• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

8 ವರ್ಷ ಪೂರೈಸಿದ ಎನ್‌ಡಿಎ ಸರ್ಕಾರ: ಪಕ್ಷದವರಿಗೆ ಮೋದಿ ಸಂದೇಶ

|
Google Oneindia Kannada News

ಜೈಪುರ ಮೇ 20: ಎನ್‌ಡಿಎ ಸರ್ಕಾರ ಈ ತಿಂಗಳಿಗೆ 8 ವರ್ಷಗಳನ್ನು ಪೂರೈಸುತ್ತದೆ. ಈ ಎಂಟು ವರ್ಷಗಳು ಸಂಕಲ್ಪಗಳು ಮತ್ತು ಸಾಧನೆಗಳಿಂದ ಕೂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಎಂಟು ವರ್ಷಗಳನ್ನು ದೇಶದ ಸಮತೋಲಿತ ಅಭಿವೃದ್ಧಿ, ಸಾಮಾಜಿಕ ನ್ಯಾಯ ಮತ್ತು ಸಾಮಾಜಿಕ ಭದ್ರತೆಗೆ ಮೀಸಲಿಡಲಾಗಿದೆ. ಜೊತೆಗೆ ಸರ್ಕಾರದ ವಿತರಣಾ ಕಾರ್ಯವಿಧಾನದಲ್ಲಿ ಜನರ ನಂಬಿಕೆಯನ್ನು 2014ರ ನಂತರ ಪುನಃಸ್ಥಾಪಿಸಲಾಗಿದೆ ಎಂದು ಹೇಳಿದರು.

ಜೈಪುರದಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಬಿಜೆಪಿಯ ರಾಷ್ಟ್ರೀಯ ಪದಾಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಯಾವುದೇ ಬಡವರು, ಅರ್ಹ ಫಲಾನುಭವಿಗಳು ಸರ್ಕಾರದ ಕಲ್ಯಾಣ ಕ್ರಮಗಳಿಂದ ಹೊರಗುಳಿಯದಂತೆ ಪ್ರಚಾರವನ್ನು ಪ್ರಾರಂಭಿಸುವಂತೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರನ್ನು ಕೇಳಿದರು. "ಈ ತಿಂಗಳು, ಎನ್‌ಡಿಎ ಸರ್ಕಾರ ಎಂಟು ವರ್ಷಗಳನ್ನು ಪೂರೈಸುತ್ತದೆ. ಈ ಎಂಟು ವರ್ಷಗಳು ಸಂಕಲ್ಪಗಳು ಮತ್ತು ಸಾಧನೆಗಳಿಂದ ಕೂಡಿದೆ. ಈ ಎಂಟು ವರ್ಷಗಳು ಸೇವೆ, ಉತ್ತಮ ಆಡಳಿತ ಮತ್ತು ಬಡವರ ಕಲ್ಯಾಣಕ್ಕೆ ಬದ್ಧವಾಗಿದೆ" ಎಂದು ಅವರು ಹೇಳಿದರು.

'ಮಹಿಳಾ ಮತ್ತು ಮಕ್ಕಳ ಸಬಲೀಕರಣಕ್ಕೆ ಪಕ್ಷ ಮೀಸಲು'ಮೋದಿ

'ಮಹಿಳಾ ಮತ್ತು ಮಕ್ಕಳ ಸಬಲೀಕರಣಕ್ಕೆ ಪಕ್ಷ ಮೀಸಲು'ಮೋದಿ

ಸಣ್ಣ ರೈತರು, ಕಾರ್ಮಿಕರು ಮತ್ತು ಮಧ್ಯಮ ವರ್ಗದವರ ನಿರೀಕ್ಷೆಗಳನ್ನು ಎಂಟು ವರ್ಷಗಳಿಂದ ಈಡೇರಿಸಲಾಗಿದೆ. ಜೊತೆಗೆ ಈ ಎಂಟು ವರ್ಷಗಳು ದೇಶದ ಸಮತೋಲಿತ ಅಭಿವೃದ್ಧಿ, ಸಾಮಾಜಿಕ ನ್ಯಾಯ ಮತ್ತು ಸಾಮಾಜಿಕ ಭದ್ರತೆಯಾಗಿದೆ. ಮಾತ್ರವಲ್ಲದೆ ಈ ಎಂಟು ವರ್ಷಗಳು ತಾಯಂದಿರು, ಹೆಣ್ಣು ಮಕ್ಕಳು ಮತ್ತು ಸಹೋದರಿಯರ ಸಬಲೀಕರಣಕ್ಕೆ ಮೀಸಲಾಗಿವೆ ಎಂದು ಅವರು ಹೇಳಿದರು.

