ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೇತಾಜಿ ಜನ್ಮದಿನ: ಶೌರ್ಯದ ಪ್ರತಿರೂಪಕ್ಕೆ ಗಣ್ಯರ ನಮನ

|
Google Oneindia Kannada News

ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಅಗ್ರಸ್ಥಾನ ಪಡೆದಿದ್ದ ನೇತಾಜಿ ಸುಭಾಶ್ ಚಂದ್ರ ಬೋಸ್ ಅವರ 121ನೇ ಜನ್ಮದಿನ ಇಂದು(ಜ.23).

ತಮ್ಮ ಶೌರ್ಯ ಮತ್ತು ಅಪ್ರತಿಮ ದೇಶಭಕ್ತಿಯ ಮೂಲಕ ಭಾರತೀಯ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿರುವ ಬೋಸ್ ಅವರಿಗೆ ಪ್ರಧಾನಿ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಶುಭ ಹಾರೈಸಿದ್ದಾರೆ.

ನೇತಾಜಿ ಸಾವಿನ ನಿಗೂಢತೆಗೆ ಇನ್ನೂ ಅಂತ್ಯ ಸಿಕ್ಕಿಲ್ಲ! ನೇತಾಜಿ ಸಾವಿನ ನಿಗೂಢತೆಗೆ ಇನ್ನೂ ಅಂತ್ಯ ಸಿಕ್ಕಿಲ್ಲ!

ಒಡಿಶಾದ ಕಟಕ್ ನಲ್ಲಿ 1897 ರ ಜನವರಿ 23 ರಂದು ಜನಿಸಿದ ಸುಭಾಷ್ ಚಂದ್ರ ಬೋಸ್ ಅವರ ತಂದೆ ಜಾನಕೀನಾಥ್ ಬೋಸ್, ತಾಯಿ ಪ್ರಭಾವತಿ. ತತ್ವಶಾಸ್ತ್ರ ಪದವಿ(1919), ಇಂಗ್ಲೆಂಡ್ ನಿಂದ ಐಸಿಎಸ್ ಪದವಿ(1920) ಪಡೆದ ಬೋಸ್ 1921 ರಲ್ಲಿ ಭಾರತಕ್ಕೆ ಮರಳಿ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗಿಯಾದ ಬೋಸ್ ಗೆ ಮಂದಗಾಮಿ ಚಿಂತನೆಯಲ್ಲಿ ನಂಬಿಕೆ ಇರಲಿಲ್ಲ. ಅವರದೇನಿದ್ದರೂ ಹೋರಾಟದ ಹಾದಿ. ಅದಕ್ಕೆಂದೇ ಇಂಡಿಯನ್ ನ್ಯಾಶನಲ್ ಆರ್ಮಿ(ಐಎನ್ ಎ) ಸ್ಥಾಪಿಸಿ, ಆ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ಬಲನೀಡಿದರು.

ವಿಮಾನ ಅಪಘಾತದಲ್ಲಿ ನೇತಾಜಿ ಸತ್ತಿಲ್ಲ- ಫ್ರಾನ್ಸ್ ಗುಪ್ತಚರ ವರದಿವಿಮಾನ ಅಪಘಾತದಲ್ಲಿ ನೇತಾಜಿ ಸತ್ತಿಲ್ಲ- ಫ್ರಾನ್ಸ್ ಗುಪ್ತಚರ ವರದಿ

1945 ಆಗಸ್ಟ್ 18 ರಂದು ತೈವಾನ್ ನಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ನೇತಾಜಿ ಅಸುನೀಗಿದರು ಎಂಬ ಸುದ್ದಿಯನ್ನು ಇಂದಿಗೂ ಭಾರತೀಯರಿಗೆ ಅರಗಿಸಿಕೊಳ್ಳುವುದು ಕಷ್ಟವೆನ್ನಿಸಿದೆ.

