ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾಗತಿಕ ಸಮಸ್ಯೆ ಎದುರಿಸಲು ಐರೋಪ್ಯ ಒಕ್ಕೂಟದ ಸಹಾಯ ಕೇಳಿದ ಮೋದಿ

|
Google Oneindia Kannada News

ನವದೆಹಲಿ, ಜುಲೈ 15: ಕೊವಿಡ್ 19 ಸೇರಿದಂತೆ ಜಾಗತಿಕ ಸಮಸ್ಯೆಗಳ ವಿರುದ್ಧ ಹೋರಾಟಕ್ಕೆ ಪ್ರಜಾತಂತ್ರ ರಾಷ್ಟ್ರಗಳೆಲ್ಲವೂ ಒಟ್ಟಾಗಿ ಶ್ರಮಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

Recommended Video

Dhoni ಜೊತೆ ಆಡೋದು ತುಂಬಾ ಖುಷಿ ಕೊಡುತ್ತೆ ಎಂದ Pant | Oneindia Kannada

ಭಾರತ-ಇಯು ಸಮಿತ್‌ ಉದ್ದೇಶಿಸಿ ಮಾತನಾಡಿದ ಅವರು, ಭಾರತ ಮತ್ತು ಯುರೋಪ್ ಸಂಬಂಧ ವೃದ್ಧಿಗೆ ಕಾಯಂ ವ್ಯವಸ್ಥೆ ಆಗಬೇಕಿದೆ.ಈಗಿರುವ ಕೊರೊನಾದಂತಹ ಸಮಸ್ಯೆಗಳನ್ನು ಮಟ್ಟ ಹಾಕಲು ಎಲ್ಲಾ ರಾಷ್ಟ್ರಗಳು ಒಂದಾಗಬೇಕು, ಪರಿಹಾರ ಕಂಡುಕೊಳ್ಳಬೇಕೆಂದರು.

Modi Seeks European Union Help To Fight Against Global Issues

ಮಾನವ ಕೇಂದ್ರಿತ ಆರ್ಥಿಕತೆ ಮರು ನಿರ್ಮಾಣಕ್ಕೆ ಭಾರತ ಮತ್ತು ಐರೋಪ್ಯ ಒಕ್ಕೂಟ ಒಟ್ಟಾಗಿ ಹೋರಾಡಬೇಕಿದೆ. ಭಾರತಕ್ಕೆ ಐರೋಪ್ಯ ತಂತ್ರಜ್ಞಾನ ಆಧಾರಿತ ಉದ್ಯಮಗಳನ್ನು ಭಾರತಕ್ಕೆ ಆಹ್ವಾನಿಸುತ್ತೇನೆ ಎಂದು ಹೇಳಿದರು.ಭಾರತ ಹಾಗೂ ಯುರೋಪಿಯನ್ ಒಕ್ಕೂಟದ ನಡುವೆ ಸಹಜ ಪಾಲುದಾರಿಗೆ ಇದೆ.

ಕೊರೊನಾ ಸೋಂಕು ಆರಂಭವಾದ ದಿನದಿಂದ ಜಗತ್ತಿನಲ್ಲಿ ಹೊಸ ಸಮಸ್ಯೆಗಳು ಉದ್ಭವವಾಗಿವೆ. ಆರ್ಥಿಕತೆಯನ್ನು ಸದೃಢಗೊಳಿಸಲು ಭಾರತ-ಯುರೋಪ್ ಒಂದಾಗಬೇಕು.

ವಿಶ್ವದಲ್ಲಿ ಹವಾಮಾನ ಬದಲಾವಣೆಯಂತಹ ಸಾಕಷ್ಟು ದೀರ್ಘಕಾಲದ ಸಮಸ್ಯೆಗಳಿವೆ ಅದರ ವಿರುದ್ಧ ಹೋರಾಡಬೇಕು.

ಹಾಗೆಯೇ ಯುರೋಪ್ ರಾಷ್ಟ್ರಗಳ ಬಂಡವಾಳ ಹೂಡಿಕೆ, ಆಧುನಿಕ ತಂತ್ರಜ್ಞಾನಕ್ಕೆ ಎಂದಿಗೂ ಭಾರತದ ಬಾಗಿಲು ತೆರೆದಿದೆ ಎಂದರು.

English summary
Prime Minister Narendra Modi attended Virtual meeting of India-EU summit. In the meeting Modi Seeks European Union Help To Fight Against Global Issues
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X