ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಮನ್‌ಕಿ ಬಾತ್: 2.5ಲಕ್ಷ ಮಂದಿಯಿಂದ ಡಿಸ್‌ಲೈಕ್

|
Google Oneindia Kannada News

ನವದೆಹಲಿ, ಆಗಸ್ಟ್ 31: ನರೇಂದ್ರ ಮೋದಿಯವರ 'ಮನ್‌ಕಿ ಬಾತ್' ರೇಡಿಯೋ ಕಾರ್ಯಕ್ರಮವನ್ನು 2.5 ಲಕ್ಷಕ್ಕೂ ಹೆಚ್ಚು ಮಂದಿ ಡಿಸ್‌ಲೈಕ್ ಮಾಡಿದ್ದಾರೆ.

ಮನ್‌ಕಿ ಬಾತ್ ಕಾರ್ಯಕ್ರಮವನ್ನು 28 ಸಾವಿರ ಮಂದಿ ಲೈಕ್ ಮಾಡಿದ್ದು, 2.5 ಲಕ್ಷ ಮಂದಿ ಡಿಸ್‌ಲೈಕ್ ಮಾಡಿದ್ದಾರೆ.

'ಮನ್ ಕೀ ಬಾತ್' ನಲ್ಲಿ ಚನ್ನಪಟ್ಟಣ ಗೊಂಬೆಗಳ ಬಗ್ಗೆ ಪ್ರಧಾನಿ ಮೋದಿ ಮಾತು'ಮನ್ ಕೀ ಬಾತ್' ನಲ್ಲಿ ಚನ್ನಪಟ್ಟಣ ಗೊಂಬೆಗಳ ಬಗ್ಗೆ ಪ್ರಧಾನಿ ಮೋದಿ ಮಾತು

ಬಿಜೆಪಿಯ ಯೂಟ್ಯೂಬ್ ಚಾನೆಲ್‌ನಲ್ಲಿ 10 ಲಕ್ಷ ಮಂದಿ ಕಾರ್ಯಕ್ರಮವನ್ನು ವೀಕ್ಷಿಸಿದ್ದರು. 3.5 ಮಿಲಿಯನ್ ಸಬ್‌ಸ್ಕ್ರೈಬರ್ ಇದ್ದಾರೆ. ಸಾಕಷ್ಟು ಮಂದಿ ಯೂಸರ್‌ಗಳು ಕಾಮೆಂಟ್ ಸೆಕ್ಷನ್‌ನಲ್ಲಿ ಕಾಮೆಂಟ್ ಮಾಡಿದ್ದಾರೆ. ಬಹಳ ಮಂದಿ ಪರೀಕ್ಷೆಯ ಕುರಿತು ಬರೆದಿದ್ದಾರೆ.

Modi Mann Ki Baat: Video Gets More Than 2.5 Lakh Dislikes On Youtube

ಈ ಕೊರೊನಾ ಭೀತಿ ನಡುವೆ ನೀಟ್ ಜೆಇಇ ಪರೀಕ್ಷೆ ನಡೆಸುವುದು ಬೇಡ ಎನ್ನುವ ವಿರೋಧ ಕೇಳಿಬರುತ್ತಿದೆ. ಈ ಕುರಿತು ರಾಹುಲ್ ಗಾಂಧಿ ಕೂಡ ಮಾತನಾಡಿದ್ದು, ಮೋದಿಯವರ ಬಳಿ ಪರೀಕ್ಷೆಯ ಕುರಿತು ಚರ್ಚೆಗೆ ಬನ್ನಿ ಎಂದರೆ ಆಟಿಕೆಗಳ ಕುರಿತು ಚರ್ಚೆ ಮಾಡುತ್ತಾರೆ ಎಂದು ವ್ಯಂಗ್ಯವಾಡಿದ್ದರು.