ಅವರ ಶೌರ್ಯ ನಮ್ಮ ಹೆಮ್ಮೆಯ

ತಮ್ಮ ಅಪ್ರತಿಮ ಶೌರ್ಯದ ಮೂಲಕ ನೇತಾಜಿ ಸುಭಾಶ್ ಚಂದ್ರ ಬೋಸ್ ಅವರು ಭಾರತೀಯರ ಹೆಮ್ಮೆ ಎನ್ನಿಸಿದ್ದಾರೆ. ಅವರ ಜಯಂತಿಯಂದು ನಾವು ಅವರಿಗೆ ತಲೆಬಾಗೋಣ ಎಂದು ವಿಡಿಯೋ ದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

ಅವರ ದೇಶಭಕ್ತಿಗೆ ನಮ್ಮ ನಮನ

ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿ ನೇತಾಜಿ ಸುಭಾಶ್ ಚಂದ್ರ ಬೋಸ್ ಅವರು ತೋರಿದ ಶೌರ್ಯವನ್ನು ಭಾರತೀಯರು ಎಂದಿಗೂ ಮರೆಯುವುದಿಲ್ಲ. ಅವರ ಜನ್ಮದಿನದಂದು ಅವರ ದೇಶಭಕ್ತಿಗೆ ನಮ್ಮ ನಮನ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಯುವಕರಿಗೆ ಆದರ್ಶ

ನೇತಾಜಿ ಸುಭಾಶ್ ಚಂದ್ರ ಬೋಸ್ ಅವರ ಜಯಂತಿಯಂದು, ಅವರಿಗೆ ನನ್ನ ವಿಧೇಯ ನಮನಗಳು. ಅವರ ಧೈರ್ಯ, ಶೌರ್ಯ ಮತ್ತು ಆದರ್ಶಗಳು ಎಂದಿಗೂ ಮುಂದಿನ ತಲೆಮಾರುಗಳಿಗೆ ಸ್ಫೂರ್ತಿ ನೀಡಲಿ ಎಂದು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ.

ಭಾರತದ ಧೈರ್ಯವಂತ ಪುತ್ರನಿಗೆ ನಮನ

ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ಕೊಡಿಸುತ್ತೇನೆ ಎಂದು ಶೌರ್ಯದಿಂದ ಹೇಳಿದ, ಭಾರತದ ಧೈರ್ಯವಂತ ಪುತ್ರರಲ್ಲೊಬ್ಬರಾದ ನೇತಾಜಿ ಅವರ ಜನ್ಮದಿನಕ್ಕೆ ಅವರಿಗೆ ನಮನಗಳು ಎಂದು ಟ್ವೀಟ್ ಮಾಡಿದ್ದಾರೆ ಮಾಜಿ ಕ್ರಿಕೆಟಿಗ ಮೊಹ್ಮದ್ ಕೈಫ್.

ಭಾರತದ ಹೆಮ್ಮೆಯ ಪುತ್ರನಿಗೆ ತಲೆಬಾಗುತ್ತೇನೆ

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದಂದು, ಭಾರತದ ಹೆಮ್ಮೆಯ ಪುತ್ರನಿಗೆ ತಾನು ತಲೆಬಾಗುತ್ತೇನೆ. ನೇತಾಜಿ ಅವರ ಧಅಯರ್ಯ, ಶೌರ್ಯಗಳು ಮುಂದಿನ ತಲೆಮಾರುಗಳಿಗೆ ಪ್ರೇರಣೆಯಾಗಲಿ ಎಂದಿದ್ದಾರೆ ಬಿಜೆಬಿ ಕರ್ನಾಟಕ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ.

English summary
Leaders including prime minister Narendra Modi, Karnataka chief minister Siddaramiah, pay their respectful tribute on twitter to Indian freedom fighter Netaji Subhash Chandra Bose(23 January 1897 – 18 August 1945) on his 121st birth anniversary.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X