ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

150ಕ್ಕೂ ಹೆಚ್ಚು ಸಮಾವೇಶಗಳಲ್ಲಿ ಮತ ಯಾಚಿಸಲಿದ್ದಾರೆ ಮೋದಿ-ಶಾ-ಯೋಗಿ

|
Google Oneindia Kannada News

ನವದೆಹಲಿ, ಮಾರ್ಚ್ 26: ಪ್ರಸ್ತುತ ಸನ್ನಿವೇಶದಲ್ಲಿ ನರೇಂದ್ರ ಮೋದಿ ಅವರೇ ಬಿಜೆಪಿಯ ಮುಖ ಆಗಿದ್ದು, ಅವರೊಟ್ಟಿಗೆ ಅಮಿತ್ ಶಾ ಸಹ ಬಿಜೆಪಿಯ ತಾರಾ ಮುಖವಾಗಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ದೇಶದಲ್ಲಿ ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಇವರಿಬ್ಬರನ್ನೇ, ವಿಶೇಷವಾಗಿ ಮೋದಿ ಅವರನ್ನು ಬಿಜೆಪಿಯು ನೆಚ್ಚಿಕೊಂಡಿದ್ದು, ಈ ಇಬ್ಬರು ನಾಯಕರ ಹೆಚ್ಚು-ಹೆಚ್ಚು ಸಮಾವೇಶಗಳನ್ನು ಆಯೋಜಿಸುವ ಮೂಲಕ ಭರ್ಜರಿ ಪ್ರಚಾರದ ತಂತ್ರವನ್ನು ಬಿಜೆಪಿ ಮಾಡಿದೆ.

ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ಮೇ 19ರ ಕೊನೆಯ ಹಂತದ ಮತದಾನದ ವೇಳೆಗೆ ದೇಶದಾದ್ಯಂತ 150 ಕ್ಕೂ ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಬಿಜೆಪಿಗಾಗಿ ಮತ ಕೇಳಲಿದ್ದಾರೆ.

Modi-Shah-Yogi will address more than 150 campaign rally

ಬಿಡುವಿಲ್ಲದ ಪ್ರಚಾರ ಕಾರ್ಯಕ್ರಮವನ್ನು ಇವರಿಬ್ಬರ ಹೆಗಲ ಮೇಲೆ ಬಿಜೆಪಿಯು ಹೊರಿಸಿದ್ದು, ಶಾ ಅವರಿಗಿಂತಲೂ ಮೋದಿ ಅವರು ಹೆಚ್ಚಿನ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಇವರಿಬ್ಬರ ಜೊತೆಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರಿಗೂ ಪ್ರಚಾರದ ಬಹುಪಾಲು ಜವಾಬ್ದಾರಿ ಹೊರಿಸಲಾಗಿದೆ.

ನರೇಂದ್ರ ಮೋದಿ, ಅಮಿತ್ ಶಾ ಮತ್ತು ಯೋಗಿ ಆದಿತ್ಯನಾಥ ಅವರುಗಳೇ ಬಿಜೆಪಿಯ ಮತಗಳಿಸುವ ಮುಖಗಳು ಎನ್ನಲಾಗುತ್ತಿದ್ದು, ಮತ್ಯಾಯ ನಾಯಕರೂ ಸಹ ಭಾರಿ ಪ್ರಮಾಣದಲ್ಲಿ ಮತದಾರರನ್ನು ಸೆಳೆಯುವ ತೇಜಸ್ಸು ಹೊಂದಿಲ್ಲ ಹಾಗಾಗಿ ಇವರು ಮೂವರನ್ನು ಕೇಂದ್ರೀಕರಿಸಿಯೆ ಪ್ರಚಾರ ಕಾರ್ಯಕ್ರಮವನ್ನು ವಿನ್ಯಾಸ ಮಾಡಲಾಗಿದೆ.

ಏಳು ಹಂತದಲ್ಲಿ ಚುನಾವಣೆ ನಡೆಯುತ್ತಿರುವ ಕಾರಣ ಮೋದಿ, ಶಾ, ಯೋಗಿ ಅವರಿಗೆ ದೇಶದಾದ್ಯಂತ ಪ್ರಚಾರ ಮಾಡಲು೯ ಸಹ ಸಾಕಷ್ಟು ಸಮಯ ಸಿಗಲಿದೆ.

English summary
Narendra Modi, Amit Shah, Yogi Adithyanath will attend more than 150 election campaign rally. BJP designed its campaign program keeping three leaders in the center. Modi will address more rallies than any leader in BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X