• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೋದಿ ಮನ್ ಕೀ ಬಾತ್ ನಲ್ಲಿ ಸರ್ದಾರ್ ಪಟೇಲ್, ಬಿಷ್ಣೋಯ್ ಸಮುದಾಯ ಉಲ್ಲೇಖ

|

ನವದೆಹಲಿ, ಅಕ್ಟೋಬರ್ 28: ಪ್ರತಿ ತಿಂಗಳು ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಿಕೊಡುವ ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ಅಕ್ಟೋಬರ್ 28ರಂದು ಏನು ಹೇಳಿದರು ಎಂಬ ಪ್ರಮುಖಾಂಶಗಳು ಇಲ್ಲಿವೆ.

* ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕುತ್ತಿರುವ ಭಾರತದ ಬುಡಕಟ್ಟು ಹಾಗೂ ಸ್ಥಳೀಯರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. "ರಾಜಸ್ತಾನ ಮರುಭೂಮಿಯ ಬಿಷ್ಣೋಯ್ ಸಮುದಾಯವು ಪ್ರಕೃತಿ ರಕ್ಷಣೆ ಮಾಡುವುದು ಹೇಗೆಂದು ನಮಗೆ ತೋರಿಸಿದೆ. ವಿಶೇಷವಾಗಿ ಮರ ಉಳಿಸುವ ವಿಚಾರವಾಗಿ, ತಮ್ಮ ಬದುಕನ್ನು ಕೆಳ ಮಟ್ಟದಲ್ಲೇ ಸಾಗಿಸಿದರೂ ಒಂದೇ ಒಂದು ಮರಕ್ಕೆ ಹಾನಿಯಾಗುವುದನ್ನು ಅವರು ಸಹಿಸುವುದಿಲ್ಲ" ಎಂದು ಮೋದಿ ಹೇಳಿದರು.

ಮನ್ ಕಿ ಬಾತ್ ಮೂಲಕ ದೇಶವನ್ನು ಉದ್ದೇಶಿಸಿ ಮೋದಿ ಭಾಷಣ

* ಅಕ್ಟೋಬರ್ 31ರಂದು ಸರ್ದಾರ್ ವಲ್ಲಭ ಭಾಯ್ ಜನ್ಮ ವರ್ಷಾಚರಣೆ. ಪ್ರತಿ ವರ್ಷ ನಡೆಸುವಂತೆ ನಮ್ಮ ದೇಶದ ಯುವ ಜನರು 'ಏಕತೆಗಾಗಿ ಓಟ'ಕ್ಕೆ ಸಿದ್ಧರಾಗಿ. ನಿಮ್ಮಲ್ಲಿ ಎಲ್ಲರೂ ಅದರಲ್ಲಿ ಭಾಗವಹಿಸಿ ಎಂದು ಮನವಿ ಮಾಡುತ್ತೇನೆ.

* ಈ ವರ್ಷದ ಸರ್ದಾರ್ ಪಟೇಲ್ ಜಯಂತಿ ಮತ್ತೂ ವಿಶೇಷವಾಗಿರುತ್ತದೆ. ಏಕತೆಯ ವಿಗ್ರಹವನ್ನು ಪಟೇಲ್ ಗೌರವಾರ್ಥವಾಗಿ ಲೋಕಾರ್ಪಣೆಗೊಳಿಸಲಾಗುತ್ತದೆ. ಇದು ನರ್ಮದಾ ನದಿಯ ದಂಡೆಯಲ್ಲಿದೆ. ಅಮೆರಿಕದಲ್ಲಿ ಇರುವ ಬಹು ಪ್ರಸಿದ್ಧ ಸ್ವಾತಂತ್ರ್ಯ ಪ್ರತಿಮೆಯ ಎರಡರಷ್ಟು ಎತ್ತರವಿದೆ.

ನಾರಿಶಕ್ತಿ, ವಿಜ್ಞಾನ ಶಕ್ತಿ, ಸಹಕಾರದ ಬಗ್ಗೆ ಮೋದಿ ಮನದ ಮಾತು

* ಜಕಾರ್ತದಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ನ್ ನ ಪ್ಯಾರಾ ಅಥ್ಲೀಟ್ಸ್ ನ ಭೇಟಿಯಾಗಲು ಅವಕಾಶ ಸಿಕ್ಕಿದ್ದು ಬಹಳ ಖುಷಿಯಾಯಿತು. ಎಲ್ಲ ಪ್ರತಿಕೂಲ ಸ್ಥಿತಿಯನ್ನು ಗೆದ್ದು ಬರುವ ಅವರ ಚೈತನ್ಯ ಸ್ಫೂರ್ತಿದಾಯಕವಾದದ್ದು. ಎಪ್ಪತ್ತೆರಡು ಪದಕಗಳನ್ನು ಗೆಲ್ಲುವ ಊಲಕ ಭಾರತ ಹೊಸ ದಾಖಲೆ ಸೃಷ್ಟಿಸಿತು.

ಈ ಹಿಂದಿನ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಜಾಗತಿಕ ಶಾಂತಿಯ ಬಗ್ಗೆ ಒತ್ತು ನೀಡಿ ಮಾತನಾಡಿದ್ದರು. ಶಾಂತಿ ಸ್ಥಾಪನೆಗೆ ಭಾರತ ಎಂಥ ಕಾರ್ಯಕ್ಕೂ ಸಿದ್ಧ. ಆದರೆ ದೇಶದ ಸ್ವಾಭಿಮಾನ ಹಾಗೂ ಘನತೆಯನ್ನು ಬಿಟ್ಟುಕೊಟ್ಟು ಏನನ್ನೂ ಮಾಡಲ್ಲ. ವಿಶ್ವಸಂಸ್ಥೆಯ ಶಾಂತಿ ಪಡೆಗೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಕಳುಹಿಸಿಕೊಡುವುದರಲ್ಲಿ ಭಾರತದ ಕೊಡುಗೆ ಕೂಡ ಹೆಚ್ಚಿನದು ಎಂದು ನೆನಪಿಸಿಕೊಂಡಿದ್ದರು.

English summary
Mann Ki Baat: PM Modi hailed India's tribal and indigenous people for their sustainable lifestyle in harmony with nature.The Bishnoi community in the desert land of Rajasthan has shown us a way of environment protection. Specially, in context of serving trees, said Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X