'ಬಿಜೆಪಿ ಮೇಲೆ ಅಪಾರ ನಂಬಿಕೆ'

'ಬಿಜೆಪಿ ಮೇಲೆ ಅಪಾರ ನಂಬಿಕೆ'

2014ರ ನಂತರದ ಬಿಜೆಪಿ ಸರ್ಕಾರ ಅದರ ವ್ಯವಸ್ಥೆಗಳು ಮತ್ತು ಅದರ ವಿತರಣಾ ಕಾರ್ಯವಿಧಾನದ ಮೇಲಿನ ಜನರ ನಂಬಿಕೆಯನ್ನು ಮರುಸ್ಥಾಪಿಸಿದೆ. ಜಗತ್ತು ಇಂದು ಭಾರತದತ್ತ ಹೆಚ್ಚಿನ ನಿರೀಕ್ಷೆಯಿಂದ ನೋಡುತ್ತಿದೆ. ಅದೇ ರೀತಿ ಭಾರತದಲ್ಲಿಯೂ ಬಿಜೆಪಿ ಬಗ್ಗೆ ಜನತೆಗೆ ವಿಶೇಷ ಒಲವಿದೆ. ದೇಶದ ಜನತೆ ಬಿಜೆಪಿಯನ್ನು ಅಪಾರ ನಂಬಿಕೆ ಮತ್ತು ಭರವಸೆಯಿಂದ ನೋಡುತ್ತಿದ್ದಾರೆ ಎಂದು ಮೋದಿ ಹೇಳಿದರು.

ಬಿಜೆಪಿಗೆ ಹೆಚ್ಚಾದ ಜವಬ್ದಾರಿ

ಬಿಜೆಪಿಗೆ ಹೆಚ್ಚಾದ ಜವಬ್ದಾರಿ

2014ರ ನಂತರ ಬಿಜೆಪಿ ಜನರನ್ನು ಹತಾಶೆಯಿಂದ ಹೊರತಂದಿದೆ ಮತ್ತು ಇಂದು ಜನರು ಆಕಾಂಕ್ಷೆಗಳಿಂದ ತುಂಬಿದ್ದಾರೆ. ದೇಶದ ಜನರ ಈ ಭರವಸೆ ಮತ್ತು ಆಕಾಂಕ್ಷೆಗಳು ನಮ್ಮ ಜವಾಬ್ದಾರಿಯನ್ನು ಹೆಚ್ಚಿಸುತ್ತವೆ ಎಂದು ಅವರು ಬಿಜೆಪಿ ಪದಾಧಿಕಾರಿಗಳಿಗೆ ಹೇಳಿದರು. ಸ್ವಾತಂತ್ರ್ಯದ 75ನೇ ವರ್ಷದಲ್ಲಿ ದೇಶವು ಮುಂದಿನ 25 ವರ್ಷಗಳ ಗುರಿಗಳನ್ನು ಹೊಂದಿಸುತ್ತಿದೆ, ಮುಂದಿನ 25 ವರ್ಷಗಳ ಗುರಿಗಳನ್ನು ನಿಗದಿಪಡಿಸಲು ಮತ್ತು ಅದಕ್ಕಾಗಿ ನಿರಂತರವಾಗಿ ಕೆಲಸ ಮಾಡಲು ಬಿಜೆಪಿಗೆ ಇದು ಸಮಯ ಎಂದು ಅವರು ಹೇಳಿದರು.

ಪಕ್ಷದ ಕಾರ್ಯಕರ್ತರಿಗೆ ಮೋದಿ ಸಂದೇಶ

ಪಕ್ಷದ ಕಾರ್ಯಕರ್ತರಿಗೆ ಮೋದಿ ಸಂದೇಶ

ಕೆಲವು ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥಕ್ಕಾಗಿ ವಿಷವನ್ನು ಹಾಕಲು ಉದ್ವಿಗ್ನತೆಯ ಸಣ್ಣ ಘಟನೆಗಳನ್ನು ಹುಡುಕುತ್ತಲೇ ಇರುತ್ತವೆ ಎಂದು ವಿರೋಧ ಪಕ್ಷಗಳ ವಿರುದ್ಧ ಪ್ರಧಾನಿ ಮೋದಿ ಕಿಡಿಕಾರಿದರು. ದೇಶದ ಅಭಿವೃದ್ಧಿ ವಿಚಾರಗಳಿಂದ ನಿಮ್ಮನ್ನು ದೂರವಿಡಲು ಪ್ರಯತ್ನಿಸಲಾಗುವುದು ಆದರೆ ನೀವು ಅದಕ್ಕೆ ತಲೆಕೆಡಿಸಿಕೊಳ್ಳಬಾರು ಎಂದು ಅವರು ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರಿಗೆ ಹೇಳಿದರು.

ನರೇಂದ್ರ ಮೋದಿ
Know all about
ನರೇಂದ್ರ ಮೋದಿ
English summary
NDA Government Completes 8 Years This Month PM's has given Message To Partymen.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X