ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ-ಪ್ರಿಯಾಂಕಾ- ದೂರ'ದರ್ಶನ' ಏನಿದು ರಗಳೆ?

By Mahesh
|
Google Oneindia Kannada News

ಬೆಂಗಳೂರು, ಮೇ.2: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ದೂರದರ್ಶನ ಸುದ್ದಿ ವಾಹಿನಿಗೆ ಸಂದರ್ಶನ ನೀಡಿದ್ದಕ್ಕಿಂತ ಅವರು ಸಂದರ್ಶನದ ವೇಳೆ ಹೇಳಿದ್ದಾರೆ ಎನ್ನಲಾದ ಒಂದು ಮಾತು ಭಾರಿ ಚರ್ಚೆಗೊಳಗಾಗಿದೆ. ಈ ಬಗ್ಗೆ ಮೋದಿ ಅವರು ಸ್ಪಷ್ಟನೆ ನೀಡಿಯಾಗಿದೆ. ಪ್ರಿಯಾಂಕಾ ವಾಧ್ರಾ ಕೂಡಾ ಪ್ರತಿಕ್ರಿಯಿಸಿದ್ದಾರೆ. ಅಸಲಿಗೆ ವಿಡಿಯೋದಲ್ಲಿ ಏನಿದೆ? ಯಾಕಿಷ್ಟು ರಗಳೆ ? ಮುಂದೆ ಓದಿ...

'ಪ್ರಿಯಾಂಕಾ ಗಾಂಧಿ ನನ್ನ ಮಗಳಿದ್ದಂತೆ' ಎಂದು ಬಿಜೆಪಿಯ ವಾರಣಾಸಿ ಅಭ್ಯರ್ಥಿ ನರೇಂದ್ರ ಮೋದಿ ಅವರು ದೂರದರ್ಶನಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ ಎಂಬ ಸುದ್ದಿ ಹಬ್ಬುತ್ತಿದ್ದಂತೆ ಇತರೆ ಮಾಧ್ಯಮಗಳು ಅಮೇಥಿಯಲ್ಲಿದ್ದ ಪ್ರಿಯಾಂಕಾ ಗಾಂಧಿಗೆ ಮುತ್ತಿಗೆ ಹಾಕಿದವು. 'ಮೇಡಂ, ಮೋದಿ ಹೇಳಿಕೆಗೆ ನಿಮ್ಮ ಪ್ರತಿಕ್ರಿಯೆ ಏನು?' ಎಂದು ಪ್ರಶ್ನೆ ಎಸೆಯಲಾಯಿತು.

ಇದಕ್ಕೆ ಪ್ರತಿಕ್ರಿಯಿಸಿದ್ದ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಪುತ್ರಿ ಪ್ರಿಯಾಂಕಾ ಗಾಂಧಿ 'ನಾನು ರಾಜೀವ್ ಗಾಂಧಿಯ ಪುತ್ರಿಯೇ'. ಯಾರೊಬ್ಬರೂ ಅವರ ಸಮಕ್ಕೆ ನಿಲ್ಲಲು ಸಾಧ್ಯವಿಲ್ಲ ಎಂದಿದ್ದರು. ಹಾಗಾದರೆ, ಮೋದಿ ಹೇಳಿಕೆ ಏನಿತ್ತು? ಪ್ರಿಯಾಂಕಾ ಗಾಂಧಿ ಅವರಿಂದ ಉಗ್ರ ಪ್ರತಿಕ್ರಿಯೆ ಪಡೆಯಲು ರಾಷ್ಟ್ರೀಯ ಮಾಧ್ಯಮಗಳು ನಡೆಸಿದ ವಿಫಲ ಯತ್ನವೇ? ಅಸಲಿಗೆ ವಿಡಿಯೋದಲ್ಲಿ ಮೋದಿ ಹೇಳಿದ ಮಾತುಗಳನ್ನು ಎಡಿಟ್ ಮಾಡಲಾಗಿದೆ? ಉತ್ತರ ಮುಂದಿದೆ.

ಅಮೇಥಿಯಲ್ಲಿ ಪ್ರಿಯಾಂಕಾ ನೀಡಿದ ಉತ್ತರ

ಅಮೇಥಿಯಲ್ಲಿ ಪ್ರಿಯಾಂಕಾ ನೀಡಿದ ಉತ್ತರ

'ನಾನು ರಾಜೀವ್ ಗಾಂಧಿಯ ಪುತ್ರಿಯೇ'. ಯಾರೊಬ್ಬರೂ ಅವರ ಸಮಕ್ಕೆ ನಿಲ್ಲಲು ಸಾಧ್ಯವಿಲ್ಲ ಎಂದು ಅಮೇಥಿಯಲ್ಲಿ ಪ್ರಿಯಾಂಕಾ ಗಾಂಧಿ ಪ್ರತಿಕ್ರಿಯೆ ನೀಡಿದ್ದರು.