ಕಾಮೆಂಟ್ ಸೆಕ್ಷನ್ ಕೇವಲ ಶಿಕ್ಷಣ, ಪರೀಕ್ಷೆಯ ಕುರಿತೇ ತುಂಬಿ ಹೋಗಿದೆ. ಅವರಿಗೆ ಮತ ಹಾಕಿದ್ದಕ್ಕಾಗಿ ನಮ್ಮ ಮೇಲೆಯೇ ನಮಗೆ ಕೋಪ ಬರುತ್ತಿದೆ, ನಾವು ಇಲ್ಲಿಯವರೆಗೂ ಕಂಡಿರದ ಕೆಟ್ಟ ಪ್ರಧಾನಿ ಇವರು ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.

ಪ್ರಧಾನಿ ಮೋದಿ ಭಾಷಣದ ಪ್ರಮುಖ ಅಂಶಗಳು:

-ಕೊರೊನಾ ವೈರಸ್ ಹಾವಳಿಯ ವಿರುದ್ಧ ನಾವು ಸರಿಯಾದ ಮಾರ್ಗದಲ್ಲಿ ಹೋರಾಟ ನಡೆಸುತ್ತಿದ್ದೇವೆ.
-ಈ ಹೋರಾಟದಲ್ಲಿ ದೇಶ ತೋರುತ್ತಿರುವ ಸಂಯಮ ನಿಜಕ್ಕೂ ಶ್ಲಾಘನೀಯ.
-ಪ್ರಕೃತಿಯ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು, ಭವಿಷ್ಯದ ಪೀಳಿಗೆಗೆ ಉತ್ತಮ ಹವಾಮಾನ ಒದಗಿಸುವುದು ನಮ್ಮ ಜವಾಬ್ದಾರಿಯೂ ಹೌದು.
-ಕೃಷಿ ಉತ್ಪನ್ನಗಳ ಶೇಕಡಾವಾರು ವೃದ್ಧಿ ನಿಜಕ್ಕೂ ಸಂತಸದ ಸಂಗತಿ ಎಂದ ಪ್ರಧಾನಿ ಮೋದಿ.
-ಭಾರತೀಯ ಮಕ್ಕಳಿಗೆ ದೇಶೀಯವಾಗಿ ಉತ್ಪಾದಿಸಿದ ಆಟಿಕೆಗಳನ್ನು ಒದಗಿಸುವುದು ನಮ್ಮ ಸರ್ಕಾರದ ಗುರಿಯಾಗಿದೆ.
-ಜಾಗತಿಕ ಆಟಿಕೆ ವ್ಯವಹಾರ ಸುಮಾರು 7 ಲಕ್ಷ ಕೋಟಿ ರೂ.ಗಳಾಗಿದ್ದು, ಇದರಲ್ಲಿ ಭಾರತದ ಪಾಲು ತುಂಬ ಕಡಿಮೆ ಇದೆ.
- ಹೀಗಾಗಿ ಆಟಿಕೆ ಉದ್ಯಮಕ್ಕೆ ಹೊಸ ರೂಪ ನೀಡಲು ನಮ್ಮ ಸರ್ಕಾರ ಯೋಜನೆ ರೂಪಿಸಲಿದೆ.
-ಪ್ರಕೃತಿ ಪೂರಕ ಆಟಿಕೆ ಸಾಮಾನುಗಳನ್ನು ತಯಾರಿಸುವುದು ನಮ್ಮ ಗುರಿಯಾಗಬೇಕು ಎಂದ ಪ್ರಧಾನಿ.
- ಕರ್ನಾಟಕದ ಚೆನ್ನಪಟ್ಟಣ, ಆಂಧ್ರದ ಕೊಂಡಪಲ್ಲಿ, ತಮಿಳುಣಾಡಿನ ತಂಜಾವೂರು ಆಟಿಕೆ ಸಾಮಾನುಗಳು ಜಗತ್ಪ್ರಸಿದ್ಧವಾಗಿದ್ದು, ಇವುಗಳನ್ನು ಜಾಗತಿಕ ವೇದಿಕೆಗೆ ಕೊಂಡೊಯ್ಯಬೇಕಿದೆ.

English summary
Prime Minister Narendra Modi's 'Mann Ki Baat' dislike spree that began after JEE and NEET topics were skipped in his address. Presently, lakhs of YouTube users have disliked the video uploaded by various YouTube channels and the dislikes are still increasing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X