ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೋಟ್ ಬ್ಯಾನ್ ಬೆಂಬಲಿಸಿದವರಿಗೆ ವಂದನೆ ಸಲ್ಲಿಸಿದ ಮೋದಿ

By Manjunatha
|
Google Oneindia Kannada News

ನವೆಂಬರ್ 08 : ನೋಟ್ ಬ್ಯಾನ್ ಮಾಡಿ ವರ್ಷವಾದ ಹಿನ್ನೆಲೆಯಲ್ಲಿ ಈ ಮಹತ್ತರವಾದ ನಿರ್ಧಾರಕ್ಕೆ ಬೆಂಬಲ ಸೂಚಿಸಿದ ಜನತೆಗೆ ಮೋದಿ ಸರಣಿ ಟ್ವೀಟ್ ಮಾಡಿ ವಂದನೆ ಸಲ್ಲಿಸಿದ್ದಾರೆ.

ಅಪನಗದೀಕರಣದ ಸಕಾರಾತ್ಮಕ ಸಂಗತಿಗಳುಅಪನಗದೀಕರಣದ ಸಕಾರಾತ್ಮಕ ಸಂಗತಿಗಳು

ಬುಧವಾರ (ನಂವೆಂಬರ್ ೦8) ಬೆಳಿಗ್ಗೆ ಮೊದಲು ಬಿಜೆಪಿ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಹುಟ್ಟುಹಬ್ಬ ಶುಭಾಷಯ ಕೋರಿದ ಮೋದಿ ನಂತರ ಸರಣಿ ಟ್ವೀಟ್ ಮಾಡುವ ಮೂಲಕ ಅಪನಗದೀಕರಣ ಬೆಂಬಲಿಸಿದ ಜನತೆಗೆ ವಂದನೆಗಳನ್ನು ತಿಳಿಸಿದ್ದಾರೆ.

Modi Thanks people for supporting Demonatisation

ಮೊದಲ ಟ್ವೀಟ್ ನಲ್ಲಿ "125 ಕೋಟಿ ಭಾರತೀಯರು ನಿರ್ಣಾಯಕವಾದ ಹೋರಾಟದಲ್ಲಿ ಪಾಲ್ಗೊಂಡು ವಿಜಯ ಸಾಧಿಸಿದ್ದಾರೆ' ಎಂದು ಹೇಳಿದ್ದಾರೆ. ಜೊತೆಗೆ ನೋಟ್ ಬ್ಯಾನ್ ನಿಂದ ಆದ ಅನುಕೂಲಗಳ ಪಟ್ಟಿಯ ಚಿತ್ರವನ್ನು ಅದರ ಜೊತೆ ಪ್ರಕಟಿಸಿದ್ದಾರೆ.

ಮೋದಿ ತಮ್ಮ ಎರಡನೇ ಟ್ವೀಟ್ ನಲ್ಲಿ ಅಪನಗದೀಕರಣದ ಕುರಿತಾದ 7:13 ನಿಮಿಷದ ಕಿರುಚಿತ್ರವೊಂದನ್ನು ಹಂಚಿಕೊಂಡು, ಅಪನಗದೀಕರಣದಿಂದಾದ ಲಾಭಗಳ ಪಟ್ಟಿ ಇಲ್ಲಿದೆ ನೋಡಿ ಎಂದು ಬರೆದುಕೊಂಡಿದ್ದಾರೆ.

ತಮ್ಮ ಮೂರನೇ ಟ್ವೀಟ್ ನಲ್ಲಿ ಭ್ರಷ್ಟಾಚಾರ ಮತ್ತು ಕಪ್ಪುಹಣದ ವಿರುದ್ಧ ಮಾಡಿದ ಪ್ರಯತ್ನದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಎನ್.ಎಂ (ನರೇಂದ್ರ ಮೋದಿ) ಆಪ್ ನಲ್ಲಿ ತಿಳಿಸಿ ಎನ್ನುವ ಮೂಲಕ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಣೆಗೆ ಮೋದಿ ಮುಂದಾಗಿದ್ದಾರೆ.

ಅಪನಗದೀಕರಣಕ್ಕೆ ಒಂದು ವರ್ಷ: ಮೋದಿ ಮೇಲೆ ವ್ಯಂಗ್ಯೋಕ್ತಿಯ ಪ್ರಹಾರಅಪನಗದೀಕರಣಕ್ಕೆ ಒಂದು ವರ್ಷ: ಮೋದಿ ಮೇಲೆ ವ್ಯಂಗ್ಯೋಕ್ತಿಯ ಪ್ರಹಾರ

ಅಪನಗದೀಕರಣದ ಬಗ್ಗೆ ಸಾರ್ವಜನಿಕರು ತಮ್ಮ ಅಭಿಪ್ರಾಯವನ್ನು nm4.in/dnldapp ಇಲ್ಲಿ ನೀಡಬಹುದಾಗಿದೆ.

ಮೋದಿ ಅವರ ಟ್ವೀಟ್ ಗಳಿಗೆ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ, ಸಾವಿರಾರು ಲೈಕ್ ಗಳು ಕಮೆಂಟುಗಳು ಹರಿದುಬಂದಿವೆ. ಕೆಲವರು ಮೋದಿ ಅವರ ನಿರ್ಧಾರವನ್ನು ಬೆಂಬಲಿಸಿ ಕಮೆಂಟ್ ಮಾಡಿದ್ದರೆ ಹಲವರು ಟೀಕಿಸಿ ಅಭಿಪ್ರಾಯ ಪ್ರಕಟಿಸಿದ್ದಾರೆ.

English summary
in a series of tweets Narendra Modi thanks people for supporting the Brave decision of Demonatisation. he also uploded a short video witch showing Benifits of Demonatisation, and in a another tweet Modi asked people to give opinion about demonatisation in NM app.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X