ಮೋದಿ ಹೇಳಿಕೆಗೆ ಪ್ರತಿಕ್ತಿಯಿಸಿದ್ದ ವಿತ್ತ ಸಚಿವ ಚಿದಂಬರಂ, ಮೋದಿ ಪ್ರಿಯಾಂಕಾರನ್ನು ತನ್ನ ಪುತ್ರಿಯಂತೆ ಪರಿಗಣಿಸಿರುವುದಕ್ಕೆ ಖುಷಿಯಾಗಿದೆ. ಆದರೆ, ಮೋದಿಯನ್ನು ಪ್ರಿಯಾಂಕಾ ತಂದೆಯಂತೆ ಪರಿಗಣಿಸಲು ಇಷ್ಟಪಡುತ್ತಾರೋ, ಇಲ್ಲವೋ ಎಂದಿದ್ದರು.

ಸಂದರ್ಶನದ ವೇಳೆಯಲ್ಲಿ ಪ್ರಿಯಾಂಕಾ ಬಗ್ಗೆ ಮೋದಿ

ಸಂದರ್ಶನದ ವೇಳೆಯಲ್ಲಿ ಪ್ರಿಯಾಂಕಾ ಬಗ್ಗೆ ಮೋದಿ

'ಯಾವುದೇ ಒಬ್ಬ ಮಗಳು ತನ್ನ ಸೋದರನ ವಿಜಯಕ್ಕಾಗಿ, ತಾಯಿಯ ವಿಜಯಕ್ಕಾಗಿ ಎಲ್ಲವನ್ನು ಮಾಡಬೇಕಾಗುತ್ತದೆ. ನಾನು ಇದನ್ನು ಒಪ್ಪುತ್ತಾ, ಇಷ್ಟಾದರೂ ಅವರಿಗೆ ನಾವು ಅವಕಾಶ ನೀಡಬೇಕಾಗುತ್ತದೆ. ಮಗಳು ಎಂದಿದ್ದರು ಮಗಳೆ ಅಲ್ಲವೆ.. ತಾಯಿ ಹಾಗೂ ಸೋದರನಿಗಾಗಿ ಅಲ್ಲದೆ ಇನ್ಯಾರ ಪರ ನಿಲ್ಲಲು ಸಾಧ್ಯ? ಮಗಳ ಸ್ಥಾನದಲ್ಲಿ ನಿಂತು ಆಕೆ ಮಾಡುವ ಕಾರ್ಯವನ್ನು ನಾನು ಕೆಟ್ಟದಾಗಿ ಕಾಣುವುದಿಲ್ಲ. ತಾಯಿಯ ಋಣ ತೀರಿಸುವುದು ಆಕೆ ಹಕ್ಕು. ಈ ಪ್ರಕ್ರಿಯೆಯಲ್ಲಿ ಆಕೆಯಿಂದ ಹತ್ತಾರು ಬೈಗುಳಗಳನ್ನು ತಿನ್ನಬೇಕಾದರೂ ಮಗಳು ಎಂದಿದ್ದರೂ ಮಗಳೇ ಎಂಬ ಭಾವದಿಂದ ನಾನು ಎಂದಿಗೂ ಕೋಪಗೊಳ್ಳುವುದಿಲ್ಲ '

ದೂರದರ್ಶನಕ್ಕೆ ಮೋದಿ ನೀಡಿದ ಸಂದರ್ಶನ

ದೂರದರ್ಶನಕ್ಕೆ ಮೋದಿ ನೀಡಿದ ಸಂದರ್ಶನದ ವಿಡಿಯೋ ಇಲ್ಲಿದೆ

ಎಡಿಟ್ ಮಾಡಿದ ಮೇಲೆ ಮೋದಿ ವೆಬ್ ಸೈಟ್ ನಲ್ಲಿ

ಎಡಿಟ್ ಮಾಡಿದ ಮೇಲೆ ಮೋದಿ ವೆಬ್ ಸೈಟ್ ನಲ್ಲಿ ಕಾಣಿಸಿಕೊಂಡ ವಿಡಿಯೋ. ಈ ವಿಡಿಯೋದಲ್ಲಿ 5:10 to 6:06 ಅವಧಿಯ ಮಾತುಗಳನ್ನು ಕೇಳಿಸಿಕೊಳ್ಳಿ

English summary
There has been much speculative reportage about Doordarshan editing out Narendra Modi’s purported comment 'Priyanka is like my daughter'. News channels sent their crews to chase Priyanka Vadra campaigning in Amethi for her brother Rahul Gandhi, and plead with her for a retort reports Niticentral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X