ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಮಹತ್ವದ ಸಭೆ; ಶೀಘ್ರವೇ ಬರಲಿದೆ ಡ್ರೋನ್ ಪಾಲಿಸಿ

|
Google Oneindia Kannada News

ನವದೆಹಲಿ, ಜೂನ್ 29; ನರೇಂದ್ರ ಮೋದಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಜೊತೆ ಮಂಗಳವಾರ ಮಹತ್ವದ ಸಭೆ ನಡೆಸಿದರು.

ಮಂಗಳವಾರ ಮೋದಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ದೇಶದ ರಕ್ಷಣಾ ಕ್ಷೇತ್ರದ ವಿಚಾರವಾಗಿ ಚರ್ಚೆ ನಡೆಸಲಾಗಿದೆ. ಭಾರತ ತನ್ನದೇ ಆದ ಡ್ರೋನ್ ಹಾರಾಟದ ಬಗ್ಗೆ ನಿಯಮಗಳನ್ನು ರೂಪಿಸಲಿದೆ.

ಜಮ್ಮು ಐಎಎಫ್ ಕೇಂದ್ರಕ್ಕೆ ನುಗ್ಗಿದ ಉಗ್ರರ ಡ್ರೋನ್: ತಪ್ಪು ಆಗಿದ್ದು ಎಲ್ಲಿ? ಜಮ್ಮು ಐಎಎಫ್ ಕೇಂದ್ರಕ್ಕೆ ನುಗ್ಗಿದ ಉಗ್ರರ ಡ್ರೋನ್: ತಪ್ಪು ಆಗಿದ್ದು ಎಲ್ಲಿ?

ರಕ್ಷಣಾ ಸಚಿವರು, ಗೃಹ ಸಚಿವರ ಜೊತೆ ಡ್ರೋನ್ ಹಾರಾಟಕ್ಕೆ ನಿಯಮಗಳನ್ನು ರೂಪಿಸುವ ಬಗ್ಗೆ ಮೋದಿ ಚರ್ಚೆ ನಡೆಸಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಜಮ್ಮು ವಿಮಾನ ನಿಲ್ದಾಣದಲ್ಲಿ ಸ್ಫೋಟಕ್ಕೆ ಡ್ರೋನ್ ಬಳಕೆ ಹಿಂದೆ ಪಾಕ್ ಪಿತೂರಿ!? ಜಮ್ಮು ವಿಮಾನ ನಿಲ್ದಾಣದಲ್ಲಿ ಸ್ಫೋಟಕ್ಕೆ ಡ್ರೋನ್ ಬಳಕೆ ಹಿಂದೆ ಪಾಕ್ ಪಿತೂರಿ!?

Modi Meeting India Will Have Drone Policy Soon

ಭಾನುವಾರ ಮುಂಜಾನೆ ಡ್ರೋನ್ ಮೂಲಕ ಜಮ್ಮು ವಿಮಾನ ನಿಲ್ದಾಣದ ಮೇಲೆ ಸ್ಪೋಟಕಗಳ ಮೂಲಕ ದಾಳಿ ಮಾಡಲಾಗಿದೆ. ಒಟ್ಟು ಎರಡು ಬಾರಿ ದಾಳಿ ನಡೆದಿದ್ದು, ಈ ಘಟನೆ ಬಳಿಕ ಡ್ರೋನ್ ಹಾರಾಟಕ್ಕೆ ನಿಯಮ ರೂಪಿಸುವ ಬಗ್ಗೆ ಕೇಂದ್ರ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಿದೆ.

 ಶೀಘ್ರವೇ ಕೊರೊನಾ ಲಸಿಕೆ ಸಾಗಣೆಗೆ ಡ್ರೋನ್ ಬಳಕೆ ಶೀಘ್ರವೇ ಕೊರೊನಾ ಲಸಿಕೆ ಸಾಗಣೆಗೆ ಡ್ರೋನ್ ಬಳಕೆ

ಜಮ್ಮು ವಿಮಾನ ನಿಲ್ದಾಣ ವಾಯುಸೇನೆಯ ಹಿಡಿತದಲ್ಲಿದೆ. ಅಲ್ಲಿಂದಲೇ ಪ್ರಯಾಣಿಕ ವಿಮಾನಗಳು ಸಹ ಸಂಚಾರ ನಡೆಸುತ್ತವೆ. ಪಾಕಿಸ್ತಾನದ ಉಗ್ರ ಸಂಘಟನೆಗಳು ಡ್ರೋನ್ ಮೂಲಕ ಸ್ಫೋಟಕಗಳನ್ನು ವಿಮಾನ ನಿಲ್ದಾಣದೊಳಕ್ಕೆ ತಂದು ಎಸೆದಿದ್ದವು.

ಭಾನುವಾರ ತಡರಾತ್ರಿ ಜಮ್ಮು ವಿಮಾನ ನಿಲ್ದಾಣದಲ್ಲಿ ನಡೆದ ಸ್ಫೋಟ ಪ್ರಕರಣದ ತನಿಖೆಯನ್ನು ಈಗಾಗಲೇ ಎನ್‌ಐಎಗೆ ವಹಿಸಲಾಗಿದೆ. ಒಟ್ಟು 2 ಬಾಂಬ್‌ಗಳನ್ನು ನಿಲ್ದಾಣದೊಳಗೆ ಎಸೆಯಲಾಗಿತ್ತು. ಸ್ಫೋಟದಿಂದ ಇಬ್ಬರಿಗೆ ಚಿಕ್ಕಪುಟ್ಟ ಗಾಯಗಳಾಗಿತ್ತು.

ಡ್ರೋನ್ ನಿಲ್ದಾಣದೊಳಗೆ ಬಂದಿದ್ದು ಎಲ್ಲಿಂದ ಎಂದು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ರಾತ್ರಿಯ ವೇಳೆ ಡ್ರೋನ್‌ಗಳನ್ನು ಹಾರಿಸಿ ಭದ್ರತಾ ಪಡೆಗಳ ದಿಕ್ಕು ತಪ್ಪಿಸಲು ಸಹ ಪ್ರಯತ್ನ ನಡೆಸಲಾಗಿದೆ.

ಜಮ್ಮು ವಿಮಾನ ನಿಲ್ದಾಣದಿಂದ ಭಾರತ-ಪಾಕಿಸ್ತಾನದ ಗಡಿ 14 ಕಿ. ಮೀ. ದೂರದಲ್ಲಿದೆ. ಸ್ಪೋಟ ಪ್ರಕರಣದ ತನಿಖೆ ನಡೆಸುತ್ತಿರುವ ಎನ್‌ಐಎ ಡ್ರೋನ್ ಹಾರಿ ಬಂದಿದ್ದು ಎಲ್ಲಿಂದ ಎಂದು ಪರಿಶೀಲನೆ ಮುಂದುವರೆಸಿದೆ.

English summary
Prime minister Narendra Modi meeting with home minister Amit Shah, defence minister Rajnath Singh and national security advisor Ajit Doval. India may come up with drone policy very soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X