲರಾಗಲು ಸಹ ಇದು ವೇದಿಕೆಯಾಗಿದೆ. (ಪ್ರಧಾನಿ ಸಚಿವಾಲಯ)

English summary
On the auspicious occasion of Vijayadashami, Prime Minister Narendra Modi will deliver video address in an event organized by the Defence Ministry, to dedicate the seven new Defence Companies to the Nation, on 15th October, 2021
